ದೇಶದ 12ಕ್ಕಿಂತ ಚಿಕ್ಕ ಶೇ. 42ರಷ್ಟು ಮಕ್ಕಳಿಂದ ದಿನಕ್ಕೆ 4 ಗಂಟೆ ಮೊಬೈಲ್‌ ಬಳಕೆ: ಆತಂಕಕಾರಿ ವರದಿ

By Kannadaprabha News  |  First Published Sep 29, 2023, 8:09 AM IST

ಹನ್ನೆರಡರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಶೇ 42ರಷ್ಟು ಮಕ್ಕಳು ದಿನದ ಎರಡರಿಂದ ನಾಲ್ಕು ತಾಸು ತಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಪರದೆಯಲ್ಲೇ ಕಳೆಯುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. 


ನವದೆಹಲಿ: ಹನ್ನೆರಡರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಶೇ 42ರಷ್ಟು ಮಕ್ಕಳು ದಿನದ ಎರಡರಿಂದ ನಾಲ್ಕು ತಾಸು ತಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಪರದೆಯಲ್ಲೇ ಕಳೆಯುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಮಕ್ಕಳಿಗಾಗಿ ಸುರಕ್ಷಿತ ಅಂತರ್ಜಾಲವನ್ನು ನಿಯಂತ್ರಿಸುವ ಸಂಸ್ಥೆಯಾದ ಹ್ಯಾಪಿನೆಟ್ಜ್‌ ಈ ಸಮೀಕ್ಷೆ ನಡೆಸಿದ್ದು, 12ಕ್ಕಿಂತ ಹೆಚ್ಚಿನ ವಯೋಮಾನದವರು ದಿನದ ಶೇ 47ರಷ್ಟು ಸಮಯವನ್ನು ಮೊಬೈಲ್‌ ಪರದೆಯಲ್ಲಿ ಕಳೆಯುತ್ತಾರೆ ಎಂದು ವರದಿ ಹೇಳಿದೆ.

12 ಮತ್ತು ಹೆಚ್ಚಿನ ವಯೋಮಾನದ ಶೇ. 69ರಷ್ಟು ಮಕ್ಕಳು ತಮ್ಮ ಸ್ವಂತ ಸ್ಮಾರ್ಟ್‌ಫೋನ್‌ (Smart Phone), ಟ್ಯಾಬ್ಲೆಟ್‌ (Tablet) ಹೊಂದಿದ್ದು ಅದರ ಅಂತರ್ಜಾಲ (Internet) ಬಳಕೆಗೂ ಅನಿರ್ಬಂಧಿತ ಅನುಮತಿ ಪಡೆದಿದ್ದಾರೆ ಎಂದು ಸಂಸ್ಥೆಯು 1,500 ಪೋಷಕರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಮನೋರಂಜನೆಗಾಗಿ ಮೊಬೈಲ್‌ ಪರದೆ ನೋಡುವ 12ರ ಒಳಗಿನ ಮಕ್ಕಳು ಅದರಲ್ಲೇ ದಿನದ 2ರಿಂದ 4 ಗಂಟೆ ಕಳೆಯುತ್ತಿದ್ದಾರೆ. 

Tap to resize

Latest Videos

ಇನ್ನೂ ಹೆಚ್ಚಿನ ವಯಸ್ಸಿನವರು ದಿನದ ಶೇ. 47ರಷ್ಟು ಸಮಯವನ್ನು ಮೊಬೈಲ್‌ ಪರದೆಗೆ ವ್ಯಯಿಸುತ್ತಿದ್ದಾರೆ. ಈಗ ಮನರಂಜನೆ ಮತ್ತು ಶಿಕ್ಷಣ (Education) ಸೇರಿ ಎಲ್ಲವೂ ಡಿಜಿಟಲೀಕರಣವಾಗಿದೆ. ಸ್ಮಾರ್ಟ್‌ ಡಿವೈಸ್‌ಗಳು (Smart divise) ಈಗ ಸುಲಭವಾಗಿ ಮಕ್ಕಳಿಗೆ ದೊರೆಯುತ್ತವೆ. ಮಕ್ಕಳು ಶಿಕ್ಷಣದ ಜತೆಗೆ ಡಿಜಿಟಲ್‌ ಸಾಧನಗಳ ಮೂಲಕ ತಮ್ಮ ದಿನ ಕಳೆಯುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

click me!