
ಬೇಕಾಗುವ ಸಾಮಾಗ್ರಿಗಳು:
-ಎಳೆ ಹುಣಸೆ ಚಿಗುರು
- ಮೆಣಸಿಣಕಾಯಿ
- ಜೀರಿಗೆ
- ಕರಿಬೇವು
- ಈರುಳ್ಳಿ
- ಬೆಳ್ಳುಳ್ಳಿ
- ಉಪ್ಪು
- ಸ್ವಲ್ಪ ಬೆಲ್ಲ
ಮಾಡುವ ವಿಧಾನ:
ಎಳೆ ಹುಣಸೆ ಚಿಗುರನ್ನು ಬಾಡಿಸಿ, ಅದಕ್ಕೆ ಹುರಿದ ಒಣ ಮೆಣಸಿಣಕಾಯಿ, ಹುರಿದ ಜೀರಿಗೆ, ಹುರಿದ ಕರಿಬೇವು, ಈರುಳ್ಳಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿ. ಬೇಕಿದ್ದರೆ ಚೂರು ಬೆಲ್ಲವನ್ನೂ ಸೇರಿಸಬಹುದು. ಹುಳಿ ಹಾಗೂ ಖಾರ ಜೊತೆಯಾಗಿ ಅದ್ಭುತ ರುಚಿ ತಂದುಕೊಡುತ್ತದೆ ಈ ಚಟ್ನಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.