ಹೆಣ್ಣು ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಹೆರುವ ಹೊರುವ ಹೆಣ್ಣಿಗೆ ದೈವದತ್ತವಾಗಿ ಹೇಗೆ ಕೆಲವು ವರಗಳಿವೆಯೋ, ಹಾಗೆ ಕೆಲವು ಅನಾರೋಗ್ಯಗಳೂ ಬಳುವಳಿಯಾಗಿಯೇ ಬಂದಿರುತ್ತದೆ. ಆದರೆ, ಹೇಳಿಕೊಳ್ಳುವುದೇ ಇಲ್ಲ. ಅಂಥ ಸಮಸ್ಯೆಗಳಲ್ಲಿ ಇದೂ ಒಂದು.
ಒಂಬತ್ತು, ತಿಂಗಳು ಹೆತ್ತು ಹೊತ್ತು ಮಾಡುವ ಹೆಣ್ಣಿಗೆ ಪ್ರತಿ ತಿಂಗಳ ಪಿರಿಯಡ್ಸ್ ಅನ್ನು ಮ್ಯಾನೇಜ್ ಮಾಡುವುದೂ ಮುಖ್ಯ. ಆಕೆ ಯೋನಿಯ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯ. ಆದರೆ, ಅಜ್ಞಾನದಿಂದಲೋ, ಅರಿವಿನ ಕೊರತೆಯಿಂದಲೋ ಇವನ್ನು ನಿರ್ಲಕ್ಷಿಸುವುದೇ ಹೆಚ್ಚು. ಸಣ್ಣ ಪುಟ್ಟ ಸಮಸ್ಯೆಗಳೆಂದು ಇಗ್ನೋರ್ ಮಾಡಿ, ಮುಂದೆ ಅದು ದೊಡ್ಡ ಸಮಸ್ಯೆಯಾಗಿ ಆಕೆಯನ್ನು ಬೆಂಬಿಡದೇ ಕಾಡುವಂತಾಗುವುದು ಮಾತ್ರ ದುರಂತ.
ಇಂಥ ಸಮಸ್ಯೆಗಳಲ್ಲಿ ಯೋನಿ ಸುತ್ತ ಬೆವರುವ ಸಮಸ್ಯೆಯೂ ಒಂದು. ಈ ಭಾಗದಲ್ಲಿ ಯಾವುದೇ ಬೆವರು ಗ್ರಂಥಿಗಳು ಇರುವುದಿಲ್ಲ. ಹೊರ ಚರ್ಮದಿಂದಲೇ ಇಲ್ಲಿ ಬೆವರುತ್ತದೆ. ಈ ಕಾರಣದಿಂದಲೇ ದೇಹದ ಬೇರೆ ಭಾಗ ಬೆವರುವುದಕ್ಕೂ, ಈ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೂ ವ್ಯತ್ಯಾಸವಿರುತ್ತದೆ.
undefined
ಕಾರಣಗಳೇನು?
ವ್ಯಾಯಾಮ
ದೇಹ ದಂಡಿಸಿದಾಗ ಬೆವರುವುದು ಸಹಜ. ಅದರಲ್ಲೂ ಕಾಲಿನ ವ್ಯಾಯಾಮ ಮಾಡಿದರೆ ಯೋನಿ ಬಳಿ ಬೆವರುತ್ತದೆ. ಇದಕ್ಕೆ ಕಾಟನ್ ಅಥವಾ ಉಸಿರಾಡಲು ಸುಲಭವಾಗುವಂಥ ಉಡುಪು ಧರಿಸಿದರೆ ಸೂಕ್ತ.
