ಮೀನನ್ನು 3 ಪೀಸ್ ಮಾಡಿ ಬಾಣಲೆಗೆ ಹಾಕೋದು ಯಾಕೆ? ಈ ಸಂಪ್ರದಾಯದ ಹಿಂದಿನ ಕಾರಣ?

Published : Aug 23, 2025, 06:25 PM IST
Fish

ಸಾರಾಂಶ

ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಇದನ್ನು ನೋಡಿದರೆ ನೀವು ಖಂಡಿತವಾಗಿಯೂ ನೆಗ್ಲೆಕ್ಟ್ ಮಾಡಲಾರಿರಿ. ಈ ಸ್ಟೋರಿಯಲ್ಲಿ ಮುಖ್ಯವಾದ ಜೀವನ ಪಾಠವೂ ಅಡಗಿದೆ. AI ಟೂಲ್ ಮೂಲಕ ಮಾಡಲಾಗಿರುವ ಈ ಸ್ಟೋರಿ..

ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಇದನ್ನು ನೋಡಿದರೆ ನೀವು ಖಂಡಿತವಾಗಿಯೂ ನೆಗ್ಲೆಕ್ಟ್ ಮಾಡಲಾರಿರಿ. ಈ ಸ್ಟೋರಿಯಲ್ಲಿ ಮುಖ್ಯವಾದ ಜೀವನ ಪಾಠವೂ ಅಡಗಿದೆ. AI ಟೂಲ್ ಮೂಲಕ ಮಾಡಲಾಗಿರುವ ಈ ಸ್ಟೋರಿ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕುವುದು ಖಂಡಿತ.. ನೋಡಿ..

ಈ ಸ್ಟೋರಿಯಲ್ಲಿ ಒಬ್ಬಳು ಮಹಿಳೆ ಮನೆಯೊಂದರಲ್ಲಿ ಅಡುಗೆ ಮಾಡ್ತಾ ಇರ್ತಾಳೆ. ಆಕೆ ಮೀನನ್ನು ತಲೆ-ಮಧ್ಯ ಪಾರ್ಟ್ ಹಾಗೂ ಬಾಲದ ಕಡೆ ಹೀಗೆ ಮೂರು ತುಂಡು ಮಾಡಿ ಬಾಣಲೆಗೆ ಹಾಕ್ತಾಳೆ. ಅದನ್ನು ನೋಡಿದ ಚಿಕ್ಕ ಹುಡುಗಿ (ಸ್ಕೂಲ್ ಗೋಯಿಂಗ್) ಆಕೆಯ ಅಮ್ಮನನ್ನು ಪ್ರಶ್ನೆ ಕೇಳ್ತಾಳೆ- 'ನೀನ್ಯಾಕೆ ಮೀನನ್ನು ತಲೆ, ಬಾಲವನ್ನು ಬೇರ್ಪಡಿಸಿ ಹಾಕ್ತೀಯಾ' ಅಂತ. ಅದಕ್ಕೆ ಆಕೆಯ ತಾಯಿ 'ಗೊತ್ತಿಲ್ಲ, ನನ್ನಮ್ಮ ಹೀಗೆಯೇ ಮಾಡ್ತಿದ್ರು' ಅಂತ ಉತ್ತರ ಕೊಡ್ತಾಳೆ.

ಅಲ್ಲಿಗೆ ಆ ಚಿಕ್ಕ ಹುಡುಗಿಯ ಪ್ರಶ್ನೆಗೆ ಸರಿಯಾದ ಉತ್ತರ ಸಿಗಲಿಲ್ಲ. ಅದಕ್ಕೆ ಅವಳು ಆ ಪ್ರಶ್ನೆಯನ್ನು ತನ್ನ ಅಜ್ಜಿಗೆ ಫೋನ್ ಮೂಲಕ ಕೇಳ್ತಾಳೆ. ಅದಕ್ಕೆ ಆ ಅಜ್ಜಿ-'ನನಗೆ ಗೊತ್ತಿಲ್ಲ, ನನ್ನ ಅಮ್ಮ ಹೀಗೇ ಮಾಡ್ತಿದ್ರು' ಅಂತಾಳೆ. ಈಗ ಆ ಹುಡುಗಿಗೆ ಇನ್ನಷ್ಟು ತಲೆಬಿಸಿ ಆಗುತ್ತೆ, ಕಾರಣ ಆಕೆಯ ಅಜ್ಜಿಯಿಂದಲೂ ಆ ಪ್ರಶ್ನೆಗೆ ಉತ್ತರ ಸಿಗಲಿಲ್ಲ ಎಂದು. ಆದರೆ, ಆ ಪುಟ್ಟ ಹುಡುಗಿಗೆ ಉತ್ತರ ಬೇಕಾಗಿದೆ. ಅದಕ್ಕೆ ಅವಳು ತನ್ನ ಅಜ್ಜಿಯ ತಾಯಿಯ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ, ಆಕೆಯ ಭೇಟಿಗಾಗಿ ತನ್ನ ಸೈಕಲ್ ತೆಗೆದುಕೊಂಡು ಹೋಗುತ್ತಾಳೆ.

