ಸುಖೀ ಹಾಸ್ಪಿಟಲ್ : ಗಂಡನ ಕುಡಿತ ಪತ್ತೆ ಹಚ್ಚೋದು ಹೇಗೆ?

Published : Nov 20, 2016, 07:02 PM ISTUpdated : Apr 11, 2018, 01:03 PM IST
ಸುಖೀ ಹಾಸ್ಪಿಟಲ್ : ಗಂಡನ ಕುಡಿತ ಪತ್ತೆ ಹಚ್ಚೋದು ಹೇಗೆ?

ಸಾರಾಂಶ

ಬಾಯಿ ವಾಸನೆ ಬರುವುದಿಲ್ಲ. ಹೊಟ್ಟೆಗೆ ಸರಿಯಾಗಿ ಆಹಾರ ಸೇವಿಸುವುದಿಲ್ಲ, ಬೆಳಗ್ಗೆ ಮುಂಚೆ ತಲೆನೋವೆಂದು ಮಲಗುತ್ತಾರೆ.

ಕ್ಲಿನಿಕಲ್ ಸೈಕಲಾಜಿಸ್ಟ್

ನಾನು ಈಗಷ್ಟೇ ಮದ್ವೆ ಆಗಿದ್ದೇನೆ. ನನ್ನ ಗಂಡನಿಗೆ ಮದ್ಯಸೇವನೆಯ ಅಭ್ಯಾಸವಿದೆ ಎಂದು ಬಹಳ ಆಪ್ತರಿಂದ ತಿಳಿದಿದ್ದೇನೆ. ಅದು ನಿಜ ಕೂಡ. ಆದರೆ, ಮನೆಗೆ ಬಂದಾಗ ಅವರು ಸಂಪೂರ್ಣವಾಗಿ ಸರಿ ಇರುವಂತೆ ವರ್ತಿಸುತ್ತಾರೆ. ಬಾಯಿ ವಾಸನೆ ಬರುವುದಿಲ್ಲ. ಹೊಟ್ಟೆಗೆ ಸರಿಯಾಗಿ ಆಹಾರ ಸೇವಿಸುವುದಿಲ್ಲ, ಬೆಳಗ್ಗೆ ಮುಂಚೆ ತಲೆನೋವೆಂದು ಮಲಗುತ್ತಾರೆ. ಸೆಕ್ಸ್‌ನಲ್ಲೂ ನಿರಾಸಕ್ತಿ ತೋರುತ್ತಾರೆ. ನನ್ನ ಗಂಡ ಕುಡಿಯುವವರಾ ಎಂದು ತಿಳಿಯುವುದು ಹೇಗೆ? ಕುಡಿತದಿಂದ ಲೈಂಗಿಕ ಆರೋಗ್ಯ ಕುಸಿಯುತ್ತದಾ?

- ಹೆಸರು ಬೇಡ, ಬೆಂಗಳೂರು

ನಿಮ್ಮಲ್ಲಿರುವ ಸಂದೇಹ ನನ್ನ ಪತಿ ಮದ್ಯಸೇವನೆ ಮಾಡುತ್ತಾರೆಯೇ ಎಂದು! ಮೊದಲನೆಯದಾಗಿ ಸ್ವಲ್ಪ ಪ್ರಮಾಣದಲ್ಲಿ ಮದ್ಯಸೇವನೆ ಮಾಡಿದರೆ, ಅವರ ವರ್ತನೆಯಲ್ಲಿ ಬಹಳ ವ್ಯತ್ಯಾಸಗಳು ಕಾಣಿಸುವುದಿಲ್ಲ. ಅಲ್ಲದೆ, ಇಂದು ವಾಸನೆ ಬರದೇ ಇರುವಂಥ ಮದ್ಯಗಳೂ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಇಂಥ ಮದ್ಯ ಸೇವಿಸಿದ ವ್ಯಕ್ತಿ ಕುಟುಂಬದಲ್ಲಿ ಸಹಜವಾಗಿಯೇ ವರ್ತಿಸುತ್ತಾನೆ. ಹಾಗೆ ಇನ್ನೂ ಕೆಲವು ಮಾದಕ ದ್ರವ್ಯ ತೆಗೆದುಕೊಂಡಾಗ ವ್ಯಕ್ತಿಯ ಬಾಯಿಯಿಂದ ವಾಸನೆ ಬರುವುದಿಲ್ಲ. ಇನ್ನು ಲೈಂಗಿಕ ನಿರಾಸಕ್ತಿ ತೋರುತ್ತಿದ್ದಾರೆ ಎನ್ನುತ್ತಿದ್ದೀರಿ. ಮದ್ಯ ಅಥವಾ ಯಾವುದೇ ಡ್ರಗ್ ಅನ್ನು ದೀರ್ಘಕಾಲದಿಂದ ತೆಗೆದುಕೊಂಡರೆ ಮಾತ್ರ ನಿರಾಸಕ್ತಿ ಇರುತ್ತದೆ. ಮೊದಮೊದಲು ಲೈಂಗಿಕಾಸಕ್ತಿಗೇನೂ ಭಂಗವಿರದು. ಬಳಿಕ ಲೈಂಗಿಕ ನಿರಾಸಕ್ತಿ, ವೀರ್ಯದಲ್ಲಿ ಶಕ್ತಿ ಇಲ್ಲದಿರುವುದು ಕಂಡುಬರುತ್ತದೆ. ಅಲ್ಲದೆ, ಯಾವುದೇ ಅಡಿಕ್ಷನ್ ಕೂಡ ಪುರುಷರಲ್ಲಿ ಹಾಗೂ ಸೀಯರಲ್ಲಿ ಲೈಂಗಿಕ ನಿರಾಸಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆ ಅತಿಯಾದ ಒತ್ತಡ ಕೂಡ ಲೈಂಗಿಕ ನಿರಾಸಕ್ತಿಯನ್ನು ಪೋಷಿಸುತ್ತದೆ. ನಿಮ್ಮ ಪತಿಗೆ ಮದ್ಯಪಾನ ಚಟವಿದೆಯೇ ಎಂಬುದನ್ನು ಪರೀಕ್ಷಿಸಲು ಒಂದಿಷ್ಟು ರಕ್ತಪರೀಕ್ಷೆಗಳಿವೆ. ವೈದ್ಯರನ್ನು ಭೇಟಿಯಾಗಿ ಆಪ್ತಸಲಹೆಗೆ ಒಳಪಡಿಸುವುದರಿಂದ ಇದನ್ನು ಪತ್ತೆಹಚ್ಚಬಹುದು.

(ಡಾ. ಸದಾನಂದ ರಾವ್ ಕೆ ಸಿ, ಮನೋವೈದ್ಯ)

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ
ನೂರು, ಇನ್ನೂರು ಅಲ್ಲ…. ಭಾರತದಲ್ಲಿವೆ ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲಗಳು