
ಭಾರತದ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಒಂದು ನಿಗೂಢ ಮಸೀದಿ ಇದೆ, ಅದನ್ನು ಯಾವುದೇ ಮನುಷ್ಯನು ನಿರ್ಮಿಸಿಲ್ಲ, ಬದಲಾಗಿ ಒಬ್ಬ ಜಿನನು(Jinns) ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತದೆ. ಈ ಮಸೀದಿಯ ಹೆಸರು ಮಸ್ಜಿದ್-ಎ-ಜಮಾಯೆ ಅಬ್ದುಲ್ಲಾ(Masjid-e-Jamaye Abdullah) . ಜಿನ್ ಗಳಿಗೆ ಸಂಬಂಧಿಸಿದ ಇದರ ಕುತೂಹಲಕಾರಿ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ.
ಬಾಂಗ್ಲಾದೇಶದ ಲಕ್ಷ್ಮಿಪುರದಲ್ಲಿರುವ ಮಸ್ಜಿದ್-ಎ-ಜಮಾಯೆ ಅಬ್ದುಲ್ಲಾ ಎಲ್ಲ ಮಸೀದಿಗಳಂತಲ್ಲ. ಇದನ್ನು ಮನುಷ್ಯರಿಂದ ನಿರ್ಮಿಸಲಾಗಿಲ್ಲ, ಬದಲಾಗಿ ಒಬ್ಬ ಜಿನ್‌ನಿಂದ ಒಂದೇ ರಾತ್ರಿಯಲ್ಲಿ ಕಟ್ಟಲ್ಪಟ್ಟಿದೆ ಎಂಬ ದಂತಕಥೆ ಸ್ಥಳೀಯರಲ್ಲಿ ಪ್ರಚಲಿತವಾಗಿದೆ. 1888ರಲ್ಲಿ ಮೌಲಾನಾ ಅಬ್ದುಲ್ಲಾ ಎಂಬಾತನ ಸಹಾಯದಿಂದ ಈ ಮಸೀದಿ ರಚನೆಯಾಯಿತು ಎಂದು ಹೇಳಲಾಗುತ್ತದೆ. ಆದರೆ ಇದರ ನಿಜವಾದ ರಹಸ್ಯ ಬೇರೆಯೇ ಇದೆ!
ಮಧ್ಯರಾತ್ರಿಯಲ್ಲಿ ಕೇಳಿಬರುತ್ತೆ ವಿಚಿತ್ರ ಶಬ್ದಗಳು
ಸ್ಥಳೀಯರ ಪ್ರಕಾರ, ಈ ಮಸೀದಿಯಲ್ಲಿ ಯಾವುದೇ ಮೌಲಾನಾ ಅಥವಾ ಮುಫ್ತಿ ವಾಸಿಸುವುದಿಲ್ಲ. ಆದರೂ, ಮಧ್ಯರಾತ್ರಿಯ ಸಮಯದಲ್ಲಿ ಕುರಾನ್‌ನ ಪದ್ಯಗಳನ್ನು ಯಾರೋ ಪಠಿಸುವಂತಹ ಶಬ್ದಗಳು ಕೇಳಿಬರುತ್ತವೆ. ಒಳಗೆ ಪ್ರವೇಶಿಸಿದವರಿಗೆ ಯಾರೋ ಹಿಂಬಾಲಿಸುತ್ತಿರುವಂತೆ ಭಯಾನಕ ಅನುಭವವಾಗುತ್ತದೆ. ಈ ಕಾರಣದಿಂದಲೇ ಇಲ್ಲಿ ಮನುಷ್ಯರಿಗಿಂತ ಜಿನ್‌ಗಳ ಸಂಖ್ಯೆಯೇ ಹೆಚ್ಚು ಎಂದು ನಂಬಲಾಗಿದೆ.
ಜಿನ್‌ಗಳ ವಾಸಸ್ಥಾನ:
ಈ ಮಸೀದಿಯ ಒಡಲಾಳದಲ್ಲಿ ಜಿನ್‌ಗಳು ವಾಸಿಸುತ್ತವೆ ಎಂಬ ನಂಬಿಕೆ ಗಟ್ಟಿಯಾಗಿದೆ. 200 ವರ್ಷಗಳಿಂದ ಈ ಮಸೀದಿಯನ್ನು ಜಿನ್‌ಗಳೇ ಆಕ್ರಮಿಸಿಕೊಂಡಿವೆ ಎಂದು ಸ್ಥಳೀಯರು ಹೇಳುತ್ತಾರೆ. ಇಂತಹ ನಿಗೂಢ ಮಸೀದಿಗಳು ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಭಾರತ, ಅಜೆರ್ಬೈಜಾನ್, ಮತ್ತು ಸೌದಿ ಅರೇಬಿಯಾದಂತಹ ದೇಶಗಳಲ್ಲಿಯೂ ಇವೆ ಎಂಬ ದಂತಕತೆಗಳಿವೆ
ಎಚ್ಚರಿಕೆ: ಶುದ್ಧ ಹೃದಯವಿರಲಿ!
ಈ ಮಸೀದಿಗೆ ಭೇಟಿ ನೀಡುವವರು ಶುದ್ಧ ಹೃದಯದಿಂದ ಬರಬೇಕು ಎಂದು ಸ್ಥಳೀಯರು ಎಚ್ಚರಿಸುತ್ತಾರೆ. ಒಂದು ವೇಳೆ ಶುದ್ಧತೆ ಇಲ್ಲದಿದ್ದರೆ, ಜಿನ್‌ಗಳು ನಿಮ್ಮೊಂದಿಗೆ ಬಂದು ಬಿಡಬಹುದು ಎಂಬ ಭಯವಿದೆ! ಈ ರಹಸ್ಯಮಯ ಮಸೀದಿಯ ಕತೆ ನಿಮಗೆ ಭಯ, ಕುತೂಹಲ, ಅಥವಾ ಆಶ್ಚರ್ಯ ತಂದರೂ, ಒಂದು ವಿಷಯ ಸ್ಪಷ್ಟ, ಜಿನ್ನತ್ ಮಸೀದಿ ಒಂದು ಸಾಮಾನ್ಯ ಸ್ಥಳವಲ್ಲ, ಅದು ಅತೀಂದ್ರಿಯ ಶಕ್ತಿಗಳ ಕೇಂದ್ರವಾಗಿದೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.