
ಪ್ಯಾರೀಸ್(ನ.30): ನೀವು 50 ವರ್ಷ ವಯಸ್ಸಿನ ಒಳಗಿನವರಾಗಿದ್ದು, ನಿಯಮಿತವಾಗಿ ಸಿಗರೇಟ್ ಸೇದುತ್ತಿರುವಿರಾ ಹಾಗಾದರೆ ಉಳಿದ ಹೃದ್ರೋಗಿಗಳಿಗಿಂತ ಹೆಚ್ಚಿಗೆ ಬಾರಿ ಹೃದಯಾಘಾತವಾಗುತ್ತದೆ ಗೊತ್ತೆ ?
ಎಷ್ಟು ಬಾರಿ ಅಂತೀರಾ 8ಕ್ಕೂ ಹೆಚ್ಚು ಬಾರಿ ಹೃದಯಾಘಾತವಾಗುತ್ತದೆ. ಅಂದರೆ ಉಳಿದ ಹೃದ್ರೋಗಿಗಳಿಗಿಂತ ಸೇಗರೇಟ್ ಸೇ 8ಕ್ಕೂ ಹೆಚ್ಚು ಬಾರಿ ಹೃದಯ ಸ್ತಂಭನವಾಗುತ್ತದೆ. ಹೃದಯಾಘಾತವಲ್ಲದೆ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಕೊಲೆಸ್ಟರಾಲ್ ಸೇರಿದಂತೆ ಹಲವು ರೋಗಗಳಿಗೆ ತುತ್ತುಗುವುದಕ್ಕೆ ಸಾಧ್ಯವಾಗುತ್ತದೆ.
ಇಂಗ್ಲೆಂಡಿನ ಶೆಫೀಲ್ಡ್ ನಗರದ ನಾರ್ಥರ್ನ್ ಜನರಲ್ ಆಸ್ಪತ್ರೆಯಲ್ಲಿನ ಸೌತ್ ಯಾರ್ಕ್ಷೈರ್ ಕಾರ್ಡಿಯೋತೋರಾಸಿಕ್ ಕೇಂದ್ರದ ವೈದ್ಯಕೀಯ ಸಂಶೋಧಕರು ನೀಡಿರುವ ವರದಿಯಿದು. ಈ ತಂಡ 50 ವರ್ಷದೊಳಗಿನ 1727 ಮಂದಿಗೆ ಪರೀಕ್ಷೆಗೊಳಪಡಿಸಿ ವರದಿ ಸಿದ್ದಪಡಿಸಿದ್ದಾರೆ.
ಇಂಗ್ಲೆಂಡ್ ಸೌತ್ ಯಾರ್ಕ್ಷೈರ್ ನಗರದ ಯುವಕರಲ್ಲಿ ಶೇ.27 ಮಂದಿ ಸಿಗರೇಟ್ ಸೇದುತ್ತಾರೆ. ಮುಂದಿನ ದಿನಗಳಲ್ಲಿ ಈ ಯುವಕರಿಗೆ ಹೃದಯಸ್ತಂಭನವಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.