ಎಚ್ಚರ! ಉದ್ಯೋಗ ಕಳೆದುಕೊಳ್ಳುವ ಅಪಾಯದಲ್ಲಿದ್ದೀರಿ ಎಂದು ಸೂಚಿಸುವ 5 ಸಂಕೇತಗಳಿವು!

By Suvarna Web DeskFirst Published Sep 19, 2017, 3:38 PM IST
Highlights

ನಿಮ್ಮ ಕಚೇರಿಯಲ್ಲಿ ನಿಮಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬ ಭಾವನೆ ಮೂಡಿದೆಯೇ? ನಿಮ್ಮ ಸಹಾಯಕ್ಕೆಂದಿರುವ ತರ ಉದ್ಯೋಗಿಗಳನ್ನು ನಿಮ್ಮ ತಪ್ಪಿಲ್ಲದಿದ್ದರೂ ಬೇರೆ ಮ್ಯಾನೆಜರ್'ಗೆ ರಿಪೋರ್ಟ್ ಮಾಡಲು ಹೇಳಿದ್ದಾರೆಯೇ? ನಿಮ್ಮ ಬಾಸ್ ನಡವಳಿಕೆಯೂ ತೀರಾ ಬದಲಾಗಿದೆಯೇ? ಬೇರೆ ಉದ್ಯೋಗ ಹುಡುಕಲು ಇಂತಹ ಹಲವು ಸಂಕೇತಗಳು ಸಿಗುತ್ತವೆ. ಆದರೆ ನೀವು ಸುಧಾರಿಸಬಹುದಾದ ಕೆಲ ವಿಚಾರಗಳಿರುತ್ತವೆ. ಆದರೆ ಹಲವಾರು ಬಾರಿ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ. ಈ ಪರಿಸ್ಥಿತಿ ನೀವು ಶೀಘ್ರದಲ್ಲೇ ನಿಮ್ಮ ದ್ಯೋಗ ಕಳೆದುಕೊಳ್ಳುತ್ತೀರೆಂಬ ಸಂಕೇತ ನೀಡುತ್ತಿರುತ್ತದೆ. ಇಂತಹ 5 ಸಂಕೇತಗಳು ಈ ಕೆಳಗಿನಂತಿವೆ.

1. ಮೀಟಿಂಗ್'ಗಳಿಗೆ ನಿಮ್ಮನ್ನು ಆಹ್ವಾನಿಸದಿರುವುದು

ಒಂದು ವೇಳೆ ನಿಮ್ಮನ್ನು ಪ್ರಮುಖ ಮೀಟಿಂಗ್'ಗಳಿಗೆ ಆಹ್ವಾನಿಸುತ್ತಿಲ್ಲವೆಂದಾದರೆ ಅಥವಾ ಪ್ರಮುಖ ಕಾರ್ಯಕ್ರಮವೊಂದರಲ್ಲಿ ಯಾವುದೇ ಜವಾಬ್ದಾರಿ ನೀಡಿಲ್ಲವೆಂದಾದರೆ ಇದು ಅಪಾಯದ ಸಂಕೇತ. ನಿಮ್ಮ ಬಾಸ್ ದೃಷ್ಟಿಯಲ್ಲಿ ನಿಮ್ಮ ಮಹತ್ವ ಕಡಿಮೆಯಾಗಿದೆ ಎಂದು ಇದನ್ನು ಅರ್ಥೈಸಿಕೊಳ್ಳಬಹುದು. ಮೀಟಿಂಗ್'ನಲ್ಲಿ ನಿಮ್ಮನ್ನು ಕರೆಯುವುದರಿಂದ ಯಾವುದೇ ಲಾಭವಿಲ್ಲ ಬ ಭಾವನೆ ಅವರದ್ದಾಗಿರುವ ಸಾಧ್ಯತೆಗಳಿವೆ.

