ಅಬ್ಬಬ್ಬಾ, ಹೋಂ ವರ್ಕ್ ತಪ್ಪಿಸಿಕೊಳ್ಳಲು ಈ ಬಾಲಕ ಹೀಗ್ ಮಾಡೋದಾ?

By Suvarna NewsFirst Published Sep 12, 2023, 4:21 PM IST
Highlights

ಹೋಮ್ ವರ್ಕ್ ಅಂದ್ರೆ ಮಕ್ಕಳು ಮೂಗು ಮುರಿತಾರೆ. ಅದನ್ನು ತಪ್ಪಿಸಿಕೊಳ್ಳಲು ಸಾಕಷ್ಟು ನಾಟಕ ಮಾಡ್ತಾರೆ. ಆದ್ರೆ ಈ ಬಾಲಕ ಮಾಡಿದ ಕೆಲಸದಿಂದ ನೆರೆಮನೆಯಾತ ಪೇಚಿಕೆ ಸಿಲುಕಿದ್ರೆ ಪೊಲೀಸರು ದಂಗಾಗಿದ್ದಾರೆ.
 

ಓದು, ಬರಹ ಅಂದ್ರೆ ಮಕ್ಕಳಿಗೆ ಆಗೋದಿಲ್ಲ. ಒಂದಲ್ಲ ಒಂದು ಕಾರಣವನ್ನು ಹೇಳಿ ಮಕ್ಕಳು ಇದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸ್ತಾರೆ. ಕೆಲ ಮಕ್ಕಳು ಅತ್ತು, ಗಲಾಟೆ ಮಾಡಿ ಹೋಮ್ ವರ್ಕ್ ಮಾಡದೆ ಹೋದ್ರೆ ಇನ್ನು ಕೆಲವರು ಆಮೇಲೆ ಆಮೇಲೆ ಎನ್ನುತ್ತಲೇ ಹೋಮ್ ವರ್ಕ್ ಗೆ ಚಕ್ಕರ್ ಹಾಕ್ತಾರೆ. ಆದ್ರೆ ಕೆಲ ಮಕ್ಕಳು ಅತೀ ಚಾಲಾಕಿ ಇರ್ತಾರೆ. ಹೋಮ್ ವರ್ಕ್ ತಪ್ಪಿಸಿಕೊಳ್ಳಲು ಅವರು ಮಾಡಿದ ಕೆಲಸ ಅಚ್ಚರಿಯುಂಟು ಮಾಡುತ್ತದೆ. ಕೆಲವೊಮ್ಮೆ ಉಳಿದವರನ್ನು ಪೇಚಿಗೆ ಸಿಲುಕಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಹೋಮ್ ವರ್ಕ್ ತಪ್ಪಿಸಿಕೊಳ್ಳಲು ಬಾಲಕ ಮಾಡಿದ ಮಹಾನ್ ಕೆಲಸ ವೈರಲ್ ಆಗಿದೆ. ಇದನ್ನು ನೋಡಿದ ಜನರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. 

ಘಟನೆ ಚೀನಾ (China) ದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಾಕಿದ್ದಾನೆ. ಆ ವಿಡಿಯೋದಲ್ಲಿ ಪಕ್ಕದ ಮನೆಯ ವ್ಯಕ್ತಿ ಪೊಲೀಸ್ (Police) ಜೊತೆ ಮಾತನಾಡುತ್ತಿರುವುದನ್ನು ನೋಡಬಹುದು. ನೆರೆ ಮನೆಯಲ್ಲಿ ವಾಸವಾಗಿರುವ ವ್ಯಕ್ತಿ ಪೊಲಿಸರಿಗೆ ಹುಡುಗನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ವಾಸ್ತವವಾಗಿ, ಹುಡುಗ ಮನೆಯ ಮೇಲಿಂದ ಕಿಟಕಿ ಮೂಲಕ ನೋಟ್ ಒಂದನ್ನು ಕೆಳಗೆ ಇಳಿ ಬಿಟ್ಟಿದ್ದಾನೆ. ಅದರಲ್ಲಿ ಹೆಲ್ಪ್ ಮೀ (Help Me) ಎಂದು ಬರೆದಿತ್ತು. ಇದನ್ನು ನೋಡಿದ ನೆರೆ ಮನೆ ವ್ಯಕ್ತಿ ಕಂಗಾಲಾಗಿದ್ದಾನೆ. ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾನೆ.
ನೆರೆ ಮನೆ ವ್ಯಕ್ತಿ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದ್ರೆ ಅಲ್ಲಿ ನಡೆದಿದ್ದೆ ಬೇರೆ. ಬಾಲಕ ನೋಟಿನ ಮೇಲೆ ಹೆಲ್ಪ್ ಮೀ ಎಂದು ಬರೆದಿದ್ದಲ್ಲದೆ ಅಳುವುದನ್ನು ನೋಡಿರೋದಾಗಿ ನೆರೆ ಮನೆ ವ್ಯಕ್ತಿ ಪೊಲೀಸರಿಗೆ ಹೇಳಿದ್ದ.

