
ಈಗಿನ ಫ್ಯಾಷನ್ ಯುಗದಲ್ಲಿ ಬೆಳ್ಳಿ ಗೆಜ್ಜೆ ಧರಿಸೋದು ಯಾರು ಎಂದು ಹೇಳುತ್ತೀರಿ ಆಲ್ವಾ? ಆದರೆ ಇದರಿಂದ ಏನೇನು ಲಾಭ ಇದೆ ಅನ್ನೋದು ನಿಮಗೆ ತಿಳಿಸಿದ್ದರೆ ಉತ್ತಮ..
ಹಿಂದಿನ ಕಾಲದಲ್ಲಿ ಮಹಿಳೆಯರು ಮತ್ತು ಮಕ್ಕಳು ಕಾಲಿಗೆ ಗೆಜ್ಜೆ ಹಾಕೋದು ಒಂದು ಸಂಪ್ರದಾಯವಾಗಿತ್ತು. ಇದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂಬ ನಂಬಿಕೆಯೂ ಇತ್ತು. ಆದರೆ ಈಗೀಗ ಗೆಜ್ಜೆ ಹಾಕೋದೇ ಕಡಿಮೆಯಾಗಿದೆ. ಫ್ಯಾಷನ್ ಹೆಸರಿನಲ್ಲಿ ಬೇರೆ ಬೇರೆ ರೀತಿಯ ಸ್ಟೈಲ್ ಬಂದು ಬೆಳ್ಳಿ ಗೆಜ್ಜೆ ಧರಿಸೋದೇ ಕಡಿಮೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- ಕಾಲ್ಗೆಜ್ಜೆಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎನ್ನುತ್ತಾರೆ. ಇದಕ್ಕಾಗಿಯೇ ಹಿರಿಯರು ಮತ್ತು ಎಲ್ಲರೂ ಇದನ್ನು ಧರಿಸಬೇಕೆನ್ನುತ್ತಾರೆ ಹಿರಿಯರು .
- ಮೈಯಲ್ಲಿರುವ ಉಷ್ಣವನ್ನು ಅದು ಹೀರಿಕೊಂಡು ದೇಹವನ್ನು ತಂಪಾಗಿಡುತ್ತದೆ.
- ಗೆಜ್ಜೆ ಸದ್ದು ಮನೆ ಪೂರ್ತಿಯಾಗಿ ಘಲ್ ಘಲ್ ಎಂದು ಕೇಳುತ್ತಿದ್ದರೆ, ಅದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರ ಹೋಗುತ್ತದೆ.
ಮದುವೆಯಲ್ಲಿ ಮದರಂಗಿ ಹಚ್ಚಿಕೊಳ್ಳುವುದೇಕೆ?
- ಬೆಳ್ಳಿ ಕಾಲ್ಗೆಜ್ಜೆ ಹೆಣ್ಣು ಮಕ್ಕಳು ಧರಿಸಿದರೆ ಮಹಿಳೆಯರು ಮತ್ತು ಮಕ್ಕಳು ಆರೋಗ್ಯದಿಂದ ಇರುತ್ತಾರೆ.
- ದೇಹದ ಸುಕ್ಕುಗಳೆಲ್ಲಾ ಮಾಯವಾಗಿ ದೇಹದ ಅಂದವನ್ನು ಹೆಚ್ಚಿಸುತ್ತದೆ ಬೆಳ್ಳಿ ಗೆಜ್ಜೆ.
- ಬೆಳ್ಳಿ ಗೆಜ್ಜೆಯ ಶಬ್ಧದಿಂದ ಮನೆ ವಾತಾವರಣ ಖುಷಿಯಾಗಿರುತ್ತದೆ. ಜೊತೆಗೆ ಮನೆ ಮಂದಿಯೂ ನೆಮ್ಮದಿಯಲ್ಲಿರಲು ಸಹಕರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.