
ಮಾಜಿ ಪೋರ್ನ್ ಹಾಗೂ ಹಾಲಿ ಬಾಲಿವುಡ್ ತಾರೆ ಸನ್ನಿ ಲಿಯೋನ್ ಪ್ರಪ್ರಥಮವಾಗಿ ತಮ್ಮ ಪತಿ ಡೇನಿಯಲ್ ವೆಬೆರ್ ಹಾಗೂ ಅವಳಿ ಮಕ್ಕಳ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಆಶ್ಚರ್ಯ ಉಂಟು ಮಾಡಿದ್ದಾಳೆ.
ಅವಳಿ ಮಕ್ಕಳಾದ ಅಶೆರ್ ಹಾಗೂ ನೊಹ್'ರೊಂದಿಗೆ ಭಾರತದಲ್ಲಿ ಬಂದಿಳಿದಿದ್ದಾರೆ. ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಾರ್ಚ್ 5ರಂದು ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಇದಕ್ಕೂ ಮೊದಲು ನಿಶಾ ಎಂಬ 21 ತಿಂಗಳ ಹೆಣ್ಣುಮಗುವನ್ನು ದತ್ತು ಪಡೆದುಕೊಂಡಿದ್ದರು. ಡೇನಿಯಲ್ ನನ್ನು ವಿವಾಹವಾಗಿದ್ದು ಹಾಗೂ ನಿಶಾ ಮತ್ತು ಅವಳಿ ಮಕ್ಕಳು ಜನಿಸಿದ್ದು ಸನ್ನಿಗೆ ಪವಾಡದ ಘಟನೆಗಳಾಗಿವೆ.
ಭಾರತೀಯ ಮೂಲದ ಸನ್ನಿ ಲಿಯೋನ್ ಕನ್ನಡದ ಡಿಕೆ, ಲವ್ ಯು ಆಲಿಯಾ, ಹಿಂದಿಯ ಜಿಸ್ಮ್, ರಾಹಿಸ್, ರಾಗಿಣಿ ಎಂಎಂಎಸ್, ಹೇಟ್ ಸ್ಟೋರಿ 2 ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾಳೆ. ಪ್ರಸ್ತುತ ತೆಲುಗು ಚಿತ್ರ ವೀರ ಮಾಂಡವಿ, ಹಿಂದಿಯ ಜೀ5 ಚಿತ್ರಗಳು ತೆರೆಕಾಣಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.