
ಈ ಚಳಿಯಲ್ಲಿ ಮುಖದಲ್ಲಿ ಎಲ್ಲೆಂದರಲ್ಲಿ ಬಿರುಕು ಮೂಡುವುದು ಸಹಜ. ಕೆಮಿಕಲ್ ಕ್ರೀಮ್ ಹಚ್ಚಿ ಇದನ್ನು ಮುಚ್ಚುವುದಕ್ಕಿಂತ ನೈಸರ್ಗಿಕವಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಉತ್ತಮ. ಈ ಫೇಸ್ ಪ್ಯಾಕ್ ಕೆಲಸವನ್ನು 6 ಹೂವಿನಿಂದಲೇ ಮಾಡಿಕೊಳ್ಳಬಹುದು. ಹೂವಿನ ಸಿಕ್ಸ್‌ಪ್ಯಾಕ್‌ನಿಂದ ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಮಾಡಿಕೊಳ್ಳಬಹುದು
1. ಮಲ್ಲಿಗೆ ಪ್ಯಾಕ್
ಶುದ್ಧ ನೀರಿನಲ್ಲಿ ಮಲ್ಲಿಗೆಯನ್ನು ಕುದಿಸಬೇಕು. ನಂತರ ನೀರನ್ನೆಲ್ಲ ಬಸಿದು, ಮಲ್ಲಿಗೆಯನ್ನು ಬಿಸಿ ಮಾಡಿ, ನುಣ್ಣಗೆ ಮಾಡಿಕೊಳ್ಳಬೇಕು. ಈ ಪೇಸ್ಟ್ ಅನ್ನು ಮುಖಕ್ಕೆ ಲೇಪಿಸಿಕೊಂಡು, ಅರ್ಧ ತಾಸಿನ ಬಳಿಕ ತೊಳೆದುಕೊಂಡರೆ ಚರ್ಮ ಮೃದುವಾಗುತ್ತದೆ. ಬಿರುಕುಗಳು ಮುಚ್ಚುತ್ತವೆ.
2. ದಾಸವಾಳ ಪ್ಯಾಕ್
ದಾಸವಾಳದ ದಳದ ಜೊತೆಗೆ ಬ್ರೌನ್‌ರೈಸ್ ಪೇಸ್ಟ್ ಮಾಡಿಕೊಂಡು, ಅದಕ್ಕೆ ಗುಲಾಬಿ ರಸವನ್ನು ಬೆರೆಸಬೇಕು. ಈ ಪೇಸ್ಟ್ ಅನ್ನು ಚಳಿಗಾಲದಲ್ಲಿ ಒಡೆದ ಮುಖಕ್ಕೆ ಹಚ್ಚಿಕೊಂಡರೆ, ಕಾಂತಿಯುತ ತ್ವಚೆ ಸಾಧ್ಯ. ಅಲ್ಲದೆ, ಅನಗತ್ಯ ಸುಕ್ಕುಗಳಿದ್ದರೂ ಮಾಯವಾಗುತ್ತವೆ.
3. ಲೋಟಸ್ ಪ್ಯಾಕ್
ಕಮಲದ ದಳಗಳನ್ನು ಕುದಿಸಿ, ನೀರು ಬಸಿದುಕೊಳ್ಳಬೇಕು. ಆ ದಳಗಳನ್ನು ಪೇಸ್ಟ್ ಮಾಡಿಕೊಂಡು, ಅದಕ್ಕೆ ಬೆಣ್ಣೆ ಮತ್ತು ಗುಲಾಬಿ ನೀರನ್ನು ಬೆರೆಸಬೇಕು. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಂಡರೆ ಚಳಿಗಾಲದ ಬಿರುಕುಗಳನ್ನು ಮುಚ್ಚಿಕೊಳ್ಳಬಹುದು.
4. ಚೆಂಡು ಹೂ ಪ್ಯಾಕ್
ಚೆಂಡು ಹೂ, ಬೆಣ್ಣೆ, ಕ್ಯಾರೆಟ್ ತುರಿಯನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ ಗುಲಾಬಿ ನೀರನ್ನು ಬೆರೆಸಿ, ಮುಖಕ್ಕೆ ಲೇಪಿಸಿಕೊಂಡು, 20 ನಿಮಿಷದ ನಂತರ ತೊಳೆದುಕೊಳ್ಳಬೇಕು. ಚರ್ಮದ ಒಡಕುಗಳಿಗೆ ಇದು ಅತ್ಯುತ್ತಮ ಮದ್ದು.
5. ಲ್ಯಾವೆಂಡರ್ ಪ್ಯಾಕ್
ಲ್ಯಾವೆಂಡರ್ ಹೂವಿನ ದಳಗಳನ್ನು, ಒಂದು ಚಮಚ ಓಟ್ಸ್‌ನೊಂದಿಗೆ ಮಿಕ್ಸಿ ಮಾಡಿಕೊಳ್ಳುವುದು. ಇದಕ್ಕೆ ನಾಲ್ಕು ಚಮಚ ಮೊಸರನ್ನು ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಲೇಪಿಸಿಕೊಂಡರೆ, ಚಳಿಗಾಲದ ಚರ್ಮದ ಸಮಸ್ಯೆಗಳಿಗೆ ಮುಕ್ತಿಹಾಡಬಹುದು.
6. ರೋಸ್ ಪ್ಯಾಕ್
ಗುಲಾಬಿ ದಳಗಳನ್ನು ಶುದ್ಧ ನೀರಿನಲ್ಲಿ ಬೇಯಿಸಿ, ಅದನ್ನು ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ ತೇದಿದ ಗಂಧವನ್ನು ಬೆರೆಸಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು, 20 ನಿಮಿಷದ ನಂತರ ತೊಳೆದುಕೊಂಡರೆ ಮೊಡವೆಗಳೂ ಮಾಯವಾಗಿ, ಮುಖ ಕಾಂತಿಯುಕ್ತವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.