
ನವದೆಹಲಿ(ಮಾ.25): ತರಗತಿಯಲ್ಲಿ ಟೀಚರ್ ಪಾಠ ಮಾಡುವಾಗ ಯಾವುದೇ ವಿದ್ಯಾರ್ಥಿ/ವಿದ್ಯಾರ್ಥಿನಿ ತೂಕಡಿಸುತ್ತಿದ್ದರೆ ಚಾಕ್ ಪೀಸ್ ಬಿಸಾಕಿ ಅವರನ್ನು ಎಬ್ಬಿಸುವುದು ಸಾಮಾನ್ಯ. ಆದರೆ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಇದೇ ರೀತಿ ತರಗತಿಯಲ್ಲಿ ನಿದ್ದೆ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪಾಠ ಮಾಡುತ್ತಿದ್ದ ಶಿಕ್ಷಕ ವಿಚಿತ್ರ ರೀತಿಯಿಂದ ಎಬ್ಬಿಸುವುದು ಕಂಡು ಬರುತ್ತದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥನಿಯೊಬ್ಬಳು ತರಗತಿಯಲ್ಲಿ ನಿದ್ದೆಗೆ ಜಾರಿರುತ್ತಾಳೆ. ಇದನ್ನು ಕಂಡ ಶಿಕ್ಷಕ ಆಕೆಯ ಬಳಿ ಬಂದು ಬಾಯಿಯಲ್ಲಿ ವಿದ್ಯಾರ್ಥಿನಿಯ ಜುಟ್ಟನ್ನು ತನ್ನ ಬಾಯಿಯಲ್ಲಿ ಕಚ್ಚಿ ಎಳೆದು ಆಕೆಯನ್ನು ಎಬ್ಬಿಸುತ್ತಾನೆ. ಿತರ ವಿದ್ಯಾರ್ಥಿಗಳು ಶಿಕ್ಷಕನ ವಿಚಿತ್ರ ವರ್ತನೆಯನ್ನು ತಮ್ಮ ಮೊಬೈಲ್'ನಲ್ಲಿ ಸೆರೆ ಹಿಡಿದಿದ್ದಾರೆ. 27 ಸೆಕೆಂಡುಗಳ ಈ ವಿಡಿಯೋವನ್ನು Live Leak ಎಂಬ ವೆಬ್'ಸೈಟ್ ಸದ್ಯ ಶೇರ್ ಮಾಡಿದೆ.
ಇದು ಒಂದು ವರ್ಷ ಹಳೆಯ ಘಟನೆ ಎಂದು ತಿಳಿದು ಬಂದಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಈಗ ವೈರಲ್ ಆಗಿದೆ. ಇನ್ನು ಈ ಘಟನೆ ನಿಜಕ್ಕೂ ನಡೆದಿತ್ತಾ ಅಥವಾ ಇದೊಂದು ಪ್ರಾಂಕ್ ವಿಡಿಯೋ ಆಗಿರಬಹುದಾ ಎಂಬ ಮಾಹಿತಿಯೂ ತಿಳಿದಿಲ್ಲ. ಇನ್ನು ಇದನ್ನು ವೀಕ್ಷಿಸಿದ ಕೆಲವರು ಶಿಕ್ಷಕನ ವರ್ತನೆಯನ್ನು ಠೀಕಿಸಿದರೆ ಮತ್ತೆ ಕೆಲವರು ಕಾಮಿಡಿ ಎಂದು ಬಿಂಬಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.