ಹೆಚ್ಚು ಕೂದಲಿರುವ ಪುರುಷರೆಂದರೆ ಹುಡುಗಿಯರಿಗೆ ಇಷ್ಟವಂತೆ!

Published : Apr 09, 2017, 07:54 AM ISTUpdated : Apr 11, 2018, 01:05 PM IST
ಹೆಚ್ಚು ಕೂದಲಿರುವ ಪುರುಷರೆಂದರೆ ಹುಡುಗಿಯರಿಗೆ ಇಷ್ಟವಂತೆ!

ಸಾರಾಂಶ

ಹುಡುಗಿ​ಯರನ್ನು ಆಕರ್ಷಿಸುವುದಕ್ಕಾಗಿಯೇ ಜಿಮ್‌'ಗೆ ಹೋಗಿ ದೇಹವನ್ನು ಕಟ್ಟುಮಸ್ತಾಗಿ ಬೆಳೆಸಿಕೊಳ್ಳುವ ಹುಡುಗರು ಇನ್ನು ಮುಂದೆ ದೇಹದ ಮೇಲೆ ಕೂದಲು ಬೆಳೆಸು​ವತ್ತ ಗಮನ ಹರಿಸಿದರೆ ಗತಿ ಏನು?

ಸಮೀಕ್ಷೆ ಸಂಗತಿ

ಮೈ ತುಂಬಾ ಕೂದಲು ಹೊಂದಿ, ಅದರಿಂದ ಕಿರಿಕಿರಿ ಅನುಭವಿಸುತ್ತಿರುವಂಥ ಪುರುಷರಿಗೆ ಇಲ್ಲೊಂದು ಒಳ್ಳೆ ಸುದ್ದಿಯಿದೆ. ಹುಡುಗಿಯರು ಹುಡುಗನ ಯಾವ ಗುಣದಿಂದ ಆಕರ್ಷಿತ​ವಾ​ಗು​​ತ್ತಾರೆ ಎಂದು ಕೇಳಿದರೆ, ಕೆಲ​ವರಿಗೆ ಹುಡುಗನ ಮುಖ ಲಕ್ಷಣ ಇಷ್ಟವಾದರೆ ಇನ್ನು ಕೆಲ​ವ​ರಿಗೆ ಹುಡುಗನ ಸ್ಟೈಲ್‌, ಮಾತು ಹಾಗೂ ಇತರೆ ಹವ್ಯಾಸ​ ಇಷ್ಟವಾಗುತ್ತದೆ. ಆದರೆ, ಇಲ್ಲೊಂದು ವೆಬ್‌'ಸೈಟ್‌ ಸಂಸ್ಥೆ ನಡೆ​ಸಿದ ಸಮೀಕ್ಷೆಯಲ್ಲಿ ತಿಳಿದು​ಬಂದ ವಿಚಾರವೇನೆಂದರೆ ಮೈ ತುಂಬಾ ಕೂದಲು ಹೊಂದಿರುವ ಪುರುಷನಿಗೆ ಹುಡುಗಿ​ಯರು ಆಕರ್ಷಿತರಾಗು​ತ್ತಾ​ರಂತೆ. ಮೈ ತುಂಬಾ ಕೂದಲು ಹೊಂದಿರುವಿಕೆಯು ಪುರುಷತ್ವದ ಸಂಕೇತವೋ ಇಲ್ಲವೋ ಗೊತ್ತಿಲ್ಲ. ಆದರೆ, ಕೂದಲು ಹೊಂದಿ​ರುವ ಪುರುಷರು ಹುಡು​ಗಿ​ಯರಿಗೆ ಇಷ್ಟವಾಗುತ್ತಾ​ರಂತೆ. ಅದರಲ್ಲೂ ಎದೆಯ ತುಂಬಾ ಕೂದಲು ಇದ್ದರಂತೂ ಅವರ ಪ್ರೀತಿ ಇನ್ನೂ ಹೆಚ್ಚಾ​ಗು​ತ್ತದೆ ಎಂದು ಸಮೀಕ್ಷೆ ವರದಿ ಹೇಳಿದೆ.

ಹುಡುಗಿ​ಯರನ್ನು ಆಕರ್ಷಿಸುವುದಕ್ಕಾಗಿಯೇ ಜಿಮ್‌'ಗೆ ಹೋಗಿ ದೇಹವನ್ನು ಕಟ್ಟುಮಸ್ತಾಗಿ ಬೆಳೆಸಿಕೊಳ್ಳುವ ಹುಡುಗರು ಇನ್ನು ಮುಂದೆ ದೇಹದ ಮೇಲೆ ಕೂದಲು ಬೆಳೆಸು​ವತ್ತ ಗಮನ ಹರಿಸಿದರೆ ಗತಿ ಏನು? ಈ ವಿಚಾರ ಏನಾ​ದರೂ ಮಹಿಳೆಯರ ಕೇಶತೈಲ ತಯಾರಿಸುವ ಕಂಪನಿ​ಯ​ವರಿಗೆ ತಿಳಿದರೆ, ಪುರುಷರ ದೇಹದ ಮೇಲೆ ಕೂದಲು ಬೆಳೆ​ಸುವ ಕ್ರೀಮ್‌ ಅಥವಾ ತೈಲವನ್ನು ಮಾರುಕಟ್ಟೆ ತಂದರೂ ತರಬಹುದು.

epaper.kannadaprabha.in

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