ಮೆಗಾ ಧಾರಾವಾಹಿ ಎಂಬ ಮುಗಿಯದ ಗೋಳು. ಗೊಳೋ ಎಂದು ಅಳುವ ಪಾತ್ರಧಾರಿಗಳು. ಅದನ್ನೇ ಬಾಯಿ ಬಿಟ್ಕೊಂಡು ನೋಡೋ ಹೆಂಗಳೆಯರು. ಸಾಲದ್ದಕ್ಕೆ ಆ ಪಾತ್ರಧಾರಿಗಳ ದುಃಖದಲ್ಲಿಯೂ ಭಾಗಿಯಾಗೋ ಮಹಿಳಾ ಮಣಿಗಳು....ಅಷ್ಟಕ್ಕೂ ಸೀರಿಯಲ್ ನೋಡ್ತಾ ಅತ್ತರೆ ತಪ್ಪಾ?
ಒಂದು ದಿನ ಧಾರಾವಾಹಿ ನೋಡುವುದು ತಪ್ಪಿದರೂ, ಅಯ್ಯೊ ಮಿಸ್ ಆಯ್ತ, ಏನಪ್ಪ ಮಾಡುವುದು ಎಂದು ಚಿಂತಿಸುತ್ತಾರೆ ಮಂದಿ. ಅದರಲ್ಲಿಯೂ ಹೆಂಗಳೆಯರು ಏನೋ ಜೀವನದಲ್ಲಿ ದೊಡ್ಡದ್ದನ್ನು ಕಳೆದುಕೊಂಡಂತೆ ಗೋಳಿಡುತ್ತಾರೆ. ಕೆಲವರಂತೂ ತಮ್ಮ ನೆಚ್ಚಿನ ನಟ-ನಟಿ ಅತ್ತರೆ ತಾವೂ ಅತ್ತು ಬಿಡುತ್ತಾರೆ. ಅವರನ್ನು ನೋಡುವರಿಗೆ ಎನಪ್ಪಾ ಇದು ಹುಚ್ಚುತನ ಎನಿಸುತ್ತದೆ.
ಹಾಗಾದರೆ ಅಳುವುದು ಎಷ್ಟು ಸರಿ? ಅದು ಯಾವುದಾದರೂ ಕಾಯಿಲೆಯಾ ಲಕ್ಷಣವೇ? ಇದಕ್ಕೆನು ಪರಿಹಾರ? ಇಲ್ಲಿದೆ ನೋಡಿ...
ವಿಟಮಿನ್ ಕೊರತೆಯಿಂದ ಕಾಡೋ ಅನಾರೋಗ್ಯ...
ಸಂಶೋಧನೆ ಪ್ರಕಾರ ಧಾರಾವಾಹಿಯಲ್ಲಿ ಬರುವ ಕಾಲ್ಪನಿಕ ಪಾತ್ರಗಳನ್ನು ಅನೇಕರು ಮಾನಸಿಕವಾಗಿ ಹಚ್ಚಿಕೊಳ್ಳುತ್ತಾರೆ. ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ಮನಃಶಾಸ್ತ್ರದಲ್ಲಿ 'ಬೈ ಡೈರೇಕ್ಷನಲ್ ರಿಲೇಷನ್‌ಶಿಪ್' ಎನ್ನುತ್ತಾರೆ.
ಆದರೆ, ಕೆಲವೊಮ್ಮೆ ಈ ಸಂಬಂಧಗಳು ಮಾನಸಿಕವಾಗಿ ನಮ್ಮನ್ನು ಗಟ್ಟಿಯಾಗಿಸುತ್ತವೆ. ಹಾಗೂ ಒಂಟಿತನ ಕಾಡದಂತೆ ಮಾಡುತ್ತದೆ. ಆದುದರಿಂದ ಅವರಿಗೆ ನೋವಾದರೆ ನಾವೂ ಕಣ್ಣಿರಿಡುತ್ತೇವೆ. ಪಾತ್ರ ಖುಷಿ ಪಟ್ಟರೆ ನಾವೂ ಖುಷಿ ಪಡುತ್ತೇವೆ. ಇದನ್ನು ಮನಃಶಾಸ್ತ್ರೀಯ ಭಾಷೆಯಲ್ಲಿ 'ಮೇಟ್- ಹೇಮೋಷ್ನ' ಎನ್ನುತ್ತಾರೆ.
ಒಂದು ಧಾರಾವಾಹಿಯನ್ನು ಸಕಾರಾತ್ಮಕವಾಗಿ ವೀಕ್ಷಿಸುವುದರಿಂದ ವ್ಯಕ್ತಿಯ ಮಾನಸಿಕ ಶಕ್ತಿ ಹೆಚ್ಚಾಗಿ, ಅವರಿಗೂ ಅಂಥದ್ದೇ ಕಷ್ಟಕರ ಪರಿಸ್ಥಿತಿ ಎದುರಾದರೆ, ಅದನ್ನು ಎದುರಿಸುವಂತಾಗುತ್ತಾರೆ. ಅಲ್ಲದೇ ಬೇರೆಯವರ ನೋವನ್ನೂ ಅರ್ಥ ಮಾಡಿಕೊಂಡು, ಸುಲಭವಾಗಿ ಜಡ್ಜ್ ಮಾಡುವಂತಾಗುತ್ತಾರೆ. ಸೋ, ಧಾರಾವಾಹಿ ನೋಡುತ್ತಾ ಅಳು ಬಂದರೆ ಅತ್ತು ಬಿಡಿ. ಆದರೆ, ಈ ಬಗ್ಗೆ ಗಿಲ್ಟಿ ಫೀಲ್ ಮಾಡಿಕೊಳ್ಳುವುದು ಬೇಡವೆನ್ನುತ್ತದೆ ಸಂಶೋಧನೆ.