ಇಂಜೆಕ್ಷನ್ ಕೊಟ್ಟಿದ್ದು ಮಗುವಿಗೆ ಗೊತ್ತಾಗದಂತೆ ಈ ಡಾಕ್ಟ್ರು ಮಾಡಿದ ಟ್ರಿಕ್ ನೋಡಿ...

First Published Jul 2, 2018, 4:30 PM IST
Highlights

ಮಗುವಿಗೆ ಇಂಜೆಕ್ಷನ್ ಕೊಡಿಸುವುದು, ಅದು ದಿನಾಪೂರ್ತಿ ಅಳುತ್ತಿರುವುದು ಎಲ್ಲ ಪೋಷಕರಿಗೂ ಸಿಕ್ಕಾಪಟ್ಟೆ ಸಂಕಟ ತರಿಸುವಂಥ ಪ್ರಸಂಗಗಳು. ಆದರೆ, ಈ ಮಕ್ಕಳ ಡಾಕ್ಟ್ರು ಇಂಜೆಕ್ಷನ್ ಕೊಟ್ಟಿದ್ದು, ಮಗುವಿಗೆ ಗೊತ್ತಾಗುವುದೇ ಇಲ್ಲ. ಏನಾಯ್ತು ಎಂದು ಮಗು ಅರ್ಥ ಮಾಡಿಕೊಳ್ಳುವುದರಲ್ಲಿಯೇ ವೈದ್ಯರು ಮಗುವಿಗೆ ಎರಡನೇ ಇಂಜೆಕ್ಷನ್ ಕೊಟ್ಟೂ ಮುಗಿಸಿರುತ್ತಾರೆ.

ಮಗುವಿಗೆ ಇಂಜೆಕ್ಷನ್ ಕೊಡಿಸುವುದೆಂದರೆ ಪೋಷಕರಿಗೆ ಎರಡು ದಿನಗಳಿಂದಲೇ ಟೆನ್ಷನ್ ಶುರುವಾಗಿರುತ್ತೆ. ಅಬ್ಬಾ, ಆ ಮಗುವಿನ ಅಳು ಸುಮಾರು 24 ಗಂಟೆಯವರೆಗೂ ಮುಂದುವರಿಯುತ್ತದೆ. ಆ ಹೊತ್ತಿನಲ್ಲಿ ತಂದೆ-ತಾಯಿ ಪಡುವ ಸಂಕಟ ಅಷ್ಟಿಷ್ಟಲ್ಲ. ಪೇನ್‌ಲೆಸ್ ಇಂಜೆಕ್ಷನ್ ಇದ್ದರೂ, ಎಲ್ಲ ಚುಚ್ಚುಮದ್ದಿಗೂ ಕೊಡೋಕೆ ಆಗೋಲ್ಲ. ಆದರೆ, ಈ ಡಾಕ್ಟ್ರು ಮಾಡಿದ ಟ್ರಿಕ್ ನೋಡಿ...

ಇಂಜೆಕ್ಷನ್ ಸಿರೆಂಜ್ ಹಿಡಿದುಕೊಂಡು, ಮಗುವಿಗೆ ಗೊತ್ತಾಗದಂತೆ ಆಟವಾಡಿಸಿದ ವೈದ್ಯರು, ನಿಧಾನಕ್ಕೆ ಚುಚ್ಚುಮದ್ದನ್ನು ಚುಚ್ಚಿದ್ದಾರೆ. ಡಾಕ್ಟ್ರನ್ನು ನೋಡುವಲ್ಲಿಯೇ ಮೈ ಮರೆತ ಮಗುವಿಗೆ, ಇಂಜೆಕ್ಷನ್ ಚುಚ್ಚಿದ್ದೇ ಗೊತ್ತಾಗಿಲ್ಲ. ಒಂದಲ್ಲ, ಎರಡೆರಡು ಇಂಜೆಕ್ಷನ್ ಕೊಟ್ಟರೂ ಮಗು, ನಗು ನಗುತ್ತಲೇ ಇದ್ದು, ಆ ಮೂಲಕ ವೈದ್ಯರು ತಮ್ಮ ಕೈ ಚಳಕ ತೋರಿಸಿದ್ದಾರೆ.

ಇಂಥ ವೈದ್ಯರ ವೀಡಿಯೋವೊಂದನ್ನು ಲಂಡನ್ ಇವನಿಂಗ್ ಸ್ಟ್ಯಾಂಡರ್ಡ್ ತನ್ನ ಫೇಸ್‌ಬುಕ್ ಪೇಜಿನಲ್ಲಿ ಪೋಸ್ಡ್ ಮಾಡಿದ್ದು, ವೈರಲ್ ಆಗುತ್ತಿದೆ. ಎಲ್ಲ ವೈದ್ಯರೂ ಇಂಥದೇ ಟ್ರಿಕ್ ಬಳಸಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದು, ವೈದ್ಯರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

click me!