ಯೋನಿಯ ಮೇಲಿರುವ ಕೂದಲು
ಆಪೋಕ್ರೈನ್ ಗ್ರಂಥಿಗಳು ಯೋನಿ ಮೇಲಿರುವ ಕೂದಲಿನ ಸಹಾಯದೊಂದಿಗೆ ಬೆವರು ಹೊರ ಹಾಕುತ್ತದೆ, ಇದರಿಂದ ಬ್ಯಾಕ್ಟೀರಿಯಾ ಹುಟ್ಟಿ ಸೋಂಕು ಹರಡುವ ಸಾಧ್ಯತೆಯೂ ಇದೆ. ಇದನ್ನು ತಡೆಯಲು ಟ್ರಿಮ್ಮಿಂಗ್, ಶೇವಿಂಗ್ ಅಥವಾ ಕ್ರೀಮ್ ಬಳಸಿ ಕೂದಲು ತೆಗೆಯಬೇಕು.
ಒಳ ಉಡುಪು
ಮೈಗಂಟುವಂತಹ ಒಳ ಉಡುಪು ಧರಿಸಬಾರದು. ಅದರಲ್ಲೂ ಸಿಂಥಟಿಕ್ ಒಳ ಉಡುಪುಗಳು ಮೈ ಶಾಖವನ್ನು ಹಾಗೆ ಉಳಿಸಿಕೊಳ್ಳುತ್ತದೆ. ಇದರಿಂದ ಹೆಚ್ಚು ಬೆವರುತ್ತದೆ. ಅದಕ್ಕೆ ಕಾಟನ್ ಪ್ಯಾಂಟೀಸ್ ಬಳಸುವುದು ಸೂಕ್ತ. ಅಲ್ಲದೇ ಅದರ ಸ್ವಚ್ಛತೆ ಕಡೆಯೂ ಗಮನ ಹರಿಸಬೇಕು. ಒಗೆದು, ಬಿಸಿಲಲ್ಲಿ ಒಣಗಿಸಿದ ಒಳ ಉಡುಪು ಧರಿಸುವುದರಿಂದ ಇಂಥ ಸಣ್ಣ ಪುಟ್ಟ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು.
ಹೆಚ್ಚಾದ ತೂಕ
ಬಹುತೇಕ ಮಹಿಳೆಯರಿಗೆ ಹೊಟ್ಟೆ ಭಾಗದಲ್ಲಿ ಕೆಟ್ಟ ಫ್ಯಾಟ್ ಇರುತ್ತದೆ. ದೇಹದ ಉಷ್ಣಾಂಶ ಹೆಚ್ಚಾದಾಗ ಈ ಭಾಗದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದು ಯೋನಿಯ ಮೇಲೂ ಪರಿಣಾಮ ಬೀರಿ, ಬೆವರಿನ ಸಮಸ್ಯೆ ತಂದೊಡ್ಡುತ್ತದೆ. ದೇಹ ದಂಡಿಸಿದ್ದರೆ ಮಾತ್ರ ತೂಕ ಕಡಿಮೆ ಆಗುತ್ತದೆ.
ಸ್ಯಾನಿಟರಿ ಪ್ಯಾಡ್
ಕೆಲವು ಸ್ಯಾನಿಟರಿ ಪ್ಯಾಡ್‌ಗಳು ಪ್ಲಾಸ್ಟಿಕ್‌ನಿಂದ ಮಾಡಲಾಗಿರುತ್ತದೆ, ದಿನವಿಡೀ ಒಂದೇ ಪ್ಯಾಡ್ ಬಳಸುವುದರಿಂದಲೂ ಬೆವರುತ್ತದೆ. ಕಾಟನ್ ಪ್ಯಾಡನ್ನೇ ಹೆಚ್ಚಾಗಿ ಬಳಸಬೇಕು. ಸಾಧ್ಯವಾದಷ್ಟು 5 ಗಂಟೆಗೊಮ್ಮೆ ಪ್ಯಾಡ್ ಬದಲಾಯಿಸುವ ಅಭ್ಯಾಸವಿಟ್ಟುಕೊಳ್ಳಬೇಕು.
ಇನ್ನೇನು ಮಾಡಬಹುದು?