2 ಬಾಸ್'ನೊಂದಿಗಿರುವ ನಿಮ್ಮ ತ್ತಮ ಭಾಂದವ್ಯ ಇದ್ದಕ್ಕಿದ್ದಂತೆ ಕೆಡುವುದು

ಒಂದು ವೇಳೆ ನಿಮಮ ಬಾಸ್ ನಿಮ್ಮ ಸಲಹೆಯನ್ನು ಕಡೆಗಣಿಸುತ್ತಾರೆ, ನಿಮ್ಮೊಂದಿಗೆ ಸರಿಯಾಗಿ ವ್ಯವಹರಿಸದೆ ಪದೇ ಪದೇ ಪ್ರತಿಯೊಂದು ವಿಚಾರದಲ್ಲೂ ನಿಮ್ಮನ್ನು ನಿಂದಿಸುತ್ತಿದ್ದರೆ. ಇಲ್ಲವೇ ನೀವು ಮಾಡಿದ ಕೆಲಸದಲ್ಲಿ ಯಾವುದಾದರೂ ತಪ್ಪನ್ನು ಹುಡುಕುತ್ತಿದ್ದರೆ, ನಿಮ್ಮ ಮಾತಿಗೆ ಪ್ರತಿಕ್ರಿಯಿಸುತ್ತಿಲ್ಲವೆಂದಾದರೆ ಅದು ಅಪಾಯದ ಸಂಕೇತ

3. ನಿಮ್ಮ ಕೆಲಸವನ್ನು ನಿಮ್ಮಿಂದ ಕಸಿದುಕೊಳ್ಳುವುದು

ಒಂದು ವೇಳೆ ನಿಮಮ ಜವಾಬ್ದಾರಿಯನ್ನು ಕಸಿದುಕೊಂಡು ಬೇರೆಯವರಿಗೆ ನೀಡಿದ್ದರೆ, ನಿಮೆ ಕಡಿಮೆ ಪ್ರಾಜೆಕ್ಟ್'ಗಳನ್ನು ನೀಡಿದ್ದರೆ. ಇನ್ನು ಕೆಲವೊಮ್ಮೆ ನಿಮಗೆ ಅತಿ ಹೆಚ್ಚು ಕೆಲಸವನ್ನೂ ನೀಡುವ ಸಾಧ್ಯತೆಗಳಿವೆ. ಇಂತಹ ಸಮಯದಲ್ಲಿ ನೀವು ತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಹೀಗಾಗಿ ಒಳ್ಳೆಯ ರಿವ್ಯೂ ಸಿಗುವುದು ಸಾಧ್ಯವೇ ಇಲ್ಲ.

4. ನೀಡಿದ ಟಾರ್ಗೆಟ್ ಕಂಪ್ಲೀಟ್ ಮಾಡಲು ಸಾಧ್ಯವಾಗದಿರುವುದು

ಒಂದು ವೇಳೆ ನಿಮ್ಮ ವಿಭಾಗ, ಇಲ್ಲವೇ ಇಡೀ ಕಂಪೆನಿ ನಿರಂತರವಾಗಿ ಟಾರ್ಗೆಟ್ ಕಂಪ್ಲೀಟ್ ಮಾಡಲು ಎಡವುತ್ತಿದ್ದರೆ ಯಾವುದೇ ಕ್ಷಣದಲ್ಲಾದರೂ ನಿಮ್ಮನ್ನು ಮನೆಗೆ ಕಳುಹಿಸುವ ಸಂಭವವಿದೆ. ಹೀಗಿರುವಾಗ ನೀವು ಅದೆಷ್ಟೇ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ನಿಮ್ಮನ್ನು ಉದ್ಯೋಗದಿಂದ ಹಿಂದೆ ಕಳುಹಿಸುವ ಸಾಧ್ಯತೆಗಳಿವೆ.

5. ನಿಮ್ಮ ಕೆಲಸವನ್ನೂ ಯಾವತ್ತೂ ಶ್ಲಾಘಿಸದಿರುವುದು

ನೀವು ಈವರೆಗೂ ನಿಮ್ಮ ವಿಭಾಗದ ಯಾವುದೇ ವ್ಯಕ್ತಿ ಮಾಡದ ಕೆಲಸವನ್ನು ನೀವು ಮಾಡಿದ್ದರೂ ನಿಮ್ಮನ್ನು ಶ್ಲಾಘಿಸುತ್ತಿಲ್ಲವೆಂದಾದರೆ ಪರಿಸ್ಥಿತಿ ವಿಷಮವಾಗಿದೆ ಎಂದು ತಿಳಿದುಕೊಳ್ಳಬಹುದು. ಈ ಮೂಲಕ ಬಾಸ್ ನಿಮ್ಮ ಕೆಲಸವನ್ನು ಗಮನಿಸುತ್ತಿಲ್ಲ ಎಂದು ಅರ್ಥೈಸಿಕೊಳ್ಳಬಹುದು.

click me!