(ವಿಡಿಯೋ)'ಅಮ್ಮ' ಮಗಳ ಮನಕಲಕುವ ಸ್ಟೋರಿ: ಕೊನೆಯಲ್ಲಿದೆ ಬಿಗ್ ಟ್ವಿಸ್ಟ್! ನೋಡಿ ಕಂಬನಿ ಮಿಡಿಸುತ್ತೀರಿ!

By Suvarna Web DeskFirst Published Apr 1, 2017, 7:59 AM IST
Highlights

ಹೃದಯ ಮಿಡಿಸುವ ಈ ಜಾಹೀರಾತಿನಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ 'ಅಮ್ಮ'ನ ಕುರಿತಾಗಿ ಹೇಳಿಕೊಳ್ಳುತ್ತಾಳೆ. ಈಕೆ ಮಾತುಗಳು ಹಾಗೂ ಅದಕ್ಕೆ ತಕ್ಕಂತೆ ವಿಡಿಯೋ ಕೊನೆಗೊಳ್ಳುವ ಹಂತದಲ್ಲಿವ ಟ್ವಿಸ್ಟ್ ನೋಡಿದರೆ ನಿಜಕ್ಕೂ ಕಣ್ಣು ತೇವಗೊಳ್ಳುತ್ತದೆ. ವಾಸ್ತವಿಕ ಘಟನೆಯನ್ನಾಧರಿಸಿ ನಿರ್ಮಿಸಿರುವ ಈ ವಿಡಿಯೋದಲ್ಲಿ ಗಾಯತ್ರಿ ಹಾಗೂ ಆಕೆಯನ್ನು ದತ್ತು ತೆಗೆದುಕೊಳ್ಳುವ ಆಕೆಯ 'ಅಮ್ಮ'ನ ನಡುವಿನ ಆಳವಾದ ಸಂಬಂಧವನ್ನು ಇದು ವಿವರಿಸುತ್ತದೆ.

ಹೃದಯ ಮಿಡಿಸುವ ಈ ಜಾಹೀರಾತಿನಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ 'ಅಮ್ಮ'ನ ಕುರಿತಾಗಿ ಹೇಳಿಕೊಳ್ಳುತ್ತಾಳೆ. ಈಕೆ ಮಾತುಗಳು ಹಾಗೂ ಅದಕ್ಕೆ ತಕ್ಕಂತೆ ವಿಡಿಯೋ ಕೊನೆಗೊಳ್ಳುವ ಹಂತದಲ್ಲಿವ ಟ್ವಿಸ್ಟ್ ನೋಡಿದರೆ ನಿಜಕ್ಕೂ ಕಣ್ಣು ತೇವಗೊಳ್ಳುತ್ತದೆ. ವಾಸ್ತವಿಕ ಘಟನೆಯನ್ನಾಧರಿಸಿ ನಿರ್ಮಿಸಿರುವ ಈ ವಿಡಿಯೋದಲ್ಲಿ ಗಾಯತ್ರಿ ಹಾಗೂ ಆಕೆಯನ್ನು ದತ್ತು ತೆಗೆದುಕೊಳ್ಳುವ ಆಕೆಯ 'ಅಮ್ಮ'ನ ನಡುವಿನ ಆಳವಾದ ಸಂಬಂಧವನ್ನು ಇದು ವಿವರಿಸುತ್ತದೆ.

ಯೂ ಟ್ಯೂಬ್'ನಲ್ಲಿ ಕೇವಲ ಒಂದು ದಿನದಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರುವ ಈ ವಿಡಿಯೋ ಬೋರ್ಡಿಂಗ್ ಸ್ಕೂಲ್'ಗೆ ಮರಳಲಿರುವ ಬಾಲಕಿ ಗಾಯತ್ರಿಯಿಂದ ಆರಂಭವಾಗುತ್ತದೆ. 'ನನ್ನ ತಾಯಿ ನಾನು ಡಾಕ್ಟರ್ ಆಗಬೇಕೆಂದು ಬಯಸುತ್ತಾಳೆ ಎಂಬ ಮಾತಿನೊಂದಿಗೆ ಗಾಯತ್ರಿ ತನ್ನ 'ಅಮ್ಮ'ನ ಕಥೆಯನ್ನು ಆರಂಭಿಸುತ್ತಾಳೆ. ಆದರೆ ಆಕೆಗೆ ಮಾತ್ರ ಡಾಕ್ಟರ್ ಆಗಲು ಕೊಂಚವೂ ಇಷ್ಟವಿಲ್ಲ. ವಾಸ್ತವವಾಗಿ ಆಕೆ ಓರ್ವ ವಕೀಲೆಯಾಗಲು ಬಯಸುತ್ತಿದ್ದಾಳೆ. ಈ ಮೂಲಕ ತನ್ನ 'ಅಮ್ಮ'ನಿಗೆ ಸಹಾಯ ಮಾಡುವ ಆಸೆ ಹೊಂದಿದ್ದಾಳೆ.

ಗಾಯತ್ರಿ ಇಲ್ಲಿ ತನ್ನ 'ಅಮ್ಮ'ನನ್ನು ಮೊದಲ ಬಾರಿ ನೋಡಿದ ಕ್ಷಣವನ್ನು ನೆನಪಿಸಿಕೊಳ್ಳುತ್ತಾ 'ನಾನು ನನ್ನ ತಂದೆಯನ್ನು ಯಾವತ್ತೂ ನೋಡಿಲ್ಲ. ಜನ್ಮ ಕೊಟ್ಟ ತಾಯಿಯ ಬಗ್ಗೆ ಹೇಳುವುದಾದರೆ ಆಕೆಯ ಬಗೆಗಿನ ಕೇವಲ ಒಂದು ದಿನ ನನಗೆ ನೆನಪಿದೆ ಒಂದು ದಿನ ಕೆಲ ಜನರು ಮನೆ ಮುಂದೆ ಬಂದು ನಿಂತ ಆ್ಯಂಬುಲೆನ್ಸ್'ನಲ್ಲಿ ಆಕೆಯನ್ನು ಕರೆದೊಯ್ದರು ಬಳಿಕ ಆಕೆಯೂ ಮರಳಿ ಬರಲಿಲ್ಲ.

