ಸುವರ್ಣ ನ್ಯೂಸ್ ಪೈಲ್ವಾನ್ ಚಾಲೆಂಜಿಗೆ ರಮೇಶ್ ವೀಡಿಯೋ

Published : Jun 23, 2018, 12:06 PM ISTUpdated : Jun 23, 2018, 12:11 PM IST
ಸುವರ್ಣ ನ್ಯೂಸ್ ಪೈಲ್ವಾನ್ ಚಾಲೆಂಜಿಗೆ ರಮೇಶ್ ವೀಡಿಯೋ

ಸಾರಾಂಶ

ನಾವು ಇವತ್ತಿನ ಫಿಟ್‌ನೆಸ್‌ಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ ಅಷ್ಟು ನಾಳಿನ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇಂಥ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಿಚ್ಚ ಸುದೀಪ್ ಹಾಕಿದ್ದ ಚಾಲೆಂಜ್ ಅನ್ನು ಸುವರ್ಣ ನ್ಯೂಸ್ ಸಂಭ್ರಮದಿಂದ ಸ್ವೀಕರಿಸಿತ್ತು. ಜತೆಗೆ ಜಾಲೆಂಜ್ ಅನ್ನು ರಮೇಶ್ ಅರವಿಂದ್‌ಗೆ ಫಾರ್ವರ್ಡ್ ಮಾಡಲಾಗಿತ್ತು. ಅದಕ್ಕೆ ರಮೇಶ್ ರೆಸ್ಪಾನ್ಸ್ ಇದು.

ಬೆಂಗಳೂರು: ಜಿಮ್‌ನಲ್ಲಿ ಕಸರತ್ತು ಮಾಡಿರುವ ವೀಡಿಯೋವೊಂದನ್ನು ನಟ ರಮೇಶ್ ಅರವಿಂದ್ ಟ್ವೀಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ, ತಾವು ಸೆಂಟ್ ಪರ್ಸೆಂಟ್ ಫಿಟ್ ಎಂದು ಸಾಬೀತು ಪಡಿಸಿ, ಸುವರ್ಣ ನ್ಯೂಸ್ ಫಿಟ್‌ನೆಸ್‌ ಚಾಲೆಂಜಿಗೆ ಪ್ರತಿಕ್ರಿಯೆ ನೀಡಿದ್ದಾರೆ.

 

 

ಇತರೆ ಖಾಸಗಿ ವಾಹಿನಿಗಳೊಂದಿಗೆ ಸುವರ್ಣ ನ್ಯೂಸ್‌ಗೆ ಸುದೀಪ್ ಹಾಕಿದ್ದ ಚಾಲೆಂಜ್‌ಅನ್ನು ಸಂಭ್ರಮದಿಂದ ಸ್ವೀಕರಿಸಿ, ಸುದ್ದಿ ಮನೆಯ ಗರಡಿ ಮನೆಯನ್ನು ತೋರಿಸಿ, ಪತ್ರಕರ್ತರು ತಾವು ಎಷ್ಟು ಫಿಟ್ ಎಂಬುದನ್ನು ಸುವರ್ಣ ನ್ಯೂಸ್ ತೋರಿಸಿತ್ತು. ಜತೆಗೆ ಖ್ಯಾತ ನಟ ರಮೇಶ್ ಅರವಿಂದ್, ಖ್ಯಾತ ಪತ್ರಕರ್ತರಾದ ವಿಶ್ವೇಶ್ವರ್ ಭಟ್ ಹಾಗೂ ಮೈಸೂರು-ಕೊಡಗು ಸಂಸದ ಅವರಿಗೆ ಚಾಲೆಂಜ್‌ ಅನ್ನು ಫಾರ್ವರ್ಡ್ ಮಾಡಲಾಗಿತ್ತು.

ಈ ಚಾಲೆಂಜ್ ಅನ್ನು ಸ್ವೀಕರಿಸಿದ್ದ ರಮೇಶ್, ಇಂದು ತಮ್ಮೊಳಗಿನ ಪೈಲ್ವಾನನನ್ನು ತೋರಿಸಿ, ವೀಡಿಯೋ ಪೋಸ್ಟ್ ಮಾಡಿದ್ದಾರೆ. 

ಹಮ್ ಫಿಟ್ ಹೆ ತೋ ಇಂಡಿಯಾ ಫಿಟ್ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಕೇಂದ್ರ ಸಚಿವ ರಾಜವರ್ಧನ್ ರಾಥೋಡ್ ಹಾಕಿದ್ದ ಚಾಲೆಂಜ್‌ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿತ್ತು. ಸದಾ ಸುದ್ದಿ ಮನೆಯಲ್ಲಿರುವ ಪತ್ರಕರ್ತರ ಒಳಗಿರುವ ಪೈಲ್ವಾನನ್ನು ಹೊರ ತನ್ನಿ ಎಂದು ಸ್ಯಾಂಡಲ್‌ವುಡ್ ಹೀರೋ ಕಿಚ್ಚ ಸುದೀಪ್ ಚಾಲೆಂಜ್ ಮಾಡಿದ್ದರು.


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!