ವಿಶಾಖಪಟ್ಟಣಂನ ಕಟ್ಟಡದಲ್ಲಿ ಕಾಣಿಸಿಕೊಂಡ 2 ಏಲಿಯನ್ಸ್!

By Suvarna Web DeskFirst Published Nov 27, 2017, 2:45 PM IST
Highlights

ಇವುಗಳ ಮುಖ ಹೃದಯದ ಆಕಾರದಂತಿ ರುವುದರಿಂದ ಮಂಕಿ ಮುಖದಪಕ್ಷಿಗಳೆಂದೂ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಇವುಗಳ ಬಗ್ಗೆ ಸತ್ತವರ ಆತ್ಮ, ದೆವ್ವ ಎಂಬ ನಂಬಿಕೆ ಇದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲೆ 2 ವಿಚಿತ್ರ ಪ್ರಾಣಿಗಳು

ಕಾಣಿಸಿಕೊಂಡಿದ್ದು, ನೀಲಿ ಕಣ್ಣುಗಳುಳ್ಳ, ಮುಖವು ಆಕಾರದಲ್ಲಿ ಹೃದಯದಂತಿರುವ ವಿಚಿತ್ರವಾದ ಈ ಪ್ರಾಣಿಗಳ ವಿಡಿಯೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.

ಈ ವಿಡಿಯೋ ನೋಡಿದ ಜನರು ಅವುಗಳ ನಿರ್ದಿಷ್ಟ ದೃಷ್ಟಿ, ಬಣ್ಣ, ಆಕಾರ ಕಂಡು ಇವುಗಳು ಏಲಿಯನ್ಸ್ ಎಂದು ಹಬ್ಬಿಸಿದ್ದರು. ಆದರೆ ಅದು ನಿಜವಾಗಿಯೇ ಏಲಿಯನ್ ಹೌದೇ ಎಂದು ತನಿಖೆ ನಡೆಸಿದಾಗ ಇವುಗಳ ಅಸಲಿತನ ಬಯಲಾಯಿತು. ಕಾರಣ ಇವು ಏಲಿಯನ್ಸ್ ಅಲ್ಲ, ಬದಲಾಗಿ ಗೂಬೆ ಜಾತಿಗೆ ಸೇರಿದ ಪಕ್ಷಿಯ ಮರಿಗಳು. ಇವುಗಳ ವೈಜ್ಞಾನಿಕ ಹೆಸರು ‘ಟೈಟೊ ಆಲ್ಬಾ’.

ಈ ರೀತಿಯ ಪಕ್ಷಿಗಳು 270 ಡಿಗ್ರಿಯವರೆಗೂ ತಮ್ಮ ದೃಷ್ಟಿಯನ್ನಿಡುವ ಸಾಮರ್ಥ್ಯ ಹೊಂದಿದ್ದು, 135 ಡಿಗ್ರಿಯವರೆಗೂಎರಡೂ ದಿಕ್ಕುಗಳಲ್ಲಿ ತಮ್ಮ ತಲೆಯನ್ನು ತಿರುಗಿಸಬಲ್ಲವು. ಇವುಗಳ ಮುಖ ಹೃದಯದ ಆಕಾರದಂತಿ ರುವುದರಿಂದ ‘ಮಂಕಿ ಮುಖದ’ ಪಕ್ಷಿಗಳೆಂದೂ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಇವುಗಳ ಬಗ್ಗೆ ಸತ್ತವರ ಆತ್ಮ, ದೆವ್ವ ಎಂಬ ನಂಬಿಕೆ ಇದೆ. ಅಲ್ಲದೆ ಭಾರತದ ಅಳಿವಿಂಚಿನಲ್ಲಿರುವ ಹಲವಾರು ಜೀವಿಗಳಲ್ಲಿ ಇವುಗಳೂ ಕೂಡಾ ಹೌದು.

ಹೀಗಾಗಿ ಭಾರತೀಯ ಕಾನೂನಿನ ಪ್ರಕಾರ ಈ ಪಕ್ಷಿಗಳ ಭೇಟೆ ಅಪರಾಧ. ಇನ್ನು ಈ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾಣಿಸಿಕೊಂಡಿರುವ ಈ ಪಕ್ಷಿಗಳಿಗೆ ಇನ್ನೂ ರೆಕ್ಕೆಗಳು ಬೆಳೆದಿಲ್ಲವೆಂದೂ, ಮತ್ತು ಇವುಗಳಿಗೆ ಚರ್ಮದ ಕಾಯಿಲೆ ಇರಬಹುದೆಂದು ವಿಶೇಷ ತಜ್ಞರು ಅಭಿಪ್ರಾಯ ಪಡುತ್ತಾರೆ.  ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಏಲಿಯನ್ಸ್ ಎಂದು ಬಿಂಬಿತವಾದ ವಿಡಿಯೋದಲ್ಲಿರುವುದು ಏಲಿಯನ್ಸ್ ಅಲ್ಲ, ಬದಲಾಗಿ ಅವು ಒಂದು ಜಾತಿಯ ಪಕ್ಷಿಗಳು ಎಂಬುದು ಸಾಬೀತಾದಂತಾಯಿತು.

click me!