ಬಳಿಕ ಒಂದು ದಿನ 'ಅಮ್ಮ' ಬಂದಳು ಹಾಗೂ ನನ್ನನ್ನು ಆಕೆಯ ಮನೆಗೆ ಕರೆದೊಯ್ದಳು. ಆರೋಗ್ಯ ಹದಗೆಟ್ಟಾಗ ನನ್ನೊಂದಿಗೆ ರಾತ್ರಿ ಇಡೀ ಕುಳಿತಿದ್ದಳು. ಬೆಳಿಗ್ಗೆ ನನಗಾಗಿ ಸುಂದರವಾದ ಬಟ್ಟೆ ತಂದಿದ್ದಳು ಅಲ್ಲದೇ ಚಿಪ್ಸ್ ಕೂಡಾ ಮಾಡಿ ತಿನ್ನಿಸಿದಳು. 'ಅಮ್ಮ'ನೊಂದಿಗಿದ್ದು 10 ವರ್ಷಗಳಾಗಿವೆ. ಈಗ 'ಅಮ್ಮ' ಗೆಳತಿಗಿಯಂತಾಗಿದ್ದಾಳೆ. ಭಾನುವಾರ ನಮ್ಮಿಬ್ಬರ ಫೇವರಿಟ್ ದಿನ, ಅವತ್ತು 'ಅಮ್ಮ' ಬೆಳಿಗ್ಗೆ ತಲೆಗೆ ಎಣ್ಣೆ ಹಚ್ಚಿ ಮಧ್ಯಾಹ್ನ ನನಗಿಷ್ಟವಾದ ಊಟ ಮಾಡಿಕೊಡುತ್ತಾಳೆ. ಇನ್ನು ರಾತ್ರಿ ಹಾರರ್ ಮೂವಿ ನೋಡುತ್ತೇನೆ. ಭಯ ಆಗುತ್ತದೆ ಆದರೆ 'ಅಮ್ಮ' ಇದ್ದರೆ ಭಯವೇ ಇಲ್ಲ' ಇಷ್ಟು ಹೇಳುತ್ತಾಳೆ. ಇದರ ಮುಂದಿನ ಭಾಗವೇ ವಿಡಿಯೋದ ಪ್ರಮುಖ ಭಾಗ ಆ 'ಬಿಗ್ ಟ್ವಿಸ್ಟ್'.

ವಾಸ್ತವವಾಗಿ ಗಾಯತ್ರಿಯನ್ನು ದತ್ತು ಪಡೆದದ್ದು ಓರ್ವ ಮಂಗಳಮುಖಿ. ಈ ಜಾಹೀರಾತಿನಲ್ಲಿ ಮಂಗಳಮುಖಿಯರೂ ಎಲ್ಲರಂತೆ ಸಮಾನರು. ಸಮಾಜದಲ್ಲಿ ಗೌರವದಿಂದ ಬಾಳುವ ಹಕ್ಕು ಅವರಿಗೂ ಇದೆ, ಅವರಲ್ಲೂ ಭಾವನೆಗಳಿವೆ ಎಂಬುದನ್ನು ಸಾರಿ ಹೇಳಿದ್ದಾರೆ. ಗಾಯತ್ರಿಯ ಮಾತುಗಳಲ್ಲಿ ಹೇಳಬೇಕಾದರೆ 'ನನ್ನ 'ಅಮ್ಮ' ಬಹಳಷ್ಟು ಕಷ್ಟ ಸಹಿಸಿದ್ದಾರೆ. ಆದರೂ ಆಕೆ ಪ್ರೀತಿಯಿಂದ ನನ್ನ ಆರೈಕೆ ಮಾಡಿದ್ದಾಳೆ. ಪೌರನೀತಿ ಪುಸ್ತಕದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಿವೆ ಎಂದು ಬರೆದಿದ್ದಾರೆ. ಆದರೆ 'ಅಮ್ಮ'ನಿಗೆ ಯಾಕಿಲ್ಲ? ಇದೇ ಕಾರಣದಿಂದ ನಾನು ಡಾಕ್ಟರ್ ಆಗದೆ ಓರ್ವ ವಕೀಲೆಯಾಗುತ್ತೇನೆ. ನನ್ನ 'ಅಮ್ಮ'ನಿಗಾಗಿ' ಎಂದಿದ್ದಾಳೆ.

 

 

 

 

 

 

 

 

 

 

 

ಈ ಜಾಹೀರಾತು ಪ್ರತಿಯೊಬ್ಬ ವ್ಯಕ್ತಿಗೂ ಅಪೂರ್ವ ಸಂದೇಶ ನೀಡುತ್ತದೆ. ಮಂಗಳಮುಖಿಯರನ್ನು ನಮ್ಮಂತೆ ಮನುಷ್ಯರು ಅವರಿಗೂ ಎಲ್ಲರಂತೆ ಬಾಳುವ ಹಕ್ಕಿದೆ. ಅವರನ್ನೂ ಸಮಾನಾಗಿ ಕಂಡು ಗೌರವಿಸೋಣ.

click me!