7 ಸೆಕೆಂಡ್‌ನಲ್ಲಿ 49ರ ಸಾಲಿನಲ್ಲಿರುವ 94 ಕಾಣಿಸಿದ್ರೆ ಏನರ್ಥ? ಮಾನಸಿಕ ತಜ್ಞರ ಹೇಳೋದೇನು?

Published : Jun 21, 2025, 10:56 AM IST
Optical illusion

ಸಾರಾಂಶ

Optical illusion: ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿ ಅಡಗಿರುವ ೯೪ ಅಂಕೆಯನ್ನು 7 ಸೆಕೆಂಡ್‌ಗಳಲ್ಲಿ ಕಂಡುಹಿಡಿಯುವ ಮೂಲಕ ನಿಮ್ಮ ದೃಶ್ಯ ಸಾಮರ್ಥ್ಯ ಮತ್ತು ಮಾನಸಿಕ ಶಕ್ತಿಯನ್ನು ಪರೀಕ್ಷಿಸಿ. 

ತ್ತೀಚಿನ ದಿನಗಳಲ್ಲಿ ಜನರು ತಮ್ಮ ಮಾನಸಿಕ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ. ಜನರು ತಮ್ಮ ಮಾನಸಿಕ ಶಕ್ತಿಯನ್ನು ತಿಳಿದುಕೊಳ್ಳಲು ಆಪ್ಟಿಕಲ್ ಭ್ರಮೆಯ ಚಿತ್ರ ಮತ್ತು ವಿಡಿಯೋಗಳ ಮೊರೆ ಹೋಗುತ್ತಿದ್ದಾರೆ. ಆಪ್ಟಿಕಲ್ ಭ್ರಮೆ ಚಿತ್ರಗಳಂದ್ರೆ ಅವುಗಳಲ್ಲಿ ಹಲವು ವಿಷಯಗಳನ್ನು ಒಳಗೊಂಡಿರುತ್ತವೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು, ನಿಮ್ ಮೆದುಳಿಗೆ ಕೆಲಸ ನೀಡುತ್ತವೆ. ಅದೇ ರೀತಿ ಎರಡು ಚಿತ್ರಗಳಲ್ಲಿ ವ್ಯತ್ಯಾಸ ಹುಡುಕಾಟ ಸಹ ಮಕ್ಕಳ ಬೆಳವಣಿಗೆ ಸಹಕಾರಿ ಆಗುತ್ತೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಈ ಚಿತ್ರಗಳು ಮಕ್ಕಳ ಕಣ್ಣುಗಳಿಗೆ ಹುಡುಕಾಟದ ಕೆಲಸ ನೀಡುತ್ತದೆ. ಇದರಿಂದ ಮಕ್ಕಳಲ್ಲಿ ಚುರುಕುತನ ಹೆಚ್ಚಲು ಕಾರಣವಾಗುತ್ತದೆ.

ಇಂದಿನ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್ ಮೂಲಕ ನಿಮ್ಮ ದೃಶ್ಯ ಸಾಮರ್ಥ್ಯಗಳು ಮತ್ತು ಮಾನಸಿಕ ಶಕ್ತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಈ ಚಿತ್ರದಲ್ಲಿ 49 ಅಂಕಿಯ ಸಾಲುಗಳಿದ್ದು, ಇದರಲೊಂದು 94 ಎಂಬ ಅಂಕೆಯನ್ನು ಸಹ ಬರೆಯಲಾಗಿದೆ. ಈ ಫೋಟೋ ನೋಡಿದ 7 ಸೆಕೆಂಡುಗಳಲ್ಲಿ 94 ಕಂಡು ಹಿಡಿಯಬೇಕು. ನೀವು ಕೇವಲ 7 ಸೆಕೆಂಡ್‌ಗಳಲ್ಲಿ 94 ಕಂಡು ಹಿಡಿದ್ರೆ ಏನರ್ಥ ಎಂದು ತಜ್ಞರು ಹೇಳುತ್ತಾರೆ.

ವೀಕ್ಷಣಾ ಕೌಶಲ್ಯ ಮತ್ತು ಹೆಚ್ಚಿನ ಐಕ್ಯೂ

ನಿರ್ದಿಷ್ಟ ಸಮಯದಲ್ಲಿ 49ರ ಸಾಲಿನಲ್ಲಿರುವ 94 ಸಂಖ್ಯೆಯನ್ನು ಕಂಡುಹಿಡಿಯುವ ಜನರು ದೃಷ್ಟಿ ಸಾಮರ್ಥ್ಯ 20/20 ಆಗಿರುತ್ತದೆ ಹಾಗೂ ಹೆಚ್ಚಿನ ಐಕ್ಯೂ ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಇಂತಹ ಜನರು ತಮ್ಮ ಅತ್ಯುತ್ತಮ ವೀಕ್ಷಣಾ ಕೌಶಲ್ಯದ ಮೂಲಕ ಅಂತಹ ಒಗಟುಗಳನ್ನು ತ್ವರಿತವಾಗಿ ಪರಿಹರಿಸಬಹುದು. ಅಂದ್ರೆ ತಮ್ಮ ಸುತ್ತಲೂ ನಡೆಯುವ ಪ್ರತಿಯೊಂದು ದೃಶ್ಯಗಳನ್ನು ಕಡಿಮೆ ಸಮಯದಲ್ಲಿ ಸ್ಮೃತಿಪಟಲದಲ್ಲಿ ಸಂಗ್ರಹಿಸಿಕೊಳ್ಳುತ್ತಾರೆ. ಪ್ರತಿಕ್ಷಣವೂ ಇವರು ಅಲರ್ಟ್ ಆಗಿರುತ್ತಾರೆ.

ಎಲ್ಲಿದೆ 94 ಅಂಕೆ?

ಕಡಿಮೆ ಸಮಯ ಅಥವಾ ಕೇವಲ ಸೆಕೆಂಡ್‌ಗಳಲ್ಲಿ 94 ಅಂಕೆಯನ್ನು ನೀವು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರೆ ನೀವು ಅತ್ಯುತ್ತಮ ದೃಶ್ಯ ಮತ್ತು ಮಾನಸಿಕ ಕೌಶಲ್ಯಗಳನ್ನು ಹೊಂದಿದ್ದೀರಿ ಎಂದರ್ಥ. ಈ ಚಿತ್ರದ ಕೊನೆಯಿಂದ 3ನೇ ಸಾಲಿನ ಬಲಭಾಗದಲ್ಲಿ 94 ಅಂಕೆಯನ್ನು ಬರೆಯಲಾಗಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಿಗುತ್ತದೆ. ನಿಮ್ಮ ಮಕ್ಕಳ ಸದೃಢ ಮಾನಸಿಕ ಬೆಳವಣಿಗೆಗೆ ಈ ಚಿತ್ರಗಳನ್ನು ಬಳಸಿಕೊಳ್ಳಬಹುದು.

FAQ ಗಳು

1. ಆಪ್ಟಿಕಲ್ ಭ್ರಮೆಗಳು ಯಾವುವು?

ಮಾನವನ ಮೆದುಳಿಗೆ ಮೋಸಗೊಳಿಸುವ ಅಥವಾ ದಾರಿತಪ್ಪಿಸುವ ಚಿತ್ರಗಳನ್ನು ರಚಿಸಲು ಆಪ್ಟಿಕಲ್ ಇಲ್ಯೂಷನ್‌ಗಳು ಬಣ್ಣ, ಬೆಳಕು ಅಥವಾ ಮಾದರಿಗಳನ್ನು ಬಳಸುತ್ತವೆ.

2. ಅದು ನಮಗೆ ಹೇಗೆ ಸಹಾಯ ಮಾಡುತ್ತದೆ?

ಇವು ನಮ್ಮ ಕಣ್ಣುಗಳು ಮತ್ತು ಮೆದುಳು ನೋಡಲು ಹೇಗೆ ಒಟ್ಟಾಗಿ ಕೆಲಸ ಮಾಡುತ್ತವೆ ಎಂಬುದನ್ನು ಕಲಿಸುತ್ತವೆ.

3. ಆಪ್ಟಿಕಲ್ ಭ್ರಮೆಗಳು ದೃಷ್ಟಿಯನ್ನು ಸುಧಾರಿಸುತ್ತವೆಯೇ?

ಇಲ್ಲ, ಅವು ನೇರವಾಗಿ ದೃಷ್ಟಿಯನ್ನು ಸುಧಾರಿಸುವುದಿಲ್ಲ, ಆದರೆ ಮೆದುಳು ದೃಶ್ಯ ಮಾಹಿತಿಯನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದರ ಅರಿವನ್ನು ಹೆಚ್ಚಿಸಲು ಸಹಾಯ ಮಾಡಬಹುದು.

ಆಪ್ಟಿಕಲ್ ಇಲ್ಯೂಶನ್‌ ಫೋಟೋಸ್ ಅಥವಾ ಭ್ರಮೆಯ ಫೋಟೋಗಳು ಮಾನವನ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಹಲವಾರು ವರ್ಷಗಳನ್ನು ಕಳೆದಿದ್ದಾರೆ. ಕೆಲವರು ಆಪ್ಟಿಕಲ್ ಇಲ್ಯೂಶನ್ ಮನಸ್ಸನ್ನು ಚುರುಕುಗೊಳಿಸುತ್ತದೆ ಎನ್ನುತ್ತಾರೆ. ಇನ್ನು ಕೆಲವರು, ಇದನ್ನು ಜಸ್ಟ್ ಟೈಂ ಪಾಸ್‌ಗೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಪ್ರಯೋಜನವಿದ್ದರೂ, ಇಲ್ಲದಿದ್ದರೂ ಇಂಥಾ ಆಪ್ಟಿಕಲ್ ಇಲ್ಯೂಶನ್ ಫೋಟೋಸ್ ಆಗಾಗ ವೈರಲ್ ಅಗುತ್ತಲೇ ಇರುತ್ತವೆ. ಅಂಥಹದ್ದೇ ಗೊಂದಲಮಯವಾದ ಪೋಟೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಆ ಬಗ್ಗೆ, ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಆಪ್ಟಿಕಲ್ ಭ್ರಮೆಯನ್ನು ಪ್ರಯತ್ನಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