
ಅಪಾಯಕಾರಿ ಬ್ಲೂವೇಲ್ ಚಾಲೆಂಜ್ ದೇಶದಲ್ಲಿ ಈಗಾಗಲೇ ಹಲವು ಮಂದಿಯನ್ನು ಬಲಿಪಡೆದಿದೆ. ಬ್ಲೂವೇಲ್ ಆಟ ನಿಷೇಧಿಸಲು ಕೂಡ ಸಾಧ್ಯವಾಗುತ್ತಿಲ್ಲ. ಈ ಆಟದ ಲಿಂಕ್ ಅನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಡಲಾಗುತ್ತಿದೆ ಎಂಬ ಅನುಮಾನಗಳಿವೆ. ಈ ಮಧ್ಯೆ ಬ್ಲೂವೇಲ್ ಆಟ ಆಡಿಸುವ ನಂಬರ್ ಎನ್ನಲಾದ ಒಂದು ಫೋನ್ ನಂಬರ್ ವಾಟ್ಸಪ್‌ನಲ್ಲಿ ವೈರಲ್ ಆಗಿದೆ.
+917574999093 ಇದು ಬ್ಲೂವೇಲ್ ಚಾಲೆಂಜ್ ಆಟದ ನಂಬರ್. ಒಂದು ವೇಳೆ ಈ ಫೋನ್ ನಂಬರ್‌ನಿಂದ ನಿಮಗೆ ಕಾಲ್ ಬಂದರೆ ಅದನ್ನು ಸ್ವೀಕರಿಸಲು ಅಥವಾ ಪುನಃ ಕರೆ ಮಾಡಲು ಹೋಗಬೇಡಿ. ಈ ನಂಬರ್ ತುಂಬಾ ಅಪಾಯಕಾರಿ. ಇದನ್ನು ನಿರ್ಲಕ್ಷಿಸಬೇಡಿ. ಕೆಲವು ಮಂದಿ ಈ ನಂಬರ್‌ನಿಂದ ಫೋನ್ ಸ್ವೀಕರಿಸಿ ಅಪಾಯಕ್ಕೆ ಸಿಲುಕಿದ್ದಾರೆ. ಆ ಕಡೆಯಿಂದ ಫೋನ್ ಮಾಡಿದವರು ನಿಮ್ಮನ್ನು ಬ್ಲೂವೇಲ್ ಆಟದ ಜಾಲಕ್ಕೆ ಬೀಳಿಸುತ್ತಾರೆ. ದಯವಿಟ್ಟು ನಿಮ್ಮೆಲ್ಲಾ ಸ್ನೇಹಿತರಿಗೆ ಮತ್ತು ಮತ್ತು ವಾಟ್ಸಪ್ ಗ್ರೂಪ್‌ಗಳಿಗೆ ಈ ಸಂದೇಶವನ್ನು ಕಳುಹಿಸಿ ಎಂದು ಮನವಿ ಮಾಡುವ ಪೋಟೋ ಮತ್ತು ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ, ಈ ಬಗ್ಗೆ ತನಿಖೆ ನಡೆಸಿದ ಸಂದರ್ಭದಲ್ಲಿ ಇದೊಂದು ಭಾರತದ್ದೇ ನಂಬರ್ ನಂಬರ್ ಎಂದು ತಿಳಿದುಬಂದಿದೆ. ಮೊಬೈಲ್ ನಂಬರ್‌ನ ಹೆಸರು ವಿಳಾಸ ತೋರಿಸುವ ಟ್ರೂಕಾಲರ್ ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಈ ನಂಬರ್ ಗುಜರಾತಿನ ಯಾವುದೋ ವ್ಯಕ್ತಿಯದ್ದು ಎಂದು ತೋರಿಸಿದೆ. ಅಲ್ಲದೇ ಈ ನಂಬರ್‌ಗೆ ಕಾಲ್ ಮಾಡಿದರೆ ಸ್ವಿಚ್ಡ್ ಆಫ್ ಆಗಿದೆ. ಒಂದು ವೇಳೆ ಭಾರತದ ನಂಬರ್‌ನಿಂದ ಬ್ಲೂವೇಲ್ ಆಟದ ಲಿಂಕ್ ಕಳುಹಿಸಿದ್ದರೆ ಇಷ್ಟರಲ್ಲಾಗಲೇ ಪೊಲೀಸರು ಅದನ್ನು ಪತ್ತೆ ಮಾಡುತ್ತಿದ್ದರು. ಹೀಗಾಗಿ ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಬ್ಲೂವೇಲ್ ನಂಬರ್ ನಿಜವಾಗಿದ್ದಲ್ಲ.
(ಕನ್ನಡಪ್ರಭ ವಾರ್ತೆ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.