ಸಾಮಾನ್ಯವಾಗಿ ಬ್ರೇಕ್‌ಅಪ್ ಆದರೆ ಒಬ್ಬರನ್ನೊಬ್ಬರು ಮರೆಯಲು ಹರಸಾಹಸ ಪಡುತ್ತಾರೆ. ಮೊದಲ ಲವ್, ಮೊದಲ ಕ್ರಷ್ ಸದಾ ನೆನಪಲ್ಲಿ ಉಳಿಯುತ್ತೆ. ಜೀವನ ಪರ್ಯಂತ ಪಾಸ್‌ವರ್ಡ್ ರೂಪದಲ್ಲಾದರೂ ನೆನಪಾಗುತ್ತಾರೆ. ಆದರೆ ಆ ಹಳೇ ಲವ್‌ನೊಂದಿಗೆ ನೇರ ಸಂಪರ್ಕವನ್ನಿಟ್ಟು ಕೊಳ್ಳುವುದು ಎಷ್ಟು ಸರಿ?
ಅವನ(ಳ)ದ್ದೇ ಧ್ಯಾನ. ಮದುವೆಯಾಗಿ ಹೊಸ ಬದುಕು ಆರಂಭವಾಗಿದೆ. ಮನೆಯಲ್ಲಿ ಅತ್ತೆ-ಮಾವ ಇರೋ ತುಂಬು ಕುಟುಂಬ. ಹೊಸ ಜವಾಬ್ದಾರಿ, ಹೊಸ ಮನೆ. ಆದರೆ, ಮನಸ್ಸಿನ್ನೂ ಅವನಲ್ಲೇ. ಕೈಯಲ್ಲಿ ಫೋನ್ ಹಿಡಿದಾಗಲೆಲ್ಲಾ ಅವನದ್ದೇ ಧ್ಯಾನ. ಅವನ ಡಿಪಿ, ಸ್ಟೇಟಸ್ ನೋಡಿದರೆ ಮನಸ್ಸಿಗೆ ಸಮಾಧಾನ. ಮನದ ಧಾವಂತ, ಆಸೆ, ಆಕಾಂಕ್ಷೆಗಳನ್ನು ಅವನೊಂದಿಗೆ ಶೇರ್ ಮಾಡಿಕೊಳ್ಳುವ ಆಸೆ.
ಅಷ್ಟಕ್ಕೂ ಹೊಸ ಬದುಕು ಆರಂಭವಾದ ಮೇಲೆ ಹಳೇ ಸಂಬಂಧವನ್ನು ನೆನಪಿಸಿಕೊಂಡು ಕೊರಗುವುದರಲ್ಲಿ ಅರ್ಥವಿದೆಯಾ? ಭಾವನಾತ್ಮಕವಾಗಿ ಎಕ್ಸ್ ಬಾಯ್ ಫ್ರೆಂಡ್‌ನೊಂದಿಗೆ (ಎಕ್ಸ್ ಗರ್ಲ್ ಫ್ರೆಂಡ್‌ನೊಂದಿಗೂ ಆಗಿರಬಹುದು) ಬಂಧವನ್ನು ಮುಂದುವರಿಸುವುದು ಬೇಕಾ? ಅಕಸ್ಮಾತ್ ಅಂಥದ್ದೊಂದು ಬಾಂಧವ್ಯಕ್ಕೆ ನಿಮ್ಮ ಮನಸ್ಸು ಹಾತೊರೆಯುತ್ತಿದೆ ಎನ್ನುವುದಾದರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು...