ಮೂಗಿನ ಕೂದಲು ಕಿತ್ತರೆ ಸಾವು?

Published : Dec 18, 2018, 04:17 PM IST
ಮೂಗಿನ ಕೂದಲು ಕಿತ್ತರೆ ಸಾವು?

ಸಾರಾಂಶ

ನಮ್ಮ ದೇಹದ ಮೇಲಿರುವ ಕೂದಲು ನಮ್ಮನ್ನು ಧೂಳು ಮತ್ತಿತರ ದೇಹ ವಿರೋಧಿ ಶಕ್ತಿಗಳಿಂದ ರಕ್ಷಿಸುತ್ತಿರುತ್ತವೆ. ಆದರೆ, ಕೆಲವು ಅನಗತ್ಯ ಕೂದಲಾದರೆ, ಮತ್ತೆ ಕೆಲವು ಅಗತ್ಯ. ಆದರೆ, ಮೂಗಿನ ಕೂದಲು ಕಿತ್ತರೇನು ಆಗುತ್ತೆ ಗೊತ್ತಾ?

ಏನೋ ಪುಲಪುಲ ಅನಿಸುತ್ತಿದೆ, ನೋಡಲು ಕೆಟ್ಟದಾಗಿ ಕಾಣುತ್ತೆ. ಇದರಿಂದ ನೆಗಡಿಯೂ ಬರುತ್ತದೆ. ಮೊದಲು ಇದನ್ನು ಕಿತ್ತು ಹಾಕೋಣ ಎಂದು ಮೂಗಿನ ಕೂದಲ ಬಗ್ಗೆ ರಗಳೆ ಮಾಡಿಕೊಳ್ಳುವವರಿಗೆ ಇಲ್ಲಿದೆ ಉತ್ತರ! ಅಷ್ಟೇ ಅಲ್ಲ, ನೀವು ಇದೇ ಕೂದಲಿನಿಂದ ಒಂದು ದೊಡ್ಡ ಅಪಾಯದಿಂದ ಪಾರಾಗಿದ್ದರೆಂದರ್ಥ. 

ಮೂಗೊಳಗೆ ಕೂದಲೇಕೆ ಇರುತ್ತದೆ? 

ಮೂಗಿನಲ್ಲಿ ಕಾಣಿಸುವ ಕೂದಲು ಒಂದಾದರೆ, ಮತ್ತೊಂದು ಬಗೆಯ ಕೇಶ ಕಣ್ಣಿಗೆ ಕಾಣಿಸುವುದೇ ಇಲ್ಲ. ಅತಿ ಉದ್ದ ಕೂದಲು ಬೆಳೆದರೆ ಮೂಗಿನಿಂದ ಹೊರ ಬರುತ್ತದೆ. ಉದ್ದ ಕೂದಲನ್ನು ವೈಬರಿಸಿ ಎನ್ನುತ್ತಾರೆ. ನಾವು ಉಸಿರಾಡುವಾಗ ಇದು ಆಕ್ಸಿಜನ್‌ನೊಂದಿಗೆ ಬರುವ ಧೂಳು ಹಾಗೂ ಬ್ಯಾಕ್ಟೀರಿಯಾ ದೇಹ ಸೇರದಂತೆ ಫಿಲ್ಟರ್ ಮಾಡುತ್ತದೆ.

ಕೂದಲು ಕಿತ್ತರೇನಾಗುತ್ತದೆ? 

ಮೂಗಿನಿಂದ ಹಿಡಿದು ತುಟಿಯವರೆಗೆ ಅಪಾಯಕಾರಿ ಹಾಗೂ ಸೂಕ್ಷ್ಮವಾದ ಜಾಗ. ಇದು ಕಣ್ಣು, ಬಾಯಿ ಹಾಗೂ ಮೂಗು ಸೇರುವ ಜಾಗವಾಗಿದ್ದು, ಅನೇಕ ರಕ್ತ ನರಗಳು ಈ ಭಾಗದಿಂದಲೇ ಪಾಸ್ ಆಗುತ್ತದೆ. ಆ ಮೂಲಕ ಮೆದುಳಿಗೆ ನೇರ ಸಂಪರ್ಕ ಹೊಂದಿರುತ್ತದೆ. 

ಕಣ್ಣು, ಮೂಗು ಹಾಗೂ ಬಾಯಿಯ ಯಾವುದೇ ಭಾಗಕ್ಕೆ ತೊಂದರೆಯಾದರೂ ಅದು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.  ಮೂಗಿನ ಕೂದಲು ಕಿತ್ತರೆ ರಕ್ತನಾಳದಲ್ಲಿಯೇ ರಂಧ್ರವಾಗಿ ರಕ್ತಸ್ರಾವ ಆಗುತ್ತದೆ. ಇದರಿಂದ ಸಾವೂ ಸಂಭವಿಸುವ ಸಾಧ್ಯತೆಯೂ ಹೆಚ್ಚು. ಅದಕ್ಕೆ ಅಂದ ಕೆಟ್ಟರೂ ಪರ್ವಾಗಿಲ್ಲ, ಮೂಗಿನ ಕೂದಲ ಸಹವಾಸಕ್ಕೆ ಮಾತ್ರ ಹೋಗಬೇಡಿ....

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