
ಬೆಂಗಳೂರು(ಜ.22): ಮೈಸೂರು ಸ್ಯಾಂಡಲ್ ಸೋಪ್ ಅಂದ್ರೆ ಅದು ಕೇವಲ ಕರ್ನಾಟಕದ್ದಲ್ಲ ಎಲ್ಲ ಭಾರತೀಯರ ಹೆಮ್ಮೆ. ಸುಮಾರು 100 ವರ್ಷಗಳಿಂದ ಭಾರತೀಯರ ಸ್ಮಾನದ ಕೋಣೆ ಅಲಂಕರಿಸಿರುವ ಈ ಸೋಪ್ ಇಂದಿಗೂ ಎಲ್ಲರ ಎಚ್ಚುಮೆಚ್ಚು.
ಅಷ್ಟಕ್ಕೂ ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಯಾಕಿಷ್ಟು ಫೇಮಸ್ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಇಲ್ಲ. ಗಂಧದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಭಾರತೀಯರ ಆಯ್ಕೆ ಸಹಜವಾಗಿಯೇ ಮೈಸೂರು ಸ್ಯಾಂಡಲ್ ಸೋಪ್ ಅಂದರೆ ಅತಿಶೋಕ್ತಿಯಲ್ಲ.
ಶತಕ ದಾಟಿದ ಕರುನಾಡಿನ 'ಮೈಸೂರು ಸ್ಯಾಂಡಲ್': ನಿಮಗೆ ಗೊತ್ತಿರದ ಇಂರ್ಟೆಸ್ಟಿಂಗ್ ಮಾಹಿತಿ
ಈ ಸೋಪ್ ತಲೆತಲಾಂತಗಳಿಂದ ಭಾರತೀಯರ ಮನೆ ಮನಗಳಲ್ಲಿ ಸ್ಥಾನ ಪಡೆದಿದೆ. ಶುದ್ಧ ಗಂಧದ ಈ ಸೋಪ್ ಅಂದ್ರೆ ಮನೆಯ ಹಿರಿಯರಿಂದ ಹಿಡಿದು ಹಾಲುಗಲ್ಲದ ಕಂದಮ್ಮನಿಗೂ ಇಷ್ಟ.
ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲ ಭಾರತೀಯರ ಸ್ನಾನದ ಕೋಣೆ ಅಲಂಕರಿಸಿರುವ ಮೈಸೂರು ಸ್ಯಾಂಡಲ್ ಸೋಪ್, ಇನ್ನೂ ನೂರಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯರ ಮನದಲ್ಲಿ ರಾರಾಜಿಸಲಿ ಎಂಬುದೇ ಎಲ್ಲರ ಆಶಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.