ಡಯಟ್‌ ಮಾಡೋಲ್ಲ, ಜಿಮ್ಮಲ್ಲಿ ವರ್ಕ್‌ಔಟೂ ಮಾಡೋಲ್ಲ, ಆದರೂ ನಯನತಾರಾ ಫಟ್ನೆಸ್ ಸೀಕ್ರೆಟ್ ಏನು?
 
ಆ ಮನೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದ್ರೆ ಅಲ್ಲಿ ಬಾಲಕನಿಗೆ ಏನೋ ಕೆಟ್ಟದಾಗಿ ನಡೆದಿದೆ ಎನ್ನುವ ಊಹೆ ನನ್ನದು. ಈ ಮನೆ ಕೆಳಗೆ ಇಬ್ಬರು ಮಕ್ಕಳು ಆಟ ಆಡೋದನ್ನು ಬಿಟ್ಟು ನಾನು ಮತ್ತೇನೂ ನೋಡಿಲ್ಲವೆಂದು ಆ ವ್ಯಕ್ತಿ ಪೊಲೀಸರಿಗೆ ತಿಳಿಸ್ತಾನೆ.

ಎಲ್ಲ ತಮಾಷೆಯಾಗಿ : ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸ್ತಾರೆ. ಬಾಲಕನನ್ನು ಕರೆಸಿ ಮಾಹಿತಿ ಪಡೆಯುತ್ತಾರೆ. ಆದ್ರೆ ಈ ವೇಳೆ ಬಾಲಕನ ಬಣ್ಣ ಬಯಲಾಗುತ್ತದೆ. ನಕಲಿ ನೋಟ್ ಇದು. ಸುಮ್ಮನೆ ಹೆಲ್ಪ್ ಮೀ ಎಂದು ಬರೆದಿದ್ದೇನೆ. ನಾನು ಹೋಮ್ ವರ್ಕ್ ತಪ್ಪಿಸಿಕೊಳ್ಳಲು ಹೀಗೆಲ್ಲ ಮಾಡಿದೆ ಎಂದು ಬಾಲಕ ಹೇಳ್ತಾನೆ. ಆತನ ಮಾತು ಕೇಳಿದ ಪೊಲೀಸರಿಗೆ ತಲೆ ಮೇಲೆ ಕೈ ಇಡೋದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ.

Optical Illusion: ಫೋಟೋ ನೋಡಿ, ಮ್ಯಾರೀಡ್ ಲೈಫ್ ಹೇಗಿರುತ್ತೆ ತಿಳ್ಕೊಳ್ಳಿ

ಹುಡುಗನ ಜೊತೆ ಗಂಭೀರವಾಗಿ ಮಾತನಾಡಿದ ಪೊಲೀಸರು ಎಸ್ ಒಎಸ್ ಪರಿಕಲ್ಪನೆಯ ನಿಜವಾದ ಅರ್ಥ ಮತ್ತು ಗಂಭೀರತೆಯನ್ನು ಅವನು ಅರ್ಥಮಾಡಿಕೊಂಡಿಕೊಳ್ಳುವಂತೆ ವಿವರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನರು ಇದ್ರ ಬಗ್ಗೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಇದು ತೋಳ ಬಂತು ತೋಳದ ರಿಯಲ್ ವರ್ಜಿನ್ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಇದನ್ನು ಮಕ್ಕಳಿಗೆ ಉದಾಹರಣೆಯಾಗಿ ನೀಡಿ ಅವರನ್ನು ಸರಿದಾರಿಗೆ ತರಬೇಕು ಎಂದಿದ್ದಾರೆ.

ಹೋಮ್ ವರ್ಕ್ ತಪ್ಪಿಸಿಕೊಳ್ಳಲು ಮಕ್ಕಳು ಮಾಡುವ ಕೆಲಸಗಳು ಆಗಾಗ ಸುದ್ದಿಯಾಗ್ತಿರುತ್ತವೆ. ಕೆಲ ದಿನಗಳ ಹಿಂದೆ ಚೀನಾದಲ್ಲಿಯೇ ಇನ್ನೊಂದು ಘಟನೆ ನಡೆದಿತ್ತು. 10 ವರ್ಷದ ಬಾಲಕ, ಅಮ್ಮ ಹೋಮ್ ವರ್ಕ್ ಮಾಡುವಂತೆ ಕಾಟಕೊಡ್ತಾಳೆ. ಹಾಗಾಗಿ ನಾನು ಮನೆ ಬಿಟ್ಟು ಬಂದಿದ್ದೇನೆ. ನನ್ನನ್ನು ಅನಾಥಾಶ್ರಮಕ್ಕೆ ಸೇರಿಸಿ ಎಂದು ಪೊಲೀಸರಿಗೆ ದೂರು ನೀಡಿದ್ದ.  

click me!