ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಮೀನು ಸೇವನೆ ಬೆಸ್ಟ್

 |  First Published Jun 1, 2018, 4:48 PM IST

ತಾಯಿಯಾಗಬೇಕೆಂಬ ಸಂಭ್ರಮ ಪ್ರತಿ ಹೆಣ್ಣಿನಲ್ಲಿಯೂ ಸಹಜ. ಬದಲಾದ ಜೀವನಶೈಲಿಯಿಂದ ಒತ್ತಡದ ಬದುಕು ಹಾಗೂ ಇತರೆ ವಿವಿಧ ಕಾರಣಗಳಿಂದ ಹೆಣ್ಣು ಗರ್ಭ ಧರಿಸುವುದೇ ಕಷ್ಟ. ಉದ್ಯೋಗಸ್ಥ ಮಹಿಳೆಯಂತೂ ವಿವಿಧ ಕಾರಣಗಳಿಂದ ತಾಯಿಯಾಗುವ ಸುಸಂಭ್ರಮವನ್ನು ಮುಂದೂಡುತ್ತಲೇ ಇರುತ್ತಾಳೆ. ಇಂಥ ಸಮಸ್ಯೆ ಎದುರಿಸುತ್ತಿರುವವರಿಗೆ ಮೀನು ಮತ್ತು ಸಮುದ್ರಾಹಾರ ನೆರವಾಗುತ್ತೆ.

ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಮೀನು ಸೇವನೆ ಬೆಸ್ಟ್

ತಾಯಿಯಾಗಬೇಕೆಂಬ ಸಂಭ್ರಮ ಪ್ರತಿ ಹೆಣ್ಣಿನಲ್ಲಿಯೂ ಸಹಜ. ಬದಲಾದ ಜೀವನಶೈಲಿಯಿಂದ ಒತ್ತಡದ ಬದುಕು ಹಾಗೂ ಇತರೆ ವಿವಿಧ ಕಾರಣಗಳಿಂದ ಹೆಣ್ಣು ಗರ್ಭ ಧರಿಸುವುದೇ ಕಷ್ಟ. ಉದ್ಯೋಗಸ್ಥ ಮಹಿಳೆಯಂತೂ ವಿವಿಧ ಕಾರಣಗಳಿಂದ ತಾಯಿಯಾಗುವ ಸುಸಂಭ್ರಮವನ್ನು ಮುಂದೂಡುತ್ತಲೇ ಇರುತ್ತಾಳೆ. ಇಂಥ ಸಮಸ್ಯೆ ಎದುರಿಸುತ್ತಿರುವವರಿಗೆ ಮೀನು ಮತ್ತು ಸಮುದ್ರಾಹಾರ ನೆರವಾಗುತ್ತೆ.

Tap to resize

Latest Videos

ಹೌದು. ಅಧಿಕ ಪ್ರೊಟೀನ್ ಹಾಗೂ ಪೋಷಕಾಂಶಗಳ ಆಗರವಾಗಿರುವ ಸಮುದ್ರಾಹಾರದಿಂದ ದಂಪತಿಯ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ, ಗರ್ಭ ಧರಿಸಲು ನೆರವಾಗುತ್ತದೆ, ಎಂಬುದನ್ನು ಎಂಡೋಕ್ರೈನ್ ಸೊಸೈಟಿ ಅಧ್ಯಯನ ದೃಢಪಡಿಸಿದೆ.

ಆದರೆ, ಹೆಚ್ಚು ಪಾದರಸ ಇರುತ್ತದೆ ಎಂಬ ಕಾರಣದಿಂದ ಈ ಆಹಾರವನ್ನು ಸೇವಿಸಲು ಕೆಲವರು ಹಿಂದು ಮುಂದು ನೋಡುತ್ತಾರೆ. ಆದರೆ, ಕಡಿಮೆ ಪಾದರಸ ಇರುವ ಮೀನು ಆರೋಗ್ಯಕಾರಿ. ಅಧ್ಯಯನವೊಂದರ ಪ್ರಕಾರ ಗರ್ಭಿಣಿಯರೂ ಮೀನು ಸೇವಿಸುವುದು ಅತ್ಯಗತ್ಯವಾಗಿದ್ದು, ಅಗತ್ಯಕ್ಕಿಂತ ಶೇ.50ರಷ್ಟು ಕಡಿಮೆ ಮೀನನ್ನು ಅವರು ಸೇವಿಸುತ್ತಾರೆ.

ವಿಟಮಿನ್ ಡಿ, ಒಮೇಗಾ 3 ಫ್ಯಾಟಿ ಆ್ಯಸಿಡ್ಸ್, ಐಯೋಡಿನ್ ಅಂಶ ಹೆಚ್ಚಿರುವ ಮೀನು ಪ್ರತಿಯೊಬ್ಬರ ಪಥ್ಯದ ಭಾಗವಾಗಬೇಕಾಗಿರುವುದು ಅತ್ಯಗತ್ಯವೆಂದು ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದಿಂದ ಸಾಬೀತಾಗಿದೆ.

click me!