
ಮೊಟ್ಟೆಯ ಹೊಟ್ಟೆಯೊಳಗೆ ಇನ್ನೆಷ್ಟು ಗುಟ್ಟಿದೆಯೋ ಗೊತ್ತಿಲ್ಲ. ನಿತ್ಯ ಮೊಟ್ಟೆ ತಿಂದರೆ ಪಾರ್ಶ್ವವಾಯುವಿನಿಂದ ದೂರ ಇರಬಹುದೆಂದು ಸರ್ವೆಯೊಂದು ಹೇಳಿದೆ. ಅಮೆರಿಕದ ಆಹಾರತಜ್ಞ ಅಲೆಕ್ಸಾಂಡರ್ ನಡೆಸಿದ ಸಂಶೋಧನೆಯಲ್ಲಿ ಈ ಸತ್ಯ ಗೊತ್ತಾಗಿದೆ. ನಿತ್ಯ ಮೊಟ್ಟೆ ಸೇವಿಸುತ್ತಾ ಬಂದ ಶೇ.99 ಮಂದಿಯಲ್ಲಿ ಪಾರ್ಶ್ವವಾಯು ಕಾಣಿಸಿಕೊಂಡಿಲ್ಲ ಎಂಬ ಸತ್ಯ ಅವರ ಸರ್ವೆಯಿಂದ ತಿಳಿದುಬಂದಿದೆ. ಆದರೆ, ಮೊಟ್ಟೆ ಸೇವಿಸದ 2,76,000 ಮಂದಿಯಲ್ಲಿ ವಿವಿಧ ರೀತಿಯ ಪಾರ್ಶ್ವವಾಯು ಕಾಣಿಸಿಕೊಂಡಿದೆ. ಅಲ್ಲದೆ, ಇಂಥವರಲ್ಲಿ ಹೃದ್ರೋಗ ಹಾಗೂ ಮೆದುಳಿನ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಮೊಟ್ಟೆಯಲ್ಲಿನ ಪ್ರೊಟೀನ್‌ಗಳು ದೇಹ ಹಾಗೂ ಮೆದುಳಿನ ಆರೋಗ್ಯವನ್ನು ಕಾಪಾಡುತ್ತವೆ. ಅಲ್ಲದೆ, ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ ಡಿ, ಇ ಅಂಶಗಳು ಇದರಲ್ಲಿ ಯಥೇಚ್ಛ ಇರುವುದರಿಂದ 22 ಪ್ರಮುಖ ರೋಗಗಳನ್ನು ಇವು ನಿಯಂತ್ರಿಸುತ್ತವೆ ಎಂದಿದ್ದಾರೆ ಅಲೆಗ್ಸಾಂಡರ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.