ಮಕ್ಕಳು ಬೆರಳು ಚೀಪುವುದಕ್ಕೆ ಏನು ಕಾರಣ?

Published : May 14, 2018, 05:56 PM IST
ಮಕ್ಕಳು ಬೆರಳು ಚೀಪುವುದಕ್ಕೆ ಏನು ಕಾರಣ?

ಸಾರಾಂಶ

ಸಣ್ಣ ಮಕ್ಕಳು ಬಾಯಲ್ಲಿ ಕೈಬೆರಳು ಹಾಕಿ ಚೀಪುವುದು ಸಾಮಾನ್ಯ ಲಕ್ಷಣ. ಇದೇನೂ ಬಹಳ ದೊಡ್ಡ ಸಮಸ್ಯೆ ಏನಲ್ಲ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಸುಸ್ತಾದಾಗ, ಬೇಸರವಾದಾಗ, ನಿದ್ದೆ ಬರುವ ಹೊತ್ತಲ್ಲಿ, ಸಾಂತ್ವನದ ಅವಶ್ಯಕತೆ ಇದ್ದಾಗ ಹೆಬ್ಬೆರಳನ್ನು ಚೀಪುವುದು ಕಂಡು ಬರುತ್ತದೆ. ಈ ಬೆರಳು ಚೀಪುವ ಅಭ್ಯಾಸ ಗರ್ಭಾವಸ್ಥೆಯ (15 ನೇ ವಾರದಲ್ಲಿ) ಆರಂಭವಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಸಣ್ಣ ಮಕ್ಕಳು ಬಾಯಲ್ಲಿ ಕೈಬೆರಳು ಹಾಕಿ ಚೀಪುವುದು ಸಾಮಾನ್ಯ ಲಕ್ಷಣ. ಇದೇನೂ ಬಹಳ ದೊಡ್ಡ ಸಮಸ್ಯೆ ಏನಲ್ಲ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಸುಸ್ತಾದಾಗ, ಬೇಸರವಾದಾಗ, ನಿದ್ದೆ ಬರುವ ಹೊತ್ತಲ್ಲಿ, ಸಾಂತ್ವನದ ಅವಶ್ಯಕತೆ ಇದ್ದಾಗ ಹೆಬ್ಬೆರಳನ್ನು ಚೀಪುವುದು ಕಂಡು ಬರುತ್ತದೆ. ಈ ಬೆರಳು ಚೀಪುವ ಅಭ್ಯಾಸ ಗರ್ಭಾವಸ್ಥೆಯ (15 ನೇ ವಾರದಲ್ಲಿ  ಆರಂಭವಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಗರ್ಭಾಶಯದ ಒಳಗೆ ಮಗು ದಿನಕ್ಕೆ ನೂರಾರು ಬಾರಿ ಆಕಳಿಸುತ್ತದೆ ಎಂದೂ ತಿಳಿದು ಬಂದಿದೆ. ಇದೇ ಅಭ್ಯಾಸ ಹುಟ್ಟಿದ ಬಳಿಕವೂ ಮುಂದುವರಿಯುತ್ತದೆ. ಮಗು ತನ್ನ ತಾಯಿಯಿಂದ  ದೂರವಿದ್ದಾಗಲೂ ಸಾಂತ್ವನಕ್ಕಾಗಿ ಬೆರಳು ಚೀಪುತ್ತದೆ ಎಂದ ಮನೋವಿಶ್ಲೇಷಕರು ಪ್ರತಿಪಾದಿಸುತ್ತಾರೆ. 5 ವರ್ಷದ ಬಳಿಕವೂ ಮುಂದುವರಿದರೆ.. ಸಾಮಾನ್ಯವಾಗಿ ಈ ಹವ್ಯಾಸ ೪ರಿಂದ ೫ ವರ್ಷದವರೆಗೆ ಮುಂದುವರಿಯುತ್ತದೆ. ಆ ನಂತರವೂ ಮಗು ಇದನ್ನೇ ಮುಂದುವರಿಸಿದ್ದಲ್ಲಿ ಮುಂದೆ ಅದೇ ಒಂದು ದುರಾಭ್ಯಾಸವಾಗಿ ಪರಿಣಮಿಸಬಹುದು. ೫ ವರ್ಷದ ನಂತರವೂ ಮಕ್ಕಳು ಇದೇ ಅಭ್ಯಾಸವನ್ನು ಮುಂದುವರಿಸಿದ್ದಲ್ಲಿ ದಂತ ವೈದ್ಯರ ಸಲಹೆ, ಸಂದರ್ಶನ ಮತ್ತು ಮಾರ್ಗದರ್ಶಕ ಅತೀ ಅವಶ್ಯಕ. ಇದೇ ರೀತಿ ದೀರ್ಘಕಾಲದವರೆಗೆ ಹೆಬ್ಬೆರಳು ಚೀಪಿದ್ದಲ್ಲಿ ಮೇಲಿನ ದವಡೆಯ ಒಳಭಾಗಕ್ಕೆ ಹೆಚ್ಚು ಒತ್ತಡ ಬಿದ್ದು ಮೇಲ್ದವಡೆಯ ಹಲ್ಲುಗಳು ಉಬ್ಬು ಹಲ್ಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೇಲ್ಭಾಗದ ದಂತ ಪಂಕ್ತಿಯೂ ಕೂಡ ಅಡ್ಡಾದಿಡ್ಡಿಯಾಗಿ ಬೆಳೆಯುವ ಸಾಧ್ಯತೆ  ಇರುತ್ತದೆ. ಇದರ ಜೊತೆಗೆ ಮೇಲಿನ ದವಡೆಯ ಎಲುಬುಗಳು ಕೂಡ ಹೆಚ್ಚು ಮುಂದಕ್ಕೆ ಬೆಳೆಯುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಮೇಲಿನ ತುಟಿಯ ಬೆಳವಣಿಗೆಗೆ ತೊಂದರೆ  ಆಗಬಹುದು.

