ಹೃದಯ ಒಡೆದು ಚೂರಾಗಿ ವರ್ಷವೇ ಕಳೆದಿದೆ. ಆದರೆ, ಹಳೆಯ ಗೆಳತಿಯ ನೆನಪಿನಿಂದ ಹೊರಬರೋಕೆ ಮಾತ್ರ ಆಗ್ತಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಯೋಚನೆಗಳು ಕಡೆಗೆ ಅವಳತ್ತಲೇ ಓಡುತ್ತವೆ ಎನ್ನುವುದು ನಿಮ್ಮ ಸಮಸ್ಯೆಯಾಗಿದ್ದರೆ ಅದರಿಂದ ಹೊರಬರೋಕೆ ಇಲ್ಲಿವೆ ಸುಲಭ ಟ್ರಿಕ್ಸ್.
ಅದೇನಿದ್ದರೂ ಹಳೆಯ ಅಧ್ಯಾಯ. ಮುಗಿದು ಹೋದ ಪ್ರೇಮಕತೆ. ಅದು ಪುನಾಃ ಆರಂಭವಾಗಲು ಸಾಧ್ಯವೇ ಇಲ್ಲ. ಇವೆಲ್ಲವೂ ನಿಮಗೆ ಚೆನ್ನಾಗಿ ಗೊತ್ತು. ಆದರೆ ಮೊದಲ ಪ್ರೀತಿಯ ನೆನಪುಗಲು ಸುಲಭವಾಗಿ ಮಾಸುವುದಿಲ್ಲ. ಆ ಹಳೇ ಪ್ರೇಮಿ ಪದೇ ಪದೆ ನೆನಪಾಗಿ ಕಾಡುತ್ತಾನೆ/ಳೆ.
ಉದ್ಯಾನದಲ್ಲಿ, ಕಾಫಿ ಕುಡಿವಾಗ, ವಾಟ್ಸಾಪ್ ನೋಡುವಾಗ... ಹೀಗೆ ಆಕೆಯ ನೆನಪುಗಳಿಗೆ ನೂರೊಂದು ಲಿಂಕ್‌ಗಳು. ಬೇಡವೆಂದರೂ ಧುಗ್ಗೆಂದು ಬಂದು ದುಃಖಿಸುವಂತೆ ಮಾಡುತ್ತವೆ. ಆದರೆ, ಈ ನೆನಪುಗಳನ್ನೆಲ್ಲ ಮರೆಯಲೇಬೇಕೆಂದು ನೀವು ಪ್ರಯತ್ನಿಸುತ್ತಿದ್ದರೆ ಅದಕ್ಕಾಗಿ ಕೆಲ ಸಿಂಪಲ್ ಟ್ರಿಕ್ಸ್‌ಗಳು ಇಲ್ಲಿವೆ. ಟ್ರೈ ಮಾಡಿ ನೋಡಿ. ಉಪಯುಕ್ತ ಎನಿಸಿದರೆ ನಿಮ್ಮ ಭಗ್ನಪ್ರೇಮಿ ಗೆಳೆಯರಿಗೂ ಶೇರ್ ಮಾಡಿ.
undefined
ನಿಮ್ಮ ಗರ್ಲ್‌ಫ್ರೆಂಡ್ ನಿಮ್ಮಿಂದ ಬಯಸುವುದೇನು ಗೊತ್ತಾ ?
1. ರಬ್ಬರ್‌ಬ್ಯಾಂಡ್ ಟೆಕ್ನಿಕ್
ಇದೊಂತೂ ನೆನಪುಗಲು ಕಾಡಿದಂತೆಲ್ಲ ಅದನ್ನು ತೆಕ್ಕೆಗೆ ಸರಿಸಲು ಇರುವ ಬಹಳ ಸರಳವಾದ ತಂತ್ರ. ನಿಮ್ಮ ಮಣಿಕಟ್ಟಿನ ಸುತ್ತಲೂ ರಬ್ಬರ್‌ಬ್ಯಾಂಡ್ ಹಾಕಿಕೊಳ್ಳಿ. ಯಾವಾಗ ಹಳೆಯ ಪ್ರೇಮಿಯ ನೆನಪಾಗುತ್ತದೋ ಆವಾಗಲೆಲ್ಲ ಒಮ್ಮೆ ಈ ಬ್ಯಾಂಡನ್ನು ಎಳೆದು ಬಿಡಿ. ಚುಯ್ ಎನ್ನುತ್ತದೆ. ಇದು ಬೇಡವಾದದ್ದನ್ನು ನೆನಪು ಮಾಡಿಕೊಂಡಿದ್ದಕ್ಕಾಗಿ ನಿಮಗೆ ನೀವೇ ಕೊಟ್ಟುಕೊಳ್ಳುವ ಸಣ್ಣ ಶಾಕ್ ಟ್ರೀಟ್‌ಮೆಂಟ್. ಇದು ನಿಮ್ಮ ಮನಸ್ಸಿಗೆ ನೀವೇ ಎಚ್ಚರಿಸುವ ವಿಧಾನ. ಇನ್ನೊಮ್ಮೆ ನೆನಪು ಮಾಡಿಕೊಂಡರೆ ಹೀಗೆ ನೋವು ಮಾಡುತ್ತೇನೆಂದು ಬೆದರಿಸುವ ಪರಿ. ಹಾಗಾಗಿ, ಇನ್ನೊಮ್ಮೆ ಮನಸ್ಸು ಹಳೆಯ ಪ್ರೇಮಿ ಬಗ್ಗೆ ನೆನೆಸಿಕೊಳ್ಳಲು ಹೋದಾಗ ಅದಕ್ಕೆ ದೈಹಿಕ ನೋವಿನ ನೆನಪೂ ಜೊತೆಯಲ್ಲೇ ಆಗಿ ಬೇರೆ ಯೋಚನೆಯಲ್ಲಿ ತೊಡಗುತ್ತದೆ.