ಅಲ್ಲಿ, ಅಜ್ಜಿ ತನ್ನ ಮಿಮ್ಮಗಳ (ಮಗಳ ಮೊಮ್ಮಗಳು) ಪ್ರಶ್ನೆಗೆ ಮುಗ್ಧವಾಗಿ ನಗುತ್ತಾ ಉತ್ತರಿಸುತ್ತಾಳೆ. ಆ ಉತ್ತರ ಕೇಳಿದರೆ ನೀವು ಕೂಡ ಒಮ್ಮೆ ನಗುತ್ತೀರಾ. ಆದರೆ, ನಗುನಗುತ್ತಲೇ ಆ ಉತ್ತರ ನಿಮ್ಮ ಕಣ್ಣನ್ನು ತೆರೆಸುವುದು ಖಂಡಿತ.. ಹಾಗಿದ್ದರೆ ಆ ಅಜ್ಜಿಯ ತಾಯಿ ಹೇಳಿದ ಉತ್ತರ ಏನು?

'ನಾನು 1950 ರಲ್ಲಿ ಸಣ್ಣ ಬಾಣಲೆಯಲ್ಲಿ ಅಡುಗೆ ಮಾಡುತ್ತಿದ್ದೆ. ಅದರಲ್ಲಿ ಉದ್ದ ಮೀನನ್ನು ಹಾಕಿ ಅಡುಗೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಚಿಕ್ಕ ಬಾಣಲೆಗೆ ಮೀನನ್ನು 3 ತುಂಡಗಳನ್ನಾಗಿ ಮಾಡಿ ಹಾಕ್ತಿದ್ದೆ. ನನಗೆ ಆ ಪ್ಯಾನ್ (ಬಾಣಲೆ) ಬದಲಾಯಿಸುವ ಶಕ್ತಿ ಇರಲಿಲ್ಲ. ಆದರೆ, ನಾನು ಮಾಡುವುದನ್ನು ನೋಡಿದ್ದ ನನ್ನ ಮಗಳು ಹಾಗೂ ಅವಳ ಮಗಳು ಕಾರಣ ಗೊತ್ತಿಲ್ಲದೇ ನಾನು ಮಾಡೋದನ್ನೇ ಮಾಡ್ತಾ ಇದಾರೆ' ಎಂದು ನಕ್ಕಿದ್ದಾರೆ.

ಅಲ್ಲಿಗೆ ಆ ಪುಟ್ಟ ಹುಡುಗಿಗೆ ಉತ್ತರ ಸಿಕ್ಕಿದೆ. ಇಲ್ಲಿಗೆ ಈ ಕತೆ ಮುಗಿದಿದೆ. ಆದರೆ, ಇಲ್ಲಿಂದ ನಮ್ಮನಿಮ್ಮೆಲ್ಲರ ಕಥೆ ಪ್ರಾರಂಭವಾಗುತ್ತದೆ. ನಾವು ಕೂಡ ಎಷ್ಟೋ ವಿಷಯದಲ್ಲಿ ಹಿಂದಿನವರು ಮಾಡಿದ್ದನ್ನೇ ಮಾಡುತ್ತಾ ಇರ್ತೇವೆ. ಅದಕ್ಕೆ ಕಾರಣವೇನಿರಬಹುದು ಅಂತ ಯೋಚನೆ ಮಾಡಿರೋದಿಲ್ಲ. ಯೋಚನೆ ಹಾಗಿರಲಿ, ಆ ಪ್ರಶ್ನೆಯನ್ನೇ ಕೇಳಿಕೊಳ್ಳುವುದಿಲ್ಲ. ಪ್ರಶ್ನೆ ನಮ್ಮಲ್ಲಿ ಹುಟ್ಟಿದರೆ ನಾವು ಉತ್ತರಕ್ಕೆ ದಾರಿ ಹುಡುಕುತ್ತೇವೆ. ಆಗ ಉತ್ತರ ಯಾರಿಂದಲೋ ಸಿಗುತ್ತದೆ.

ಆದರೆ, ಈ ಕಥೆಯನ್ನು ನೋಡಿದ ಮೇಲೆ ನೀವು ಎಲ್ಲಾ ಕಡೆಯಲ್ಲಿ ಕಾರಣವನ್ನು ಹುಡುಕುತ್ತಾ, ಪ್ರತಿಯೊಂದನ್ನೂ ಕೆದಕುತ್ತಾ ಹೋದರೆ ಲೈಫ್ ಮತ್ತಷ್ಟು ಇನ್ನಷ್ಟು ಕಾಂಪ್ಲಿಕೇಟಡ್ ಆಗಬಹುದು. ಸೋ, ಎಲ್ಲವೂ ಮಿತಿಯಲ್ಲಿರಲಿ..! ಅಥವಾ, ಪ್ರಶ್ನೆಗೆ ಸಕಾರಣ ಅಥವಾ ಲಾಜಿಕ್ ಇರಲಿ ಅಷ್ಟೇ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಮುಸ್ಲಿಂ ವ್ಯಕ್ತಿಯ ಕಿರುಕುಳ; ವಿವಾಹಿತ ಮಹಿಳೆ ಆತ್ಮ*ಹತ್ಯೆ
ಈ ಚಳಿಯಲ್ಲಿ ಹೀಟರ್ ಬಳಸದೆ, ಯಾವುದೇ ಖರ್ಚಿಲ್ಲದಂತೆ ಮನೆಯನ್ನು ಬೆಚ್ಚಗಿಡಲು 5 ಟಿಪ್ಸ್