ಇವು ಗೊತ್ತಿದ್ದರೆ ನಿಮ್ಮ ಬದುಕು ಬದಲಾಗುತ್ತದೆ; ಇಲ್ಲಾ ಅಂದ್ರೆ ನಷ್ಟವಂತೂ ಖಂಡಿತ.. ಒಮ್ಮೆ ನೋಡಿ!

Published : Mar 09, 2025, 04:21 PM ISTUpdated : Mar 10, 2025, 12:22 PM IST
ಇವು ಗೊತ್ತಿದ್ದರೆ ನಿಮ್ಮ ಬದುಕು ಬದಲಾಗುತ್ತದೆ; ಇಲ್ಲಾ ಅಂದ್ರೆ ನಷ್ಟವಂತೂ ಖಂಡಿತ.. ಒಮ್ಮೆ ನೋಡಿ!

ಸಾರಾಂಶ

ಹಾಗಿದ್ದರೆ ಅವೇನು ನೋಡಿ.. ಇಲ್ಲಿದೆ ಕೆಲವೇ ಕೆಲವು ಪಾಯಿಂಟ್ಸ್, ಅವುಗಳು ನಿಮ್ಮಲ್ಲೂ ಇರಬಹುದು. ಅಥವಾ, ಇಲ್ಲ ಅಂದರೆ ಬೆಳೆಸಿಕೊಳ್ಳಬಹುದು, ಬಳಸಿಕೊಳ್ಳಲೂಬಹುದು. ನೋಡಿ.. 

ನಮ್ಮ ಸಮಾಜದಲ್ಲಿ ಮನುಷ್ಯನ ಮನಸ್ಸಿನ ಬಗ್ಗೆ, ಮನಸ್ಥಿತಿಯ ಬಗ್ಗೆ ಹಲವಾರು ಹೇಳಿಕೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಅನೇಕವು ಗಾದೆ ಮಾತುಗಳಂತೆ ಅನ್ನಿಸಿದರೂ, ಅವು ಗಾದೆ ಮಾತುಗಳಾಗಲೀ ನಾಣ್ಣುಡಿಗಳಾಗಲೀ ಅಲ್ಲ.. ಆದರೆ, ಇಂಥ ಹೇಳಿಕಗಳು ಮನುಷ್ಯರನ್ನು ಸೂಕ್ಷ್ಮವಾಗಿ ನೋಡಿ, ಅಭ್ಯಶಿಸಿ ಬಂದಂಥವು ಎನ್ನಬಹುದು. ಕಾರಣ, ಹಲವರು ಇವುಗಳನ್ನು ವ್ಯಕ್ತಿತ್ವದ ಕೈಗನ್ನಡಿ ಎಂಬಂತೆ ನೋಡುತ್ತಾರೆ. ಹಾಗೆ ಹೇಳುತ್ತಾರೆ. ಇದನ್ನು ಅಗತ್ಯವಿದ್ದವರು ವ್ಯಕ್ತಿತ್ವ ವಿಕಸನಕ್ಕೂ ಬಳಸಿಕೊಂಡು ಬೆಳೆಯಬಹುದು!

ಹಾಗಿದ್ದರೆ ಅವೇನು ನೋಡಿ.. ಇಲ್ಲಿದೆ ಕೆಲವೇ ಕೆಲವು ಪಾಯಿಂಟ್ಸ್, ಅವುಗಳು ನಿಮ್ಮಲ್ಲೂ ಇರಬಹುದು. ಅಥವಾ, ಇಲ್ಲ ಅಂದರೆ ಬೆಳೆಸಿಕೊಳ್ಳಬಹುದು, ಬಳಸಿಕೊಳ್ಳಲೂಬಹುದು. ನೋಡಿ.. 

ಕೇವಲ 50 ರೂಪಾಯಿ ಉಂಗುರ; ನೀವೊಮ್ಮೆ ಟ್ರೈ ಮಾಡಿ ನೋಡಿ!

1. ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವವರು ಅಹಂಕಾರಿಗಳು ಹಾಗೂ ಆತ್ಮವಿಶ್ವಾಸಿಗಳು ಆಗಿರುತ್ತಾರೆ. 

2. ಬೇರೆಯವರ ಹಣೆ ಮುಟ್ಟಿ ಮಾತನಾಡುವವರು ಎಚ್ಚರಿಕೆ ಉಳ್ಳವರು ಹಾಗೂ ರಹಸ್ಯವಾದಿಗಳು ಆಗಿರುತ್ತಾರೆ.