ಚಿಕ್ಕಮಕ್ಕಳು ಬೆಟ್ಟು ಚೀಪಿದರೆ?
ಹಾಗೆಂದ ಮಾತ್ರಕ್ಕೆ 2 ರಿಂದ 4 ವರ್ಷದ ವರೆಗೆ ಮಗು ಬೆರಳು ಚೀಪಿದ್ದಲ್ಲಿ ಅದನ್ನು ತಡೆಯುವ ಗೋಜಿಗೆ ಹೋಗಬೇಡಿ. ಮಗುವಿನ ಮಾನಸಿಕ ದೈಹಿಕ ಬೆಳವಣಿಗೆಗೆ ಇದು ಖಂಡಿತವಾಗಿಯೂ ಮಾರಕವಲ್ಲ. ಮಗು ಬೆರಳು ಚೀಪುವಾಗ ಮಾನಸಿಕವಾಗಿ ಭದ್ರತೆಯ ಭಾವನೆ ಬಂದು, ಅದು ಬೆಳವಣಿಗೆ ಪೂರಕವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಂದು ಮಕ್ಕಳಲ್ಲಿ ಹುಟ್ಟಿದ  ಕೆಲವೇ ವಾರಗಳಲ್ಲಿ ಬಾಯಿ ತೆರೆದು ಬೆರಳು ಚೀಪುವ ಪ್ರಕ್ರಿಯೆ ಆರಂಭವಾಗುತ್ತದೆ. ಖ್ಯಾತ ಮಕ್ಕಳ ತಜ್ಞ ರಾರ್ಡ್ ಆಂಡರ್‌ಸನ್ ಹೇಳುವಂತೆ ಬೆರಳು ಚೀಪುವಿಕೆ ಮನುಷ್ಯ ಅಲ್ಲದೆ ಮಂಗಗಳಲ್ಲಿ ಚಿಂಪಾಜಿಗಳಲ್ಲಿಯೂ ಕಂಡು ಬರುತ್ತದೆ.

ಹುಟ್ಟಿನಿಂದಲೇ ಆರಂಭವಾಗುವ ಚೀಪುವ ಪ್ರಕ್ರಿಯೆ ಎಲ್ಲ ಸ್ತನ್ಯಪಾನ ನೀಡುವ ಸಸ್ತನಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸುಮಾರು  4 ತಿಂಗಳವರೆಗೆ ಈ ಪ್ರಕ್ರಿಯೆ ನಿರಾಂತಂಕವಾಗಿ ಮುಂದುವರಿಯುತ್ತದೆ ಅದರಲ್ಲಿ ದೊರಕುವ ನೆಮ್ಮದಿ, ಸಾಂತ್ವನ, ಸಂತಸದಿಂದಾಗಿ ಈ ಅಭ್ಯಾಸ  ಹವ್ಯಾಸವಾಗಿ ಮುಂದುವರಿಯುತ್ತದೆ. 

