ನವೆಂಬರ್ ತಿಂಗಳಲ್ಲಿ ಹಾವು ಎಲೆ ರಾಶಿಗಳಲ್ಲಿ ಅಡಗಿಕೊಳ್ಳುವುದೇಕೆ? ಏನಿದು ಬ್ರೂಮೇಷನ್?

Published : Oct 29, 2026, 12:45 PM IST
Snakes Hide in Leaf Piles in November

ಸಾರಾಂಶ

ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹಾವುಗಳು ಎಲೆ ರಾಶಿಗಳಲ್ಲಿ ಅಡಗಿಕೊಳ್ಳುತ್ತದೆ. ಹೀಗಾಗಿ ಈ ತಿಂಗಳಲ್ಲಿ ಎಲೆಗಳ ರಾಶಿಗಳ ಮೇಲೆ ನಡೆಯುವಾಗ ಎಚ್ಚರಿಕೆ ವಹಿಸಬೇಕು, ಏನಿದು ನವೆಂಬರ್ ತಿಂಗಳು ಹಾಗೂ ಹಾವಿನ ಬ್ರೂಮೇಷನ್

ಪರಿಸರ ಸಮತೋಲನದಲ್ಲಿ ಹಾವು ಅತ್ಯಂತ ಪ್ರಮುಖ ಸರಿಸೃಪ ಜೀವಿ. ಆದರೆ ಹಾವು ಮನುಷ್ಯನಿಗೆ ಅತ್ಯಂತ ಅಪಾಯಕಾರಿಯಾದ ಜೀವಿ. ಪ್ರತಿ ವರ್ಷ ಹಾವು ಕಡಿದು ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರಮುಖವಾಗಿ ಅಕ್ಟೋಬರ್, ನೆಂಬರ್, ಡಿಸೆಂಬರ್ ಸೇರಿದಂತೆ ಕೆಲ ತಿಂಗಳು ಹಾವುಗಳು ಎಲೆಗಳ ಅಡಿಯಲ್ಲಿ ಅಡಗಿಕೊಳ್ಳುತ್ತದೆ. ಬೇರೆ ಸಮಯದಲ್ಲಿ ಹಾವು ಎಲ್ಲೆಡೆ ಕಾಣಸಿಕ್ಕರೂ ಈ ತಿಂಗಳುಗಳಲ್ಲಿ ಹಾವು ಎಲೆಗಳ ರಾಶಿಗಳಲ್ಲೇ ಹೆಚ್ಚಾಗಿರುತ್ತದೆ. ಹೀಗಾಗಿ ನಡೆಯುವಾಗ ಎಲೆಗಳ ರಾಶಿಗಳಿದ್ದರೆ, ಮರದ ಎಲೆಗಳು ನೆಲದ ಮೇಲೆ ಬಿದ್ದಿದ್ದರೆ ಜಾಗರೂಕರಾಗಿರಬೇಕು. ನವೆಂಬರ್ ತಿಂಗಳಿನಲ್ಲಿ ಹಾವು ಎಲೆಗಳ ರಾಶಿಗಳಡಿಯಲ್ಲಿ ತೂರಿಕೊಳ್ಳಲು ಪ್ರಮುಖ ಕಾರಣವಿದೆ.

ಎಲೆಗಳ ರಾಶಿ ಅಡಿಯಲ್ಲಿ ಹಾವಿನ ವಾಸ

ಅಕ್ಟೋಬರ್ ಅಂತ್ಯದಿಂದ ಹಾವುಗಳು ಎಲ್ಲೆಡೆ ಕಾಣಿಸಿಕೊಳ್ಳುವುದಿಲ್ಲ. ಬಿದ್ದಿರುವ ಎಲೆಗಳ ಅಡಿಯಲ್ಲಿ ಮುದುಡಿಕೊಳ್ಳುತ್ತದೆ. ಅಕ್ಟೋಬರ್ ಅಂತ್ಯದಿಂದ ಚಳಿಗಾಲ ತೀವ್ರಗೊಳ್ಳುತ್ತದೆ. ನವೆಂಬರ್, ಡಿಸೆಂಬರ್ ಹೀಗೆ ಚಳಿಗಾಲ ಮುಂದುವರಿಯುತ್ತದೆ. ಹಾವು ಚಳಿಗಾಲದ ಸಂದರ್ಭದಲ್ಲಿ ಬೆಚ್ಚಗಿನ ಪ್ರದೇಶ ಹುಡುಕಿಕೊಳ್ಳುತ್ತದೆ. ಇದೇ ಚಳಿಗಾಲದಲ್ಲಿ ಮರಗಳ ಎಲೆಗಳು ಉದುರುತ್ತವೆ. ನೆಲದ ಮೇಲೆ ಅತೀ ಹೆಚ್ಚು ಎಲೆಗಳಿರುತ್ತದೆ. ಇದು ಹಾವಿಗೆ ಬೆಚ್ಚಗೆ ವಾಸವಾಗಿದೆ.