3. ಎಲ್ಲದಕ್ಕೂ ಕೈ ಮುಗಿದು ಮೊಸಳೆ ಕಣ್ಣೀರು ಹಾಕುವವರು ಸಮಯ ಸಾಧಕರು ಆಗಿರುತ್ತಾರೆ. 

4. ಮೂರು ಸೆಕೆಂಡ್‌ಗಳಿಗಿಂತ ಹೆಚ್ಚು ಎಚ್ಚರಿ ತೋರಿದರೆ ಅದು ನಕಲಿ ಆಗಿರುತ್ತದೆ. 

5. ನಿಮ್ಮ ಹಾವಭಾವವನ್ನು ಬೇರೆಯವರು ಅನುಸರಿಸಿದರೆ ನೀವು ಅವರನ್ನು ಇಷ್ಟಪಡುತ್ತೀರಾ.

6. ಅತಿಯಾಗಿ ನಗುವವರು ಅಂತರಂಗದಲ್ಲಿ ಏಕಾಂಗಿ ಆಗಿರುತ್ತಾರೆ. 

7. ಬೇರೆಯವರ ಧ್ವನಿ ಹಾಗೂ ಅದರ ಅರ್ಥ ತಿಳಿದವರು ಅತ್ಮಜ್ಞಾನಿ ಆಗಿರುತ್ತಾರೆ. 

8. ಮುಖ ನೋಡಿಯೇ ಮಾತನಾಡುವವರು ಆತ್ಮವಿಶ್ವಾಸ ಹಾಗೂ ಕ್ಲಾರಿಟಿ ಹೊಂದಿರುತ್ತಾರೆ. 

ಹೌದು, ಇವುಗಳಲ್ಲಿ ಕೆಲವೊಂದು ಅಂಶ ಕೆಲವರಲ್ಲಿ ಇರಬಹುದು. ಹಲವರಲ್ಲಿ ಇಲ್ಲದೆಯೂ ಇರಬಹುದು. ಆದರೆ, ಇವುಗಳನ್ನು ತಿಳದ ಜನರು ನಿಮ್ಮ ಹಾವಭಾವವನ್ನು ಅಳೆಯುತ್ತಾರೆ. ನಿಮಗೆ ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ಕೂಡ, ಎದುರಿಗೆ ಇದ್ದವರು ಈ ಬಗ್ಗೆ ಮಾತನ್ನಾಡುತ್ತಾರೆ, ಅದೇ ರೀತಿ ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಿಮಗೂ ಅದು ಅರಿವಿದ್ದರೆ ನೀವೂ ಕೂಡ ಎದುರಿಗೆ ಇರುವ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಬಹುದು. 

ನಿಮ್ಮವರಿಗಾಗಿ ಕೈಗಡಿಯಾರ ಗಿಫ್ಟ್: 6 ಸ್ಟೈಲಿಶ್ ವಾಚ್ ಕಲೆಕ್ಷನ್

'ಪರ್ಸನಾಲಿಟಿ ಡೆವಲೆಪ್‌ಮೆಂಟ್, ವ್ಯಕ್ತಿತ್ವ ವಿಕಸನ, ಪರ್ಸನಾಲಿಟಿ ಮ್ಯಾನೇಜ್‌ಮೆಂಟ್, ಮೋಟಿವೇಶನಲ್ ಸ್ಪೀಚ್, ಸ್ಪೂರ್ತಿದಾಯಕ ಮಾತುಗಳು ಹೀಗೆ ನಾನಾ ಹೆಸರುಗಳ ಮೂಲಕ ಇವುಗಳನ್ನು ಕರೆಯುತ್ತಾರೆ. ಹೆಸರು ಏನು ಬೇಕಾದರೂ ಕರೆದರೂ ಕೂಡ ಇಲ್ಲಿ ಮುಖ್ಯವಾಗಿದ್ದು ವ್ಯಕ್ತಿತ್ವ ವಿಕಸನವೇ ಆಗಿದೆ. ಬಹುತೇಕರಿಗೆ ದಿನದಿನಕ್ಕೂ ಕಲಿಯುವುದು ಸಾಕಷ್ಟಿದೆ, ಇದ್ದೇ ಇರುತ್ತವೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!