
ತುಂಗಭದ್ರಾ ನದಿಯ ದಡದುದ್ದಕ್ಕೂ ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮೀನು ಹಿಡಿಯುವ ಕಾಯಕದಲ್ಲೇ ಅನೇಕರು ತಮ್ಮ ಬದುಕಿನ ಬಂಡಿ ಓಡಿಸುತ್ತಾರೆ. ಮಳೆಗಾಲದಲ್ಲಿ ಬಹುತೇಕರಿಗೆ ಇದೇ ಜೀವನಕ್ಕೆ ಆಧಾರ.
ಮಳೆಗಾಲ ಶುರುವಾಯಿತು ಎಂದರೆ ತುಂಗಭದ್ರಾ ನದಿ ತಟ, ಕೊಪ್ಪಳ ಜಿಲ್ಲೆಯ ಹಿರೇಹಳ್ಳ, ಹುಲಿಕೆರೆ, ತಲ್ಲೂರು ಕೆರೆ, ಹುಲಿಗೆಮ್ಮ ದೇವಸ್ಥಾನ ಬಳಿಯ ನದಿಯಲ್ಲಿ ಇವರ ಕಾಯಕ ಜೋರಾಗಿರುತ್ತದೆ. ಮಳೆಗಾಲದಲ್ಲಿ ತುಂಗಭದ್ರಾ ನದಿಯಲ್ಲಿ ನೀರು ತುಂಬಿ ಅದರಲ್ಲಿ ಬರುವ ಹೊಸ ಮೀನುಗಳು, ಏಡಿಗಳನ್ನು ಹಿಡಿಯುತ್ತಾರೆ ಈ ಮಂದಿ. ಹೀಗೆ ಹಿಡಿದ ಮೀನು, ಏಡಿಗಳೇ ಇವರ ಪ್ರಮುಖ ಆಹಾರವೂ ಹೌದು. ಜೊತೆಗೆ ಇವನ್ನು ಮಾರಾಟ ಮಾಡಿ ಜೀವನ ನಿರ್ವಹಿಸುತ್ತಾರೆ.
ಎಲ್ಲೆಲ್ಲಿ ಮೀನು ದೊರೆಯುತ್ತದೆ?
ತುಂಗಾಭದ್ರಾ ಹಿನ್ನೀರಿನ ಸುತ್ತಮುತ್ತ ಸೇರಿದಂತೆ ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿ, ಕರ್ಕಿಹಳ್ಳಿ, ಲಾಚನಕೇರಿ, ಕುಣಿಕೇರಿ, ಬೇಟಗೇರಿ ಕಾಲುವೆ ಸೇರಿದಂತೆ ಜಿಲ್ಲೆಯ ಹೊಂದಿಕೊಂಡಿರುವ ತುಂಗಭದ್ರಾ ನದಿಯುದ್ದಕ್ಕೂ ಮೀನುಗಳನ್ನು ಹಿಡಿಯಲಾಗುತ್ತಿದೆ. ಈ ಗ್ರಾಮಗಳು ತುಂಗಭದ್ರಾ ನದಿಗೆ ಹೊಂದಿಕೊಂಡಿರುವುದರಿಂದ ಅದರ ಪಕ್ಕದಲ್ಲಿಯೇ ಮೀನುಗಾರರ ಕುಟುಂಬಗಳು ನೆಲೆಸಿ ಜೀವನ ನಡೆಸುತ್ತಿವೆ.
-ಸೋಮರೆಡ್ಡಿ ಅಳವಂಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.