ಅಮಾವಾಸ್ಯೆಯಂದು ಈ ಕೋಟೆಯಿಂದ ಕೇಳಿ ಬರುತ್ತೆ ವಿಚಿತ್ರ ಕೂಗು!

By Web Desk  |  First Published May 17, 2019, 3:03 PM IST

ಕೆಲವೆಡೆ ಘಟಿಸುವ ಅನೇಕ ಘಟನೆಗಳಿಗೆ ಯಾವುದೇ ಉತ್ತರವಿಲ್ಲ. ಹೀಗೂ ಉಂಟೇ ಎಂಬ ಪ್ರಶ್ನೆ ಮಾತ್ರ ಕಡೆಗೆ ಉಳಿದು ಬಿಡುತ್ತದೆ. ತರ್ಕಕ್ಕೆ ನಿಲುಕದ ಹಲವು ಘಟನೆಗಳಲ್ಲಿ ಇದೂ ಒಂದು.ಪೇಶ್ವೆ ಬಾಜಿರಾವ್ ಕಟ್ಟಿಸಿದ ಶನಿವಾರವಾಡ ಎಂಬ ಬೃಹತ್ ಕೋಟೆಯಿಂದು ಭಯಾನಕ ತಾಣವಾಗಿ ಮಾರ್ಪಾಡಾಗಿದೆ. ಈ ಭಯಾನಕ ಕೋಟೆಯ ಹಿಂದಿನ ರಹಸ್ಯವೇನು? 


ಭಾರತದ ಮುಖ್ಯ ತಾಣವಾದ ಪುಣೆ ವೇಗವಾಗಿ ಬೆಳೆಯುತ್ತಿರುವ ನಗರ. ಈ ನಗರದ ನಡುವೆ ಇರುವ ಒಂದು ಸುಂದರ ಕೋಟೆ ಶನಿವಾರವಾಡ. 1732ರಲ್ಲಿ ಬಾಜಿರಾವ್ ಪೇಶ್ವೆ ನಿರ್ಮಿಸಿದ ಈ ಐತಿಹಾಸಿಕ ಕೋಟೆಯನ್ನು ಮೂರನೇ ಆಂಗ್ಲೋ-ಮರಾಠರ ಯುದ್ಧದ ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. 

ಹಿಂದಿನ ಕಾಲದಲ್ಲಿ ಬೃಹತ್ ಕೋಟೆಯಾಗಿದ್ದ ಇದು ನಂತರ ಬೆಂಕಿಗೆ ಆಹುತಿಯಾಗಿ ಕೇವಲ ಅವಶೇಷಗಳು ಮಾತ್ರ ಉಳಿದುಕೊಂಡಿದೆ. ಆದರೂ ಇಂದಿಗೂ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ನೋಡಲು ಅದ್ಭುತವಾಗಿರೋ ಈ ಕೋಟೆ ನಿಗೂಢವೂ ಹೌದು. ಅದಕ್ಕೆ ಸಂಜೆ ನಂತರ ಕೋಟೆಗೆ ಪ್ರವೇಶ ನಿಷೇಧ. 

Tap to resize

Latest Videos

undefined

ಗೋವಾದ 6 ನಿಗೂಢ ಜಾಗಗಳಿವು! ಹೀಗೂ ಉಂಟು...

ಪ್ರತಿ ಅಮಾವಾಸ್ಯೆಯ ರಾತ್ರಿ ಈ ಕೋಟೆಯು ಭಯಾನಕ ಸ್ಥಳವಾಗಿ ಮಾರ್ಪಾಟಾಗುತ್ತದೆ. ಅಮಾವಾಸ್ಯೆಯಿಂದ ಈ ಕೋಟೆಯ ಒಳಗಿನಿಂದ ಕೇಳಿ ಬರುವ ಕೂಗು ಭಯ ಹುಟ್ಟಿಸುತ್ತದೆ. ಜೊತೆಗೆ ಬೇಸರ ತರುತ್ತದೆ. ಅಂತಹ ಕಥೆ ಏನಿದೆ ಈ ಕೋಟೆಯಲ್ಲಿ?