ಹೇಗೆ ಬಿಡಿಸುವುದು?
1. ಮಕ್ಕಳಿಗೆ ಹೊಡೆಯದೆ, ಬಯ್ಯದೆ, ಅವಹೇಳನ ಮಾಡದೇ ತಿಳಿ ಹೇಳಬೇಕು.

2. ಬೆರಳು ಚೀಪುವುದಕ್ಕೆ ಕಾರಣವಾದ ಅಂಶಗಳನ್ನು ಮನನ  ಮಾಡಬೇಕು. ತಾಯಂದಿರಿಂದ ದೂರವಿದ್ದು ಮಾನಸಿಕವಾಗಿ ಕುಗ್ಗಿದ್ದಲ್ಲಿ, ಮಗುವನ್ನು ತಾಯಂದಿರ ಬಳಿ  ಹೆಚ್ಚು ಇರುವಂತೆ ನೋಡಿಕೊಳ್ಳಿ.

3. ಬೆರಳು ಚೀಪುವ ಮಕ್ಕಳಿಗೆ ಈ ಅಭ್ಯಾಸ ನಿಲ್ಲಿಸಿದರೆ  ಉಡುಗೊರೆ, ಬಹುಮಾನ ನೀಡಿ, ಮಗುವಿನ ಆತ್ಮವಿಶ್ವಾಸ  ವೃದ್ಧಿಸುವಂತೆ ಮಾಡಿ.

4. ಮಗುವನ್ನು ಯಾವತ್ತೂ ಒಂಟಿಯಾಗಿ ಇರದಂತೆ  ನೋಡಿಕೊಳ್ಳಿ. ಮಗು ಸದಾ ನಗುತ್ತಾ, ಚಟುವಟಿಕೆಯಿಂದ  ಇರುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿ.

5.  ಕೈ ಬೆರಳಿಗೆ ಬಟ್ಟೆ ಕಟ್ಟುವುದು, ಮುಲಾಮು ಹಚ್ಚುವುದು, ಗದರಿಸುವುದು, ಶಿಕ್ಷೆ ನೀಡುವುದು ಮಾಡಲೇಬಾರದು.

6.  ಮೇಲೆ ತಿಳಿಸಿದ ಯಾವುದೇ ಉಪಾಯಗಳಿಗೆ ಸ್ಪಂದಿಸದಿದ್ದಲ್ಲಿ  ಮೊದಲು ದಂತ ವೈದ್ಯರ ಬಳಿ ತೋರಿಸಿಕೊಳ್ಳಿ. ಬಾಯಿಗೆ  ಬೆರಳು ಹಾಕದಂತೆ ತಡೆಯುವ ಪರಿಕರಗಳನ್ನು ದಂತ ವೈದ್ಯರು ಮಗುವಿನ ಹಲ್ಲಿನ ಅಚ್ಚು ತೆಗೆದು
ತಯಾರಿಸಿಕೊಡುತ್ತಾರೆ. ಅದನ್ನು ನಿಯಮಿತವಾಗಿ ದಂತ ವೈದ್ಯರ ಸಲಹೆಯಂತೆ ಧರಿಸಿದರೆ ಮಕ್ಕಳನ್ನು ಈ ಅಭ್ಯಾಸದಿಂದ ಮುಕ್ತಗೊಳಿಸಲು ಬಹುತೇಕ ಸಾಧ್ಯ.

7.  ಮಕ್ಕಳು ಮಾನಸಿಕವಾಗಿ ಕುಗ್ಗಿದ್ದಲ್ಲಿ, ಮಕ್ಕಳ ತಜ್ಞರು ಅಥವಾ ಮನೋವೈದ್ಯರ ಸಹಾಯವನ್ನು  ಪಡೆಯಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಬಾತ್‌ರೂಮ್‌ ಫ್ರೆಶ್ ಆಗಿಡುವ 5 ಗಿಡಗಳು; ಕೆಟ್ಟ ವಾಸನೆ ದೂರ ಮಾಡುವ ಪ್ಲಾಂಟ್ಸ್
Baba Vanga Prediction: ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ ಮುಂದಿನ 7 ದಿನ 5 ರಾಶಿಗೆ ಬೆಳ್ಳಿ, ಕೈಯಲ್ಲಿ ಹಣ