
ದಿನವಿಡೀ ದುಡಿದು ದಣಿಯುವ ದೇಹಕ್ಕೆ ಸುಖ ನಿದ್ರೆ ಬಹುಮುಖ್ಯ. ಆದರೆ, ಅದೆಷ್ಟೋ ಮಂದಿ ರಾತ್ರಿ ನಿದ್ದೆ ಬಾರದೇ ಒದ್ದಾಡುತ್ತಿರುತ್ತಾರೆ. ನಿಮಗೂ ಆ ಸಮಸ್ಯೆ ಇದ್ದರೆ ಈ ಸೂಪರ್ ಟಿಪ್ಸ್ ತೊಗೊಳ್ಳಿ.
1. ಮಲಗುವ ಮುನ್ನ ಶಾಂತರಾಗಿ: ಹಾಸಿಗಗೆ ಹೋಗುವ ಮುನ್ನ ಮನಸ್ಸನ್ನ ಶಾಂತ ಸ್ಥಿತಿಗೆ ತನ್ನಿ. ಅಗತ್ಯಬಿದ್ದರೆ ಸ್ವಲ್ಪ ವಾಲಕ್ ಮಾಡಿ ರಿಲ್ಯಾಕ್ಸ್ ಆಗಿ. ಮನಸ್ಸನ್ನ ಹಿಡಿತಕ್ಕೆ ತಂದು ಸಮಚಿತ್ತದಲ್ಲಿರಿಸಿಕೊಳ್ಳಿ. ಸಾವಿರ ಚಿಂತೆ ಇದ್ದರೂ ಪಕ್ಕಕಿಡಿ.
2. ಟಿವಿ, ಮೊಬೈಲ್ ಸಹವಾಸ ಬೇಡ: ಮಲಗುವ ಮುನ್ನ ಕೊನೆಯ ಪಕ್ಷ ಒಂದು ಮುನ್ನವೇ ಟಿವಿ, ಕಂಪ್ಯೂಟರ್, ಮೊಬೈಲ್ ಸಹವಾಸ ಬಿಟ್ಟುಬಿಡಿ. ಟಿವಿ, ಕಂಪ್ಯೂಟರ್ ಬಳಸಿದ ಬಳಿಕ ಕಣ್ಣಿನ ಉರಿ, ಸುಸ್ತಿನ ಅನುಭವವಿದ್ದರೆ. ಶುಭ್ರವಾದ ತಣ್ಣನೆಯ ನೀರಿನಿಂದ ಕಣ್ಣನ್ನ ಶುಚಿಗೊಳಿಸಿ.
3. ಮಿತ ಆಹಾರ: ರಾತ್ರಿ ಸಂದರ್ಭ ಮಿತ ಆಹಾರವಿದ್ದರೆ ಉತ್ತಮ. ಊಟ ಬಳಿಕ ಸ್ವಲ್ಪ ಅತ್ತಿತ್ತ ಓಡಾಡಿ ಬಳಿಕ. ಆಹಾರ ಸೇವಿಸಿ ಒಂದು ಗಂಟೆ ಬಳಿಕ ಮಲಗಿ.
4. ಮಲಗುವ ಮುನ್ನ ಮನೆಯ ಸದಸ್ಯರೊಡನೆ ಬೆರೆತು ಉತ್ತಮ ಚರ್ಚೆ, ಮಾತುಕತೆ ನಡೆಸಿ ರಿಲ್ಯಾಕ್ಸ್ ಆಗಿ.
5. ಕಂಪ್ಯೂಟರ್, ಟಿವಿಗಿಂತ ಮಲಗುವ ಮುನ್ನ ಪುಸ್ತಕ ಓದುವ ಅಭ್ಯಾಸ ರೂಢಿಕೊಂಡರೆ ಉತ್ತಮ ನಿದ್ದೆಗೆ ದಾರಿಯಾಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.