ಚಳಿಗಾಲದಲ್ಲಿ ಉದುರುವ ಎಲೆಗಳು ಭೂಮಿಗೆ ಬಿದ್ದಾಗ ಭೂಮಿಯ ಶಾಖದಿಂದ ಇದರಡಿ ಹಾವಿಗೆ ಅತ್ಯಂತ ಸೂಕ್ತ ಸ್ಥಳವಾಗಿ ಪರಿಣಿಸುತ್ತದೆ. ಹಾವು ತನ್ನ ದೇಹದಲ್ಲಿ ಉಷ್ಣವನ್ನು ಸ್ವತಃ ಉತ್ಪಾದಿಸುವುದಿಲ್ಲ. ಹೀಗಾಗಿ ವಾತಾವರಣಕ್ಕೆ ತಕ್ಕಂತೆ ಹಾವುಗಳು ಆವಾಸ ಸ್ಥಾನವನ್ನು ಬದಲಿಸುತ್ತದೆ. ಒಣಗದಿ ತರೆಗೆಲೆಗಳ ನಡುವೆ ಹಾವು ಅಡಗಿಕೊಳ್ಳುತ್ತದೆ.

ಸುರಕ್ಷತ ತಾಣ ಜೊತೆಗೆ ಬೇಟೆಗೂ ಸಹಕಾರಿ

ಕೇವಲ ಚಳಿ ವಾತಾವರಣದಿಂದ ಪಾರಾಗಲು ಮಾತ್ರವಲ್ಲ, ಗಿಡುಗ, ನರಿ ಸೇರಿದಂತೆ ಇತರ ಪ್ರಾಣಿ ಪಕ್ಷಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಇದು ನೆರವಾಗುತ್ತದೆ. ಸುರಕ್ಷಿತ ವಾಸಸ್ಥಳವಾಗಿರುವ ಕಾರಣ ಹಾವು ಇಲ್ಲೇ ಮುದುಡಿಕೊಳ್ಳುತ್ತದೆ. ಜೊತೆಗೆ ಇಲಿ ಸೇರಿದಂತೆ ಇತರ ಪ್ರಾಣಿಗಳನ್ನು ಎಲೆಗಳ ಮರೆಯಿಂದ ಬೇಟೆಯಾಡಲು ಹಾವಿಗೆ ಸಾಧ್ಯವಾಗುತ್ತದೆ. ಚಳಿಗಾಲದಲ್ಲಿ ಇಲಿ ಸೇರಿ ಇದೇ ಜಾತಿಯ ಹಲವು ಪ್ರಾಣಿಗಳು ರಾತ್ರಿ ವೇಳೆ ಬಿಲದಿಂದ ಹೊರಬರುವುದು ಸಹಜ. ಈ ವೇಳೆ ಬೇಟೆಯಾಡುತ್ತದೆ.

ಬ್ರೂಮೇಷನ್ ಸ್ಥಿತಿ

ಚಳಿಗಾಲದಲ್ಲಿ ಸಸ್ತನಿಗಳು ಬ್ರೂಮೇಷನ್ ಅವಸ್ಥೆ ತಲುಪಲಿದೆ. ವಿಶೇಷವಾಗಿ ಹಾವುಗಳು ಚಳಿಗಾಲದಲ್ಲಿ ನಿದ್ರಾವಸ್ತೆಗೆ ಜಾರಲಿದೆ. ಗಾಢ ನಿದ್ರೆ ಅಲ್ಲದಿದ್ದರೂ ಬಹುತೇಕ ನಿದ್ರಾವಸ್ತೆಯಲ್ಲೇ ಇರಲಿದೆ. ಚಳಿಗಾಲ ಹಾವಿಗೆ ಸಹಕಾರಿಯಾದ ಕಾಲವಲ್ಲ. ಹೀಗಾಗಿ ಬೆಚ್ಚಿಗಿನ ಸ್ಥಳದಲ್ಲಿ ನಿದ್ರಾವಸ್ಥೆಗೆ ತಲುಪಲಿದೆ. ಹೆಚ್ಚಿನ ಚಟುವಟಿಕೆಗಳು ಇರುವುದಿಲ್ಲ, ಜಡವಾಗಿ ಮುದುಡಿಕೊಂಡಿರುತ್ತದೆ. ಇದನ್ನೇ ಸ್ನೇಕ್ ಬ್ರೂಮೇಷನ್ ಎಂದು ಕರೆಯುತ್ತಾರೆ.

ಚಳಿಗಾಲದಲ್ಲಿ ಉದ್ಯಾನವನ, ಮನೆಯ ಸುತ್ತ ಮುತ್ತ ಬಿದ್ದ ಎಲೆಗಳ ರಾಶಿಗಳನ್ನು, ಮರದ ದಿಮ್ಮಿ, ಕೂಡಿಟ್ಟ ವಸ್ತುಗಳನ್ನು ತೆಗೆಯುವಾಗ ಎಚ್ಚರಿಕೆವಹಿಸಬೇಕು. ಇದೇ ಚಳಿಗಾಲದಲ್ಲಿ ಹಾವುಗಳು ಹೆಚ್ಚಾಗಿ ಈ ರೀತಿಯ ಸ್ಥಳಗಳಲ್ಲಿ ಮುದುಡಿಕೊಳ್ಳುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೊಡ್ಡವರಾದ ಮೇಲೆ ಅಣ್ಣ-ತಂಗಿ ನಡುವೆ ಮೊದಲಿನ ಆತ್ಮೀಯತೆ ಏಕಿರಲ್ಲ? ಸಂಬಂಧ ದೂರವಾಗಲು ಇವೇ ಕಾರಣ
ಡಾ. ವಿಷ್ಣುವರ್ಧನ್‌, ಬಿ. ಸರೋಜಾದೇವಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರಧಾನ; ರಜನಿಕಾಂತ್‌ ಮುಖ್ಯ ಅತಿಥಿ? ನಟಿಯರಲ್ಲಿ ಯಾರು?