25 ಹಾಗೂ ಆನಂತರ ಗರ್ಭಿಣಿಯಾಗುವ ಮಹಿಳೆಯರಿಗೆ ಶುಭ ಸುದ್ದಿ !

By Suvarna Web DeskFirst Published Nov 19, 2016, 12:22 PM IST
Highlights

ಇಲ್ಲೊಂದು ಸಂಶೋಧಕರ ತಂಡ 25 ಹಾಗೂ ಅನಂತರ ಮದುವೆಯಾಗುವ ಮಹಿಳೆಯರಿಗೆ ಶುಭ ಸುದ್ದಿ ನೀಡಿದೆ.

ಮೊದಲೆಲ್ಲ ಮಹಿಳೆಯರು 18ರಿಂದ 25 ವರ್ಷದೊಳಗೆ ವಿವಾಹವಾಗುತ್ತಿದ್ದರು. 25ರ ನಂತರ ವಿವಾಹವಾಗುತ್ತಿದ್ದುದ್ದು ತೀರ ಅಪರೂಪ. ಆದರೆ 21ನೇ ಶತಮಾತ ಆರಂಭವಾಗುತ್ತಿದ್ದಂತೆ ತಾವು ಸಮಾಜದಲ್ಲಿ ಸಬಲರಾಗಬೇಕೆಂಬ ಕಾರಣದಿಂದ ಪುರುಷರಂತೆಯೇ ಮಹಿಳೆಯರು ತಡವಾಗಿ ವಿವಾಹವಾಗುತ್ತಿದ್ದಾರೆ.

ತಡವಾಗಿ ವಿವಾಹವಾದರೆ ಮಕ್ಕಳಾಗುವ ಸಂದರ್ಭದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.ಇದನ್ನ ಸ್ವತಃ ವೈದ್ಯರೇ ಖಚಿತಪಡಿಸಿದ್ದಾರೆ. ಆದರೆ ಇಲ್ಲೊಂದು ಸಂಶೋಧಕರ ತಂಡ 25 ಹಾಗೂ ಅನಂತರ ಮದುವೆಯಾಗುವ ಮಹಿಳೆಯರಿಗೆ ಶುಭ ಸುದ್ದಿ ನೀಡಿದೆ.ಅದೇನಂದರೆ 25ರ ನಂತರ ವಿವಾಹವಾಗುವವರು ಅತೀ ದೀರ್ಘ ಕಾಲ ಜೀವಿಸುತ್ತಾರೆ.ಅಂದರೆ 90 ವರ್ಷದ ತನಕ ಬದುಕಿರುತ್ತಾರೆ.

ಅಮೆರಿಕಾದ ಕ್ಯಾಲಿಫೋರ್ನಿಯಾ ಸಾನ್ ಡಿಯಾಗೊ ಸಂಶೋಧಕರು ಈ ವರದಿಯನ್ನು ಬಿಚ್ಚಿಟ್ಟಿದ್ದಾರೆ. 25ರ ನಂತರ ವಿವಾಹವಾದ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೊಳಪಡಿಸಿ ಈ ವರದಿ ತಯಾರಿಸಲಾಗಿದೆ.  ಈ 20 ಸಾವಿರ ಮಂದಿಯಲ್ಲಿ ಶೇ.54ರಷ್ಟು ಮಂದಿ 90 ವರ್ಷದ ವೃದ್ಧೆಯರು.

25ರೊಳಗೆ ಮದುವೆಯಾಗಿರುವವರಿಗಿಂತ 25ರ ನಂತರ ವಿವಾಹವಾಗುವವರಿಗೆ ಯಾವುದೇ ಆರೋಗ್ಯ ಸಮಸ್ಯೆ ಸಂಭವಿಸುವುದಿಲ್ಲ. ಅಲ್ಲದೆ ನಮ್ಮ ಸಂಶೋಧನೆಯ ಉದ್ದೇಶ ತಡವಾಗಿ ಮದುವೆಯಾಗುವುದು ಎಂಬುದಲ್ಲ. 25 ರ ನಂತರ ವಿವಾಹವಾಗುವವರಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಮುಂತಾದ ಸಮಸ್ಯೆಗಳು ಸಂಭವಿಸುವುದಿಲ್ಲ' ಎಂದು  ಕ್ಯಾಲಿಫೋರ್ನಿಯಾ ಸಾನ್ ಡಿಯಾಗೊ ವಿಶ್ವವಿದ್ಯಾಲಯದ ಸಂಶೋಧಕರಾದ ಅಲಾದ್ದೀನ್ ಶಾದ್ಯ ತಿಳಿಸಿದ್ದಾರೆ.

click me!