ವೀರ್ಯಸ್ಖಲನವಾದರೆ ಏನೂ ತೊಂದರೆ ಇಲ್ಲವೇ : ಇದಕ್ಕೆ ಡಾಕ್ಟ್ರು ಏನಂತಾರೆ

By Suvarna Web DeskFirst Published Jan 9, 2017, 12:05 PM IST
Highlights

ವೀರ್ಯಸ್ಖಲನವಾದರೆಏನೂತೊಂದರೆಇಲ್ಲವೇ?

1) ವಯಸ್ಸು 20, ನನಗೆ ಕನಸಿನಲ್ಲಿ ಆಗಾಗ ವೀರ್ಯ ಸ್ಖಲನವಾಗುತ್ತಿರು­ತ್ತದೆ. ಒಮ್ಮೆ ಎಚ್ಚರವಿದ್ದಾಗ  ವೀರ್ಯ ಬರುವಂತಾಗಿ ತಡೆಯಲು ಪ್ರಯತ್ನಿಸಿದೆ, ಆನಂತರ ತುಂಬಾ ನೋವು, ಉರಿ, ಆಯಿತು. ವೀರ್ಯಸ್ಖಲನವಾದರೆ ಏನೂ ತೊಂದರೆ ಇಲ್ಲವೇ?
-ಹೆಸರು, ಊರು ಬೇಡ

 

ಉ: ಈ ವಯಸ್ಸಿನಲ್ಲಿ ಲೈಂಗಿಕ ಬಯಕೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಆಗಾಗ ಹೀಗೆ ಸ್ವಪ್ನ ಸ್ಖಲನವಾಗುತ್ತದೆ. ಲೈಂಗಿಕ ಬಯಕೆಯಾದಾಗ, ಹಸ್ತಮೈಥುನ ಮಾಡಿದಾಗ ವೀರ್ಯ ಸ್ಖಲನವಾಗುತ್ತದೆ. ಎರಡರಿಂದಲೂ ಏನೂ ತೊಂದರೆಯಿಲ್ಲ. ಇದು ಪ್ರಕೃತಿ ಸಹಜ. ಬಲವಂತವಾಗಿ ವೀರ್ಯಸ್ಖಲನವನ್ನು ತಡೆಯಬೇಡಿ. ಹಾಗೆ ಮಾಡಿದರೆ ವೀರ್ಯವು ಹಿಂದಕ್ಕೆ ಹೋಗಿ ಸೋಂಕಾಗುವ ಮೂಲಕ ನಿಮಗೆ ಆ ಭಾಗದಲ್ಲಿ ಉರಿ, ನೋವು ಆಗುತ್ತದೆ. ಜತೆಗೆ ಅದು ಪುನಃ ಮೂತ್ರದೊಂದಿಗೆ ಹೊರಬರುತ್ತದೆ. ಅತಿಯಾಗಿ ವೀರ್ಯ ಸ್ಖಲನವಾಗುತ್ತಿದ್ದರೆ, ಅಥವಾ ಹಸ್ತಮೈಥುನ ಮಾಡಬೇಕೆನಿಸುತ್ತಿದ್ದರೆ, ಸಾಕಷ್ಟುಇತರೆ ಹವ್ಯಾಸಗಳನ್ನು ಬೆಳೆಸಿಕೊಂಡು ಕಾರ್ಯಪ್ರವೃತ್ತರಾಗಿ, ಆಗ ಅವು ತನ್ನಿಂದತಾನೇ ಕಡಿಮೆಯಾಗುತ್ತವೆ.

ಡಾ.ಬಿ.ಆರ್. ಸುಹಾಸ್, ಲೈಂಗಿಕ ತಜ್ಞ

(ಕನ್ನಡ ಪ್ರಭ)

click me!