ಬಾಜಿರಾವ್ ಮರಣದ ನಂತರ ಆತನ ಮಗ ನಾನಾ ಸಾಹೇಬ್ ಮರಾಠ ಅಧಿಕಾರ ವಹಿಸಿಕೊಂಡನು. ನಾನಾ ಸಾಹೇಬ್‍ನಿಗೆ ಮೂವರು ಪುತ್ರರು. ಮಾಧವ ರಾವ್, ವಿಶ್ವಸ್ರಾವ್ ಮತ್ತು ನಾರಾಯಣರಾವ್‍. 3ನೇ ಪಾಣಿಪತ್ ಯುದ್ಧದಲ್ಲಿ ನಾನಾ ಸಹೇಬ್ ಮೃತಪಟ್ಟ ನಂತರ ಹಿರಿಯ ಪುತ್ರ ಮಾಧವ ರಾಯ ಉತ್ತರಾಧಿಕಾರಿಯಾಗುತ್ತಾನೆ. 

ಆದರೆ ಕೆಲವೇ ದಿನಗಳಲ್ಲಿ ಮಾಧವರಾವ್ ಜೊತೆ ಸಹೋದರ ವಿಶ್ವಾಸ್ ರಾವ್ ಕೂಡ ಮರಣ ಹೊಂದುತ್ತಾನೆ. ಹೀಗಾಗಿ ಕೊನೆಯ ಮಗ ನಾರಾಯಣ ರಾವ್‌ನನ್ನು  ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ. ಆದರೆ ನಾರಾಯಣ ರಾವ್ ಕೇವಲ ಹದಿನಾರು ವರ್ಷದ ವಯಸ್ಸಿನವನಾದ ಕಾರಣ ಚಿಕ್ಕಪ್ಪ ರಘುನಾಥ್‍ರಾವ್ ಯುವ ಸೋದರಳಿಯನ ಪರ ರಾಜ್ಯದ ಉಸ್ತುವಾರಿ ವಹಿಸಿಕೊಳ್ಳುತ್ತಾನೆ.

ಬೇಸಿಗೆ ಮುಗಿಯೋ ಮುನ್ನ ದೇಹ, ಮನವನ್ನು ಮುದಗೊಳಿಸುವ ಈ ತಾಣಗಳಿಗೆ ಭೇಟಿ ನೀಡಿ!

ಆದರೆ ಅಧಿಕಾರದಾಹಿಯಾದ ಚಿಕ್ಕಪ್ಪ ರಘುನಾಥರಾವ್ ಹಾಗೂ  ಚಿಕ್ಕಮ್ಮ ಆಂದೀಬಿಯಾ 1773ರಲ್ಲಿ ಕಾವಲುಗಾರರಿಗೆ ಹೇಳಿ 16 ವರ್ಷದ ನಾರಾಯಣ ರಾವ್ ನಿದ್ರಿಸುವಾಗ ಕೊಲ್ಲಿಸುತ್ತಾರೆ. ನಿದ್ರೆಯಲ್ಲಿಯೇ ಚಿಕ್ಕಪ್ಪನಿಗೆ 'ಕಾಕಾ ಮಲಾ ವಾಚವಾ' ಎಂದು ಕೇಳಿಕೊಂಡಿದ್ದ. ಆದರೆ ನಿರ್ದಯಿಯಾದ ಚಿಕ್ಕಪ್ಪ 16 ವರ್ಷದ ನಾರಾಯಣ ರಾವ್‍ನನ್ನು ತುಂಡು ತುಂಡಾಗಿ ಕತ್ತರಿಸಿ ಮೂಟೆ ಕಟ್ಟಿ ನದಿಯಲ್ಲಿ ಎಸೆಯುತ್ತಾನೆ.

ಇದಾದ ನಂತರ ಇಂದಿನವರೆಗೂ ಪ್ರತಿ ಅಮಾವಾಸ್ಯೆಯಂದು ಈ ಕೋಟೆಯಿಂದ ರಾತ್ರಿಯಲ್ಲಿ ಮಾತ್ರ 'ಕಾಕಾ ಮಲಾ ವಾಚವಾ' ಎಂಬ ಕೂಗು ಕೇಳಿಸುತ್ತದೆ, ಎಂದೇ ಜನರು ಭಯಭೀತರಾಗಿದ್ದಾರೆ. ನನ್ನನ್ನು ಕಾಪಾಡು ಚಿಕ್ಕಪ್ಪ ಎಂದು ಗೋಗರೆದ ಬಾಲಕನ ಆತ್ಮ ಕೋಟೆಯ ಸುತ್ತ ಸುತ್ತಾಡುತ್ತಿದೆ ಎಂಬ ಪ್ರತೀತಿ ಇದೆ. ಇದೇ ಕಾರಣದಿಂದ ಸಂಜೆ ನಂತರ ಈ ಕೋಟೆಗೆ ಪ್ರವೇಶ ನಿಷೇಧಿಸಲಾಗಿದೆ.

click me!