2. ದಂಡ
ಒಂದು ಹುಂಡಿ ರೆಡಿ ಮಾಡಿಕೊಳ್ಳಿ. ಯಾವಾಗ ಹಳೆ ಪ್ರೇಮಿಯ ನೆನಪು ಕಾಡುತ್ತದೋ ಆಗಲೆಲ್ಲ ತಪ್ಪು ಕಾಣಿಕೆಯಂತೆ ಈ ಹುಂಡಿಗೆ 100 ರೂಪಾಯಿ ಹಾಕಬೇಕು. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಹುಂಡಿಗೆ ಹೋದ ಹಣವನ್ನು ನೀವು ಬಳಸುವಂತಿಲ್ಲ. ಬದಲಿಗೆ ಅದು ತಿಂಗಳ ಕೊನೆಯಲ್ಲಿ ದಾನಕ್ಕೆ ಹೋಗುವಂತೆ ನಿಯಮ ಮಾಡಿಕೊಳ್ಳಬೇಕು. ಅದನ್ನು ಸ್ಟ್ರಿಕ್ಟ್ ಆಗಿ ಪಾಲಿಸಬೇಕು. ಈ ನಿಮ್ಮ ಬೆಂದ ನೆನಪಿನಲ್ಲಿ ಈಜಾಡುವ ಅಭ್ಯಾಸ ಜೇಬಿಗೆ ತೂತು ಮಾಡುತ್ತಿದೆ ಎಂದು ಗೊತ್ತಾದ ಬಳಿಕ ಮನಸ್ಸು ಸ್ವಲ್ಪ ಜಾಗೃತೆಯಿಂದಿರುವುದನ್ನು ಕಲಿಯುತ್ತದೆ.
3. ಬರೆದಿಡಿ
ಯಾವಾಗ ಹಳೆ ಪ್ರೇಮಿ ನೆನಪು ಕಾಡಿದರೂ ಏನೆಲ್ಲ ಯೋಚನೆ ಬರುತ್ತಿದೆಯೋ ಅದನ್ನು ಹಾಗೇ ಬರೆದಿಡುವ ಅಭ್ಯಾಸ ಮಾಡಿಕೊಳ್ಳಿ. ನಾಲ್ಕೈದು ಬಾರಿಯಾದ ಬಳಿಕ ಹಿಂದಿನ ಪುಟಗಳನ್ನು ತೆಗೆದು ನೋಡಿ. ಅಲ್ಲಿ ಹೊಸತೇನೂ ಕಾಣಿಸುವುದಿಲ್ಲ. ಸುಮ್ಮನೇ ಯೋಚಿಸಿದ್ದನ್ನೇ ಯೋಚಿಸಿ ಸಮಯ ವ್ಯರ್ಥ ಮಾಡುತ್ತಿರುವ ಅರಿವು ಸ್ಪಷ್ಟವಾಗಿ ಆಗುತ್ತದೆ. ಆಗ ನೀವು ಮತ್ತೆ ಅದೇ ವ್ಯರ್ಥ ನೆನಪುಗಳಿಗಾಗಿ ಸಮಯ ಹಾಳು ಮಾಡಲು ಬಯಸುವುದಿಲ್ಲ.
ಫಸ್ಟ್ ಡೇಟ್ ನಲ್ಲೇ ಹೆಸರಿಡಿದು ಕರೆದ್ರೆ ಎರಡನೇ ಬಾರಿ ಡೇಟಿಂಗ್ ಮಿಸ್ಸಾಗೋದೇ ಇಲ್ಲ!
