'ಅಪ್ಪಂದಿರ ದಿನ'ಕ್ಕೆ ಜನ್ಮ ಕೊಟ್ಟ 'ತಾಯಿ' ಈ ಮಗಳು!

By Web DeskFirst Published Jun 16, 2019, 2:40 PM IST
Highlights

ಅಪ್ಪಂದಿರ ದಿನಕ್ಕೆ ಜನ್ಮ ಕೊಟ್ಟ ಮಗಳೀಕೆ| ಅಮ್ಮನಂತೆ ಅಪ್ಪನಿಗೂ ಒಂದು ದಿನ ಬೇಕು ಎಂದು ಜಗತ್ತನ್ನೇ ಎದುರಿಸಿದ ದಿಟ್ಟ ಮಗಳು| 

ವಾಷಿಂಗ್ಟನ್[ಜೂ.16]: ಅದು 1909ರ ಘಟನೆ, ಸೊನೋರಾ ಲುಯೀಸ್ ಸ್ಮಾರ್ಟ್ ಹಾಡ್ ಹೆಸರಿನ 16 ವರ್ಷದ ಹುಡುಗಿ ಅಪ್ಪಂದಿರ ದಿನದ ಆಚರಣೆ ಆರಂಭಿಸಿದ್ದಳು. ವಾಸ್ತವವಾಗಿ ಸೊನೋರಾ 16 ವರ್ಷದವಳಿದ್ದಾಗ ಆಕೆಯ ತಾಯಿ, ಆಕೆಯನ್ನು ಹಾಗೂ ಐವರು ತಮ್ಮಂದಿರನ್ನು ಬಿಟ್ಟು ಹೋಗಿದ್ದಳು.

ಬಳಿಕ ಸೊನೋರಾ ಹಾಗೂ ಆಕೆಯ ತಮ್ಮಂದಿರ ಜವಾಬ್ದಾರಿ ಆಕೆಯ ತಂದೆಯ ಹೆಗಲೇರಿತ್ತು. 1909ರಲ್ಲಿ ಒಂದು ದಿನ ಆಕೆ ಅಮ್ಮಂದಿರ ದಿನದ ಕುರಿತು ಕೇಳಿಸಿಕೊಳ್ಳುತ್ತಾಳೆ. ಹೀಗಿರುವಾಗಲೇ ಇದೇ ರೀತಿ ಅಪ್ಪಂದಿರ ದಿನವೂ ಇರಬೇಕು ಎಂದು ಭಾವಿಸುತ್ತಾಳೆ.

ಈ ಯೋಚನೆ ಬಂದಿದ್ದೇ ತಡ ಸೊನೋರಾ ಅಪ್ಪಂದಿರ ದಿನ ಆಚರಿಸಲು ಮನವಿಯೊಂದನ್ನು ಸಲ್ಲಿಸುತ್ತಾ 'ನನ್ನ ತಂದೆಯ ಹುಟ್ಟುಹಬ್ಬ ಜೂನ್ ತಿಂಗಳಲ್ಲಿ ಬರುತ್ತದೆ. ಹೀಗಾಗಿ ಅಪ್ಪಂದಿರ ದಿನವನ್ನು ಜೂನ್ ತಿಂಗಳಲ್ಲೇ ಆಚರಿಸಲು ಅವಕಾಶ ನೀಡಬೇಕು' ಎಂದು ಕೋರಿಕೊಳ್ಳುತ್ತಾಳೆ. ವಿಚಾರಣೆ ಬಳಿಕ ಇದಕ್ಕೆ ಸಮ್ಮತಿ ಸೂಚಿಸಬೇಕಾದರೆ ಇಬ್ಬರು ಈ ಮನವಿಗೆ ಸಹಿ ಹಾಕಿ ಸನುಮೋದಿಸಬೇಕು ಎಂದು ನ್ಯಾಯಾಲಯ ತಿಳಿಸುತ್ತದೆ. ಇದನ್ನು ಕೇಳಿದ ಸೊನೋರಾ ಹತ್ತಿರದಲ್ಲಿದ್ದ ಚರ್ಚ್ ಗೆ ತೆರಳಿ ತನ್ನ ಈ ವಿಚಾರವನ್ನು ತಿಳಿಸುತ್ತಾಳೆ. ಅಲ್ಲದೇ ಅಲ್ಲಿದ್ದವರನ್ನು ಮನವೊಲಿಸಲು ಯಶಸ್ವಿಯಾಗುತ್ತಾಳೆ.

ಆದರೆ ಕೆಲ ಕಾರಣಗಳಿಂದ ಸೊನೋರಾಗೆ ಅಪ್ಪಂದಿರ ದಿನ ಆಚರಿಸಲು ಅನುಮತಿ ಸಿಗುವುದಿಲ್ಲ. ಆದರೆ ಸೋಲೊಪ್ಪಿಕೊಳ್ಳದ ಈ ದಿಟ್ಟ ಮಗಳು ಅಭಿಯಾನವೊಂದನ್ನು ಆರಂಭಿಸುತ್ತಾಳೆ. ಇದು ಯುಎಸ್ ವರೆಗೂ ವ್ಯಾಪಿಸುತ್ತದೆ. ಅಂತಿಮವಾಗಿ 1910ರ ಜೂನ್ 19ರಂದು ಅಪ್ಪಂದಿರ ದಿನವನ್ನಾಚರಿಸಲು ನುಮತಿ ಸಿಗುತ್ತದೆ.

ಹೀಗಿರುವಾಗಲೇ 1914ರಿಂದ ಅಮ್ಮಂದಿರ ದಿನವನ್ನು ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಯಿತು. ಆದರೆ ಅಪ್ಪಂದಿರ ದಿನಕ್ಕೆ 1972ರವರೆಗೂ ರಾಷ್ಟ್ರೀಯ ಮಾನ್ಯತೆ ಸಿಕ್ಕಿರಲಿಲ್ಲ. ಅಧ್ಯಕ್ಷ ವುಡ್ರೋ ವಿಲ್ಸನ್, ಕ್ಯಾಲ್ವಿನ್ ಕಾಲಿಜ್ ಹಾಗೂ ಲಿಂಡನ್ ಬೀ ಜಾನ್ಸನ್ ಸೇರಿದಂತೆ ಎಲ್ಲರೂ ಅಪ್ಪಂದಿರಿಗೆ ಸಮರ್ಪಿಸಿದ ಈ ದಿನವನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸುವಂತೆ ಅಭಿಯಾನ ಆರಂಭಿಸಿದರು. ಕೊನೆಗೂ 1970ರಲ್ಲಿ ಅಧ್ಯಕ್ಷ ರಿಚ್ಚರ್ಡ್ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದರು. 

ನಿಧಾನವಾಗಿ ಅಪ್ಪಂದಿರ ದಿನದಾಚರಣೆಯ ಟ್ರೆಂಡ್ ಇಡೀ ಜಗತ್ತಿಗೇ ವ್ಯಾಪಿಸಿತು. ಸದ್ಯ ಮನೆ ಮನೆಗಳಲ್ಲೂ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ.

click me!