ಭಾವಿ ಪತಿಗೆ ನಾನು ವರ್ಜಿನ್ ಅಲ್ಲ ತಿಳಿಯುತ್ತದೆಯೇ ?

By Suvarna Web DeskFirst Published Dec 5, 2016, 6:23 AM IST
Highlights

ಮುಂದೆ ನಾನು ಮದುವೆಯಾದರೆ ಅವರಿಗೆ ನಾನು ವರ್ಜಿನ್‌ (ಕನ್ಯೆ) ಅಲ್ಲ ಎಂದು ತಿಳಿಯುತ್ತದೆಯೇ?

ಸುಖಿ ಕ್ಲಿನಿಕ್:  ಡಾ. ಬಿ. ಆರ್‌. ಸುಹಾಸ್‌ ಲೈಂಗಿಕತಜ್ಞ

1)ನಾನು 20 ವರ್ಷದ ಯುವತಿ. ನನಗೆ ಒಬ್ಬ ಗೆಳೆಯನಿದ್ದ. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ನಡುವೆ ಹಲವು ಸಲ ಲೈಂಗಿಕ ಸಂಪರ್ಕವೂ ಏರ್ಪಟ್ಟಿತು. ಈಗ ಅವನು ನನ್ನನ್ನು ಬಿಟ್ಟು ದೂರ ಇದ್ದಾನೆ. ನನಗಿರುವ ಚಿಂತೆಯೆಂದರೆ, ನನ್ನ ಜನನಾಂಗ ವಿಸ್ತರಿಸಿದೆಯೇ? ಮುಂದೆ ನಾನು ಮದುವೆಯಾದರೆ ಅವರಿಗೆ ನಾನು ವರ್ಜಿನ್‌ (ಕನ್ಯೆ) ಅಲ್ಲ ಎಂದು ತಿಳಿಯುತ್ತದೆಯೇ? ಅದರಿಂದ ನನ್ನ ಮದುವೆ ಜೀವನ ಹಾಳಾಗುತ್ತದೆಯೇ?
-ಊರು ಬೇಡ, ಹೆಸರು ಬೇಡ
ಉ:ಪ್ರತಿಬಾರಿ ಸಂಭೋಗಿಸುವಾಗಲೂ ಯೋನಿ ಹಿಗ್ಗುತ್ತದೆ ಹಾಗೂ ಕುಗ್ಗುತ್ತದೆ. ಮೊದಲ ಬಾರಿಯೂ ಹೀಗೆಯೇ ಆಗುತ್ತದೆ. ಹಾಗಾಗಿ, ಮಗು ಹುಟ್ಟುವವರೆಗೂ ಸಾಮಾನ್ಯವಾಗಿ ಅದರ ಬಿಗಿ ಕಡಿಮೆ ಆಗುವುದಿಲ್ಲ. ಆದ್ದರಿಂದ ಈ ಕಾರಣದಿಂದ ವಿವಾಹಪೂರ್ವದಲ್ಲಿ ಸಂಭೋಗವಾಗಿದೆ­ಯೆಂದು ತಿಳಿಯುವುದಿಲ್ಲ. ಇನ್ನು ಕನ್ಯತ್ವವನ್ನು ಸೂಚಿಸುವ ಕನ್ಯಾಪೊರೆ ಅಥವಾ ಹೈಮೆನ್‌ ಎಂಬ ತೆಳುಪದರವು ಸಂಭೋಗವಲ್ಲದೆ, ಸೈಕ್ಲಿಂಗ್‌, ಬಟ್ಟೆಧರಿಸುವುದು, ಕೈ ಸ್ಪರ್ಶ, ಇತ್ಯಾದಿ ಕಾರಣಗಳಿಂದಲೂ ಹರಿಯುವುದರಿಂದ, ಅದು ಕನ್ಯತ್ವದ ನಿಖರವಾದ ಸೂಚನೆಯಲ್ಲ. ಹಾಗಾಗಿ ಅದು ಇಲ್ಲದಿದ್ದರೂ ಕನ್ಯೆಯಾಗಿರಬಹುದು. ನೀವು ಮದುವೆಯಾಗುವ ವ್ಯಕ್ತಿಗೆ ಕನ್ಯತ್ವದ ಬಗ್ಗೆ ತಿಳಿಯುವುದೆಂದು ಹೆದರದೇ, ಹಳೆಯದನ್ನೆಲ್ಲ ಮರೆತು ಧೈರ್ಯವಾಗಿ ಮುನ್ನಡೆಯಿರಿ.

(ಕನ್ನಡ ಪ್ರಭ ವಾರ್ತೆ)

click me!