ಉಗುರಿನಿಂದ ಹಗುರವಾಗಬೇಡಿ...

First Published Jun 14, 2018, 1:57 PM IST
Highlights

ನೀಳವಾದ ಬೆರಳುಗಳಿಗೆ ಉದ್ದುದ್ದ ಉಗುರುಗಳಿದ್ದು, ಅದನ್ನು ಚೆಂದವಾಗಿ ಮೆಂಟೇನ್ ಮಾಡಿದ ಕೈಗಳ ನೋಡಿದರೆ,  ವಾವ್ ಎಂದೆನಿಸುತ್ತದೆ. ಆದರೆ, ಎಲ್ಲರಿಗೂ ಇಂಥದ್ದೊಂದು ಶೇಪ್ ಇರುವ ಉಗುರುಗಳನ್ನು ಬೆಳೆಸುವುದು ಅಸಾಧ್ಯ. ಆದರೂ, ಟ್ರೈ ಮಾಡ್ಲಿಕ್ಕೇನು? ಇಲ್ಲಿವೆ ಸಿಂಪಲ್ ಟಿಪ್ಸ್.

  • ಆಗಾಗ ಮೆನಿಕ್ಯೂರ್ ಮಾಡಿಸಿ, ಬಣ್ಣ ಹಚ್ಚಿಕೊಳ್ಳಿ.
  • ಅಪ್ಪಿತಪ್ಪಿಯೂ ಉಗುರು ಕಚ್ಚುವ ಅಭ್ಯಾಸವನ್ನಿಟ್ಟುಕೊಳ್ಳಬೇಡಿ.
  • ಸಾಬೂನು ಬಳಸಿ ಅಥವಾ ಇತರೆ ರಾಸಾಯನಿಕಗಳನ್ನು ಬಳಸುವಾಗ ತಪ್ಪದೇ ಗ್ಲೌಸ್ ಧರಿಸಿ.
  • ಉಗುರು ಕಟ್ ಮಾಡಿಕೊಳ್ಳುವಾಗ ನೀರಿನಲ್ಲಿ ತುಸು ಕಾಲ ನೆನೆಸಿಟ್ಟು, ಕಟ್ ಮಾಡಿಕೊಳ್ಳಿ. ಆಗ ಹಸಿ ಉಗುರು ಕಟ್ ಆಗುವುದು ತಪ್ಪುತ್ತದೆ. 
  • ಪದೇ ಪದೇ ರಿಮೂವರ್‌ನಿಂದ ಪಾಲಿಶ್ ಅಳಿಸಿಕೊಂಡು, ಹೊಸ ನೇಲ್ ಪಾಲಿಶ್ ಹಚ್ಚಿಕೊಳ್ಳಬೇಡಿ. ನೈಸರ್ಗಿಕವಾಗಿಯೇ ಉಗುರಿನ ಸೌಂದರ್ಯ ಕಾಪಾಡುವ ಕಡೆ ಗಮನವಿರಲಿ. 
  • ಯುವಿ ಅಥವಾ ಎಲ್ಇಡಿ ಕಿರಣಗಳಿಂದ ಉಗರನ್ನು ರಕ್ಷಿಸಿಕೊಳ್ಳಲು, ಸನ್ ಸ್ಕ್ರೀನ್ ಲೋಷನ್ ಬಳಸಿ. 
  • ಉಗುರು ಹೊಳಪು ಮತ್ತು ಆರೋಗ್ಯಕ್ಕಾಗಿ ಆಗಾಗ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.
click me!