ಸಾಮಾನ್ಯವಾಗಿ ಅಂಗಡಿಗಳಲ್ಲಿ ಕೊಟ್ಟರಸೀದಿಗಳು ಪರ್ಸ್ ಅಥವಾ ಜೇಬು ಸೇರುತ್ತದೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಏಕೆಂದರೆ ತಜ್ಞರ ಪ್ರಕಾರ ಶೇ.90ರಷ್ಟುರಸೀದಿಗಳಲ್ಲಿ ಕ್ಯಾನ್ಸರ್‌ಕಾರಕ ಅಂಶವಿರುತ್ತದಂತೆ. ಥರ್ಮಲ್ ಪೇಪರ್‌ನಲ್ಲಿ ಅಚ್ಚಾಗುವ ಇಂಕ್‌ನಲ್ಲಿ ಬಿಪಿಎ (ಬಿಸ್ಫೆನಾಲ್) ಅಂಶವನ್ನು ಒಳಗೊಂಡಿರುತ್ತದೆ.
ಬೆಂಗಳೂರು (ಜ. 20): ಬಟ್ಟೆ, ಸಾಮಾನು ಸರಂಜಾಮು ಹೀಗೆ ಏನೇ ಖರೀದಿಸಿದರು ಬಿಲ್ ಅಥವಾ ರಸೀದಿ ಪಡೆಯುವುದು ಸಾಮಾನ್ಯ. ಕೆಲವೊಮ್ಮೆ ಅಂಗಡಿಯಾತ ಕೊಡದಿದ್ದರು ನಾವೇ ಕೇಳಿ ಪಡೆಯುತ್ತೇವೆ. ಆದರೆ ಗ್ರಾಹಕರೆಲ್ಲಾ ಹೌಹಾರುವಂತ ಸುದ್ದಿಯನ್ನು ಸಮೀಕ್ಷಕರು ಹೇಳುತ್ತಿದ್ದಾರೆ. ಅದೇನೆಂದರೆ ರಸೀದಿ ಪಡೆಯುವುದರಿಂದ ಕ್ಯಾನ್ಸರ್ ಬರುತ್ತದಂತೆ.
ಸಾಮಾನ್ಯವಾಗಿ ಅಂಗಡಿಗಳಲ್ಲಿ ಕೊಟ್ಟರಸೀದಿಗಳು ಪರ್ಸ್ ಅಥವಾ ಜೇಬು ಸೇರುತ್ತದೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಏಕೆಂದರೆ ತಜ್ಞರ ಪ್ರಕಾರ ಶೇ.90ರಷ್ಟುರಸೀದಿಗಳಲ್ಲಿ ಕ್ಯಾನ್ಸರ್‌ಕಾರಕ ಅಂಶವಿರುತ್ತದಂತೆ. ಥರ್ಮಲ್ ಪೇಪರ್‌ನಲ್ಲಿ ಅಚ್ಚಾಗುವ ಇಂಕ್‌ನಲ್ಲಿ ಬಿಪಿಎ (ಬಿಸ್ಫೆನಾಲ್) ಅಂಶವನ್ನು ಒಳಗೊಂಡಿರುತ್ತದೆ. ಸಮೀಕ್ಷೆ ಪ್ರಕಾರ ಈ ರಾಸಾಯನಿಕವು ಹಾರ್ಮೋನ್ ಡಿಪೆಂಡೆಂಟ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಸ್ಥೂಲಕಾಯ, ಮಧುಮೇಹ, ಬಂಜೆತನಕ್ಕೂ ಕಾರಣವಾಗುತ್ತದಂತೆ.
ಯೂನಿವರ್ಸಿಟಿ ಆಫ್ ಗ್ರನಡಾದ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಸಂಶೋದಕರು ಬ್ರೆಜಿಲ್, ಸ್ಪೈನ್ ಮತ್ತು ಫ್ರಾನ್ಸ್‌ಗಳಲ್ಲಿ ನೀಡಲಾಗುವ 112 ಥರ್ಮಲ್ ರಸೀದಿಗಳನ್ನು ವಿಶ್ಲೇಷಿಸಿದಾಗ ಈ ಭಯಾನಕ ಫಲಿತಾಂಶ ವ್ಯಕ್ತವಾಗಿದೆ. ಹಾಗಾಗಿ ರಸೀದಿಗಳನ್ನು ಪಡೆಯುವಾಗ ಎಚ್ಚರಿಕೆಯಿಂದಿರಬೇಕು ಎಂದು ಸಮೀಕ್ಷಕರು ಎಚ್ಚರಿಸಿದ್ದಾರೆ.
ಅಂದರೆ ತಿನ್ನುವ ವಸ್ತುಗಳೊಂದಿಗೆ, ಪರ್ಸ್, ಜೇಬಿನಲ್ಲಿ ಇಂತಹ ರಸೀದಿಗಳನ್ನು ಇಡದಂತೆ, ಅವುಗಳ ಮೇಲೆ ಮತ್ತೆ ಬರೆಯದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ. ಅದಷ್ಟೇ ಅಲ್ಲದೆ ಮಕ್ಕಳ ಕೈಗೆ ಕೊಡಲೇ ಬಾರದು ಎಂದಿದ್ದಾರೆ. 2018ರಲ್ಲಿ ಮಿಚಿಗನ್ ಮೂಲದ ಲಾಭ ರಹಿತ ಸಂಘಟನೆಯೊಂದು ನಡೆಸಿದ ಸಮೀಕ್ಷೆಯಲ್ಲೂ ಇದೇ ಫಲಿತಾಂಶ ವ್ಯಕ್ತವಾಗಿದೆ.