
ನಮ್ಮ ಮಾನಸಿಕ ಆರೋಗ್ಯ ಹಾಗೂ ನಮ್ಮ ಮನಸ್ಸಿನ ಭಾವ ಹೇಗೆ ಎಂದು ನಾವೇ ತಿಳಿದುಕೊಳ್ಳಬಹುದು. ನಾವಾಡುವ ಪದಗಳು, ನೋಡುವ ಬಗೆ, ಜೀವನಶೈಲಿಯ ಮೇಲೆ ಜನರು ನಮ್ಮನ್ನು ಈ ವ್ಯಕ್ತಿ ಅಥವಾ ಮಹಿಳೆ ಹೇಗೆ ಎಂದು ಅಂದಾಜಿಸುತ್ತಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿತ್ವ ಪರೀಕ್ಷೆ ಅಂತಹ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಈ ಫೋಟೋಗಳು ಹಲವು ಚಿತ್ರಗಳನ್ನು ಒಳಗೊಂಡಿರುತ್ತವೆ. ಹಲವು ಫೋಟೋಗಳನ್ನು ಒಳಗೊಂಡ ಚಿತ್ರ ಇದಾಗಿರುತ್ತದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದಲ್ಲಿ ಅಡಗಿರುವ ಫೋಟೋಗಳು ಗೋಚರಿಸುತ್ತವೆ. ನಾವು ಮೊದಲು ಯಾವ ವಸ್ತುವನ್ನು ನೋಡುತ್ತೇವೆ ಎಂಬುದರ ಮೇಲೆ ನಮ್ಮ ಮಾನಸಿಕ ಸ್ಥಿತಿ ಹೇಗಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಇದು ವೈಜ್ಞಾನಿಕವಾಗಿ ಸಾಬೀತು ಮಾಡದಿದ್ದರೂ ಇಂತಹ ಫೋಟೋಗಳು ಸೋಶಿಯಲ್ ಮೀಡಿಯಾಲದಲ್ಲಿ ವೈರಲ್ ಆಗುತ್ತಿರುತ್ತವೆ.
ಆಪ್ಟಿಕಲ್ ಇಲ್ಯೂಷನ್ ಫೋಟೋ ಅಥವಾ ಪೇಂಟಿಂಗ್‌ಗಳು ನಮ್ಮೊಳಗಿನ ಪ್ರಜ್ಞೆ, ಆದ್ಯತೆ, ಭಯ ಮತ್ತು ಮೌಲ್ಯಗಳ ಒಳನೋಟಗಳನ್ನು ಬಹಿರಂಗಪಡಿಸುವ ಶಕ್ತಿಯನ್ನು ಹೊಂದಿರುತ್ತವೆ. ವ್ಯಕ್ತಿಯ ಮನಸ್ಸಿನ ಆಳವಾದ