4. ಯೋಚನಾ ಸರಣಿಗೆ ಪೆಟ್ಟು
ಇದು ಸರಳವೆನಿಸಿದರೂ ಪರಿಣಾಮಕಾರಿ ಟೆಕ್ನಿಕ್. ಯಾವಾಗ ನಿಮ್ಮ ಹಳೆ ಪ್ರೇಮಿಯ ನೆನಪಿನ ಸರಣಿ ಹರಿಯಲಾರಂಭಿಸುತ್ತದೋ ಆಗ ಆ ಯೋಚನೆಗೊಂದು ಬ್ರೇಕ್ ಕೊಡಿ. ಉದಾಹರಣೆಗೆ ಕಚೇರಿಯಲ್ಲಿದ್ದಾಗ ನೆನಪಿನ ಸುರುಳಿ ಬಿಚ್ಚಿಕೊಳ್ಳತೊಡಗಿತೆಂದುಕೊಳ್ಳಿ, ತಕ್ಷಣ ಎದ್ದು ಹೋಗಿ ಬಾಟಲ್‌ಗೆ ನೀರು ತುಂಬಿಸಿಕೊಂಡು ಬರುವುದೋ, ಸಹೋದ್ಯೋಗಿಯೊಂದಿಗೆ ಏನಾದರೂ ಮಾತನಾಡುವುದೋ ಮಾಡಿ. ಇದರಿಂದ ನಿಮ್ಮ ಯೋಚನಾ ಸರಣಿ ಅರ್ಧದಲ್ಲಿ ಕಟ್ಟಾಗುತ್ತದೆ. ಹೀಗೆ ಪದೇ ಪದೇ ಕಟ್ಟಾದಾಗ ನೀವು ಆ ಕೊಳೆತ ನೆನಪುಗಳನ್ನು ಎಂಜಾಯ್ ಮಾಡುವ ಅಭ್ಯಾಸ ಬಿಡುತ್ತೀರಿ. ಏಕೆಂದರೆ ಪದೇ ಪದೆ ನೆನಪಿಗೆ ಭಂಗ ಬಂದರೆ ನೀವದನ್ನು ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ.
5. ಮೆದುಳಿಗೊಂದು ಕ್ರಿಯೆ
ಮನಸ್ಸನ್ನು ಡೈವರ್ಟ್ ಮಾಡಲು ಇದೊಂದು ಅತ್ಯುತ್ತಮ ವಿಧಾನ. ಯಾವಾಗ ಹಳೆ ಕ್ಯಾಸೆಟ್ ಮನಸ್ಸಿನೊಳಗೆ ಪ್ಲೇ ಆಗತೊಡಗುತ್ತದೋ, ಆಗ ಮೆದುಳಿಗೊಂದು ಕೆಲಸ ಕೊಡಿ. ಉದಾಹರಣೆಗೆ ಎದುರಿಗಿರುವ ಮೂರು ವಸ್ತುಗಳನ್ನು ಗುರುತಿಸಿ ಮುಟ್ಟಬೇಕು, ಸುತ್ತಲಿರುವ ಐದು ಬಣ್ಣಗಳನ್ನು ಗುರುತಿಸಬೇಕು ಜೊತೆಗೆ, ಕೇಳಿಬರುತ್ತಿರುವ ಸಣ್ಣಪುಟ್ಟ ಶಬ್ದಗಳನ್ನೂ ಗ್ರಹಿಸಿ ಅದು ಎಲ್ಲಿಂದ ಬರುತ್ತಿರಬಹುದೆಂದು ಯೋಚಿಸಬೇಕು. ಇದರಿಂದ ಮೆದುಳು ಏನೋ ಕೆಲಸದಲ್ಲಿ ಬ್ಯುಸಿಯಾಗಿ, ನೆನಪಿನ ಗಂಟನ್ನು ಬಿಚ್ಚಲು ಮರೆಯುತ್ತದೆ.
6. ಸಮಯ ನೀಡಿ
ದೊಡ್ಡವರು ಹೇಳುತ್ತಾರೆ, ಕಾಲಕ್ಕಿಂತ ಉತ್ತಮ ವೈದ್ಯ ಇನ್ನೊಬ್ಬನಿಲ್ಲ ಎಂದು. ಯಾವುದೇ ವಿಷಯವಾದರೂ, ಎಷ್ಟೇ ಮುಖ್ಯವೆನಿಸಿದ್ದಾದರೂ ಕಾಲ ಕಳೆದಂತೆಲ್ಲ ಅದು ಪ್ರಾಮುಖ್ಯತೆ ಕಳೆದುಕೊಳ್ಳತೊಡಗುತ್ತದೆ. ಹೊಸ ಅನುಭವಗಳಿಗೆ ಒಡ್ಡಿಕೊಂಡಂತೆಲ್ಲ ಹಳೆಯದು ಸಣ್ಣ ವಿಷಯ ಎನಿಸತೊಡಗುತ್ತದೆ. ಹಾಗಾಗಿ, ನೆನಪುಗಳಿಂದ ಹೊರಬರಲು ಸ್ವಲ್ಪ ಸಮಯ ನೀಡಿ. ಬದುಕನ್ನು ಬಹಳಷ್ಟು ಹೊಸ ವಿಷಯಗಳಿಗೆ ತೆರೆದುಕೊಳ್ಳಿ.