ಕೃಷ್ಣ ಕನಕನೆಡೆಗೆ ತಿರುಗಿದ್ದು ಏಕೆಂದು ಗೊತ್ತಾ?

By Suvarna Web DeskFirst Published Nov 28, 2017, 7:00 PM IST
Highlights

ಉಡುಪಿಯ ಕೃಷ್ಣ ತಿರುಗಿದ್ದಕ್ಕೆ ಸಾಕ್ಷಿ ಬೇಕಂತೆ! ನಿತ್ಯ ತಿರುಗುವ ಧರೆಯು ವಿಜ್ಞಾನವಂತೆ! ಅಮ್ಮ ಹೇಳಿದ ಕಥೆಗೆ ಎದುರಿಲ್ಲ ಸಾಕ್ಷಿ; ಕನಕ ಭಜಿಸಿದ್ದೂ ನಿಜ, ಕಿಂಡಿ ಒಡೆದದ್ದೂ ನಿಜ, ಚಲುವ ತಿರುಗಿದ್ದೂ ನಿಜ, ಕುಲಕುರುಡನ ಕಣ್ಣಿ ಗವನು ಅಂತ್ಯಜನಾದ ಕಾರಣ. ಅಲ್ಲಿ ವಿಜ್ಞಾನ ಬೆರೆಸುವ ಜ್ಞಾನಿಗಳು ಮಂತ್ರಾಲಯದಲ್ಲಿ ಮಂತ್ರಾಕ್ಷತೆಗೆ ಸತ್ತವನು ಬದುಕಿದ್ದು ವಿಸ್ಮಯವೆಂದರು.

ಮಂಗಳ ಗ್ರಹಕ್ಕೆ ಹೋದರು ಕೂಡ ಹಿಡಿಯಲಸಾಧ್ಯವಾದ, ವಿಜ್ಞಾನಿಗಳಿಗೆ ದಿನೇದಿನೇ ಅಸಂಭವವಾಗಿ ಕಾಡುತ್ತಿರುವ ಆ ಕರುಣೆಗೆ ಕರಗುವ ಲಕುಮಿಯ ಗಂಡ ಉಡುಪಿ ದೇಗುಲದ ಅಂಗಳದಲ್ಲಿ ಕನಕನಿಗೆ ಕಂಡಿರುವುದು. ದೇವೋ ಗ್ರಾಮದ ತುಕಾರಾಮರನ್ನು ಪುಷ್ಪಕ ವಿಮಾನದಲ್ಲಿ ಹೊತ್ತೊಯ್ದದ್ದು, ಕಣ್ಣಿಲ್ಲದ ಸೂರದಾಸನಿಗೆ ದರ್ಶನ ಕೊಟ್ಟದ್ದೂ, ಸಕ್ಕೂಬಾಯಿಯ ಅಕ್ಕಿಯ ಚಕ್ಕೀ ಬೀಸಿ ಕೊಟ್ಟದ್ದೂ ನುಂಗಲಾರದ ತುತ್ತಾಗಿದೆ.

ಈ ವಿಜ್ಞಾನವಾಗಲೀ ಸುಜ್ಞಾನವಾಗಲೀ ಮುಟ್ಟಲು ಅಟ್ಟಿಸಿ ಕೊಂಡು ಹೊರಟ, ಮುಟ್ಟುವಾಟದ ಸತತ ಓಟದ, ಎಂದಿಗೂ ಔಟಾಗದ, ಓಡಿದಷ್ಟೂ ದೂರ ಓಡಿ ಸುಸ್ತಾಗಿ ನಿಂತಾಗ ನಿಂತು, ಕುಂತಾಗ ಕುಳಿತು, ಅತೀ ಹತ್ತಿರವೂ ಅಲ್ಲದ, ದೂರವೂ

ಉಳಿಯದ ಹಾಗೆ, ನಿರಂತರ ಆಟವಾಡಿಸುತ್ತಾ ಮರುಭೂಮಿಯ ಬಿಸಿಲ್ಗುದುರೆಯಂತೆ ಕಾಡುತ್ತಿರುವ ಅದೇ ದೇವ ಇತ್ತ ವಿಜ್ಞಾನಿಗಳೂ ಅಲ್ಲದ ಸುಜ್ಞಾನವೂ ಕಲಿಯದ ಈ ಮುಗ್ಧ ಭಕ್ತರು ತಾವು ಓಡಿ ಹಿಡಿಯಲಾರೆವೆಂದು ಸೋಲೊಪ್ಪಿ ಕುಸಿದಾಗ, ಕರಗುವ ಆ ಓಡುಗ, ಕರುಣೆಯಿಂದ ಕರಗಿ ಹೋಗಿ ಆಟದ ನಿಯಮಗಳಿಗೆ ಗೋಲಿ ಹೊಡೆದು ಬಿದ್ದ ಮಗುವನ್ನು ಸಂತೈಸುವಂತೆ ಸಲಹಿದ್ದು ಮೇಲಿನ ಉದಾಹರಣೆಗಳೂರೀ.

ಸಿಗುವವರೆಗೆ ಭಗವಂತ. ಸಿಕ್ಕ ನಂತರ ವಿಜ್ಞಾನ ಎನ್ನುವುದು ಜನಗುಣ. ತೇನಸಿಂಗನು ತಲುಪುವವರೆಗೆ ಗೌರೀಶಂಕರದಲ್ಲಿ ಶಿವನಿದ್ದ, ಮಾನವ ಚಂದ್ರನಲ್ಲಿ ಕಾಲಿಡುವವರೆಗೆ ಅದು ದೇವಲೋಕ, ಈಗ ಅವೆಲ್ಲ ಭೌತಶಾಸ್ತ್ರ ಅಷ್ಟೇ, ಮುಟ್ಟಿಸಿ ಕೊಳ್ಳುವವ ಇದ್ದಲ್ಲೇ ಇರಲು ಅವನೇನು ಕಟ್ಟಿ ಹಾಕಲ್ಪಟ್ಟಿರುವನೇ? ಉಡುಪಿಯ ಕೃಷ್ಣ ತಿರುಗಿದ್ದಕ್ಕೆ ಸಾಕ್ಷಿ ಬೇಕಂತೆ! ನಿತ್ಯ ತಿರುಗುವ ಧರೆಯು ವಿಜ್ಞಾನವಂತೆ! ಅಮ್ಮ ಹೇಳಿದ ಕಥೆಗೆ ಎದುರಿಲ್ಲ ಸಾಕ್ಷಿ; ಕನಕ ಭಜಿಸಿದ್ದೂ ನಿಜ, ಕಿಂಡಿ ಒಡೆದದ್ದೂ ನಿಜ, ಚಲುವ ತಿರುಗಿದ್ದೂ ನಿಜ, ಕುಲಕುರುಡನ ಕಣ್ಣಿ ಗವನು ಅಂತ್ಯಜನಾದ ಕಾರಣ. ಅಲ್ಲಿ ವಿಜ್ಞಾನ ಬೆರೆಸುವ ಜ್ಞಾನಿಗಳು ಮಂತ್ರಾಲಯದಲ್ಲಿ ಮಂತ್ರಾಕ್ಷತೆಗೆ ಸತ್ತವನು ಬದುಕಿದ್ದು ವಿಸ್ಮಯವೆಂದರು.

ಕುಲಾಂಧರೇ ಈ ಭಗವಂತನ ಜಗದಲ್ಲಿ ಅಲ್ಪಜರು ಕಣ್ರೋ.. ಮೂಡಭಕ್ತಿಯಿಂದ ಕನಕದಾಸ ನಿಜವಾದ ದ್ವಿಜಾನಪ್ಪಾ, ಅದಕ್ಕೇ ಅವನ ಹೃದಯದಲ್ಲಿ ಆ ಚತುರ್ಭುಜ ಧ್ವಜಾರೋಹಣ ಮಾಡಿದ್ದು. ಆ ಅದ್ಭುತವಾದ ನಿಷ್ಕಲ್ಮಶ ಮನಸ್ಸು ಹೆಂಗಿದೆ ಎಂಬ ಕುತೂಹಲದಿಂದ ಕನಕದಾಸನೆಡೆಗೆ ಆ ಕಳ್ಳ ತಿರುಗಿದ್ದು ಅವನಿಗೆ ದರ್ಶನ ಕೊಡಲು ಅಲ್ಲಾರೀ, ಆ ನಿಜ ಪವಿತ್ರನ ದರ್ಶನ ಮಾಡಲು ಕಣ್ರೀ.

-ಅಹೋರಾತ್ರ, ಕನ್ನಡಪ್ರಭ

click me!