ಶಾಕಿಂಗ್: ಈ ಮರದಲ್ಲಾಗುವ ಹಣ್ಣುಗಳೆಲ್ಲಾ ಹುಡುಗಿಯ ಆಕೃತಿಯಲ್ಲಿರುತ್ತವೆ!

Published : Jan 04, 2017, 02:15 AM ISTUpdated : Apr 11, 2018, 01:07 PM IST
ಶಾಕಿಂಗ್: ಈ ಮರದಲ್ಲಾಗುವ ಹಣ್ಣುಗಳೆಲ್ಲಾ ಹುಡುಗಿಯ ಆಕೃತಿಯಲ್ಲಿರುತ್ತವೆ!

ಸಾರಾಂಶ

ಈವರೆಗೆ ನಾವೆಲ್ಲಾ ಗುಂಡಗಿರುವ ಇಲ್ಲವೇ ಉದ್ದವಾಗಿರುವ ತರಕಾರಿ ಹಾಗೂ ಹಣ್ಣುಗಳನ್ನು ಮರಗಳಲ್ಲಿ ನೋಡಿದ್ದೇವೆ. ಆದರೆ ಇಂತಹುದೇ ಮರದಲ್ಲಿ ಹಣ್ಣುಗಳೆಲ್ಲಾ ಮಹಿಳೆಯ ಆಕೃತಿಯಲ್ಲಿದ್ದರೆ? ಇದು ಅಸಾಧ್ಯ, ಮರದಲ್ಲಿರುವ ಎಲ್ಲಾ ಹಣ್ಣುಗಳು ಮಹಿಳೆಯ ಆಕಾರದಲ್ಲಿರುವುದೇ? ಅಂತ ಅಂದುಕೊಳ್ಳಬೇಡಿ. ಯಾಕೆಂದರೆ ಥಾಯ್ಲೆಂಡ್'ನ ಮರವೊಂದರಲ್ಲಿ ಇಂತಹ ಹಣ್ಣುಗಳಾಗುತ್ತಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಥಾಯ್ಲೆಂಡ್(ಜ.04): ಈವರೆಗೆ ನಾವೆಲ್ಲಾ ಗುಂಡಗಿರುವ ಇಲ್ಲವೇ ಉದ್ದವಾಗಿರುವ ತರಕಾರಿ ಹಾಗೂ ಹಣ್ಣುಗಳನ್ನು ಮರಗಳಲ್ಲಿ ನೋಡಿದ್ದೇವೆ. ಆದರೆ ಇಂತಹುದೇ ಮರದಲ್ಲಿ ಹಣ್ಣುಗಳೆಲ್ಲಾ ಮಹಿಳೆಯ ಆಕೃತಿಯಲ್ಲಿದ್ದರೆ? ಇದು ಅಸಾಧ್ಯ, ಮರದಲ್ಲಿರುವ ಎಲ್ಲಾ ಹಣ್ಣುಗಳು ಮಹಿಳೆಯ ಆಕಾರದಲ್ಲಿರುವುದೇ? ಅಂತ ಅಂದುಕೊಳ್ಳಬೇಡಿ. ಯಾಕೆಂದರೆ ಥಾಯ್ಲೆಂಡ್'ನ ಮರವೊಂದರಲ್ಲಿ ಇಂತಹ ಹಣ್ಣುಗಳಾಗುತ್ತಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಸಾಮಾಜಿಕ ಜಾಲಾತಾಣಗಳಲ್ಲಿ ಈ ಮರ ಹಾಗೂ ಇದರಲ್ಲಾಗುವ ಹಣ್ಣಿನ ಚಿತ್ರ ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಈ ವಿಚಾರ ನೋಡುಗರಲ್ಲೂ ಅಚ್ಚರಿ ಹಾಗೂ ಭಾರೀ ಕುತೂಹಲವೂ ಮೂಡಿಸಿತ್ತು. ಇಷ್ಟಾದರೂ ಈ ಹಣ್ಣುಗಳಿಗೆ ಮಹಿಳೆಯ ಆಕೃತಿ ಬರಲು ಕಾರಣವೇನು ಎಂಬ ವಿಚಾರ ಮಾತ್ರ ರಹಸ್ಯವಾಗಿದ್ದು, ಇಂದಿಗೂ ಕಾರಣವನ್ನು ಹುಡುಕುವ ಪ್ರಯತ್ನ ಮುಂದುವರೆದಿದೆ.

ಥಾಯ್ಲೆಂಡ್ ನಿವಾಸಿಗಳು ಈ ಮರವನ್ನು 'ನೈರೀಫನ್' ಎಂದು ಕರೆಯುತ್ತಿದ್ದು, ಇದಕ್ಕೆ ಭೌದ್ಧ ನಂಬಿಕೆಗಳೂ ಇವೆ. ಬೌದ್ಧ ನಂಬಿಕೆಗಳನ್ವಯ ಈ ಮರವನ್ನು ಖುದ್ದು ಭಗವಂತನೇ ಥಾಯ್ಲೆಂಡ್'ನ ಹಿಮಾಫನ್'ನ ಅರಣ್ಯದಲ್ಲಿ ಬೆಳೆಸಿದ್ದಾರೆ ಹೀಗಾಗಿಯೇ ಈ ಮರದಲ್ಲಿ ಮಹಿಳೆಯ ಆಕಾರದ ಹಣ್ಣುಗಳಾಗುತ್ತವೆಯಂತೆ.

ಇನ್ನು ಇಲ್ಲಿನ ನಿವಾಸಿಗಳು 'ನೂರಾರು ವರ್ಷಗಳ ಹಿಂದೆ ಇಂದ್ರ ದೇವ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಇದೇ ಮರದಲ್ಲಿ ವಾಸವಿದ್ದರು. ಒಂದು ಬಾರಿ ಭಗವಂತನ ಪತ್ನಿ ಅರಣ್ಯದಲ್ಲಿ ಹಣ್ಣು ಸಂಗ್ರಹಿಸಲು ತೆರಳಿದ್ದಾಗ ಕೆಲ ರಾಕ್ಷಸರು ಅವರ ಮೇಲೆ ದಾಳಿ ನಡೆಸಿದ್ದರು. ತನ್ನ ಪತ್ನಿಯನ್ನು ರಕ್ಷಿಸಲು ಇಂದ್ರ ದೇವ ಆ ಕೂಡಲೇ ಅರಣ್ಯದಲ್ಲಿ ಇಂತಹ 12 ಮರಗಳನ್ನು ಸೃಷ್ಠಿಸಿದ್ದಲ್ಲದೆ ರಾಕ್ಷಸರನ್ನು ಮೋಸ ಮಾಡಲು ಮಹಿಳೆಯ ಆಕಾರದ ಹಣ್ಣುಗಳನ್ನು ಮರದಲ್ಲಿ ಸೃಷ್ಠಿಸಿದ್ದರು' ಎಂದು ನಂಬುತ್ತಾರೆ.

ಇಲ್ಲಿನ ನಿವಾಸಿಗಳು ಇದೇ ವಿಚಾರವನ್ನು ನಂಬಿಕೊಂಡು ಬಂದಿದ್ದಾರೆಯಾದರೂ ಹಲವಾರು ಮಂದಿ ಇದನ್ನು ನಂಬಲು ಹಿಂದೇಟು ಹಾಕುತ್ತಾರೆ ಹಾಗೂ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಿದ್ದಾರೆ. ಇನ್ನೂ ಒಂದು ವಿಚಾರವೆಂದರೆ ಈ ಮರದಲ್ಲಾಗುವ ಮಹಿಳೆಯ ಆಕೃತಿಯಲ್ಲಿರುವುದು ನಿಜವಾಗಿಯೂ ಒಂದು ಹಣ್ಣಾ ಎಂಬ ಅನುಮಾನವೂ ಇದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Kiss Day: ಪ್ರೀತಿ ಮಾಡೋರು ಕಿಸ್ ಮಾಡೋದು ಯಾಕೆ? ಎಲ್ಲಿಂದ ಶುರುವಾಯ್ತು ಈ ರೊಮ್ಯಾನ್ಸ್
ಗಂಡು ಮಗು ಆಗಿದೆ ಎಂದು ತಂದೆಗೆ ಸಂತಾನಹರಣ ಚಿಕಿತ್ಸೆ ಮಾಡಿ ಹೆಣ್ಣು ಮಗು ನೀಡಿದ ವೈದ್ಯರು..