ಬೆಂಗಳೂರಿನಲ್ಲಿ ಪುತ್ತೂರು ಕಲಾವಿದರ ದೃಶ್ಯ ಜಾತ್ರೆ

By Kannadaprabha NewsFirst Published Apr 2, 2023, 12:36 PM IST
Highlights

ಬೆಂಗಳೂರಿನಲ್ಲಿ ಕಲಾ ಪ್ರೇಮಿಗಳಿಗೆ ಖುಷಿಯ ಸುದ್ದಿ.  'ಬೆಂಗಳೂರು ಆರ್ಟ್ ಗ್ಯಾಲರಿ'ಯಲ್ಲಿ ಒಂದೇ ಊರಿನ ಕುಂಚ ಕಲಾವಿದರ ಕಲಾಕೃತಿಗಳ ಅಪರೂಪದ ಪ್ರದರ್ಶನ ನಡೆಯುತ್ತಿದೆ. ಪ್ರದರ್ಶನದಲ್ಲಿ ತೈಲ ವರ್ಣ, ಆಕ್ರಿಲಿಕ್ ಕಲಾಕೃತಿಗಳು, ರೇಖಾಚಿತ್ರಗಳು. ಛಾಯಾಚಿತ್ರಗಳಿವೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಒಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ಜಾತ್ರ ಮಹೋತ್ಸವ ಆರಂಭವಾಗಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಪುತ್ತೂರಿನ ಕಲಾವಿದರ ಕಲಾ ಜಾತ್ರೆಗೂ ಚಾಲನೆ ಸಿಕ್ಕಿದೆ. ಜಯನಗರದ ಯುವಪಥದಲ್ಲಿರುವ 'ಬೆಂಗಳೂರು ಆರ್ಟ್ ಗ್ಯಾಲರಿ'ಯಲ್ಲಿ ಒಂದೇ ಊರಿನ ಕುಂಚ ಕಲಾವಿದರ ಕಲಾಕೃತಿಗಳ ಅಪರೂಪದ ಪ್ರದರ್ಶನ ನಡೆಯುತ್ತಿದೆ.

23 ಕಲಾವಿದರ ಕಲಾಕೃತಿಗಳ (Painting) ನಡುವೆ, ರಾಜ್ಯದ ಹೆಮ್ಮೆಯ ಕಲಾವಿದ ಚಂದ್ರನಾಥ ಆಚಾರ್ಯರ "ಗ್ರಾಫಿಕ್' ಮಾಸ್ಟರ್ ಪೀಸ್ ಈ ಪ್ರದರ್ಶನದಲ್ಲಿದ್ದು, ವಿಶೇಷ ಮೆರಗು ನೀಡಿದೆ. ಇದಕ್ಕೆ ಹಲವಾರು ಖ್ಯಾತ ಕಲಾವಿದರು ಕೈ ಜೋಡಿಸಿರುವುದು ವಿಶೇಷ. ಈ ಪ್ರದರ್ಶನದ (Exhibition) ಪರಿಕಲ್ಪನೆ ಪುತ್ತೂರಿನವರೇ ಆದ ಕಲಾವಿದ ಶಿವಪ್ರಸಾದ್ ಅವರದು. ಪ್ರದರ್ಶನದಲ್ಲಿ ತೈಲ ವರ್ಣ, ಆಕ್ರಿಲಿಕ್ ಕಲಾಕೃತಿಗಳು, ರೇಖಾಚಿತ್ರಗಳು. ಛಾಯಾಚಿತ್ರಗಳಿವೆ. ಈ ಪ್ರದರ್ಶನ ಮಾರ್ಚ್ 25ರಿಂದ ಆರಂಭಗೊಂಡಿದೆಯಾದರೂ ಪುತ್ತೂರಿನ ಕಲಾವಿದರ ಕಲೆಯನ್ನು ಕಲಾಸಕ್ತರು ಕಣ್ಣುಂಬಿಕೊಳ್ಳಲು ಏಪ್ರಿಲ್ 20ರ ವರೆಗೆ ಅವಕಾಶ ಇದೆ.

ಕಲೆ ಮೂಲಕ ಗ್ರಾಮದ ಬಣ್ಣವನ್ನೇ ಬದಲಾಯಿಸಿದ ಹಳ್ಳಿ ಹುಡುಗಿಗೊಂದು ಸಲಾಂ!

ಸ್ಥಳ: ಬೆಂಗಳೂರು ಆರ್ಟ್‌ ಗ್ಯಾಲರಿ
'ಯುವಪಥ ನಂ.4, 31ನೇ ಅಡ್ಡರಸ್ತೆ
4ನೇ 'ಟಿ' ಬ್ಲಾಕ್ ಪೂರ್ವ
ಜಯನಗರ, ಬೆಂ-11
ಸಮಯ:
ಬೆಳಗ್ಗೆ: 10ರಿಂದ ಸಂಜೆ 7
ಎಪ್ರಿಲ್ 20ರ ವರೆಗೆ ಪ್ರದರ್ಶನ

ಮುಖದಲ್ಲಿ ಅರಳಿದ 'ಗಂಧದ ಗುಡಿ': ಮಂಗಳೂರಿನ ಮೇಕಪ್ ಆರ್ಟಿಸ್ಟ್ ಕೈಚಳಕ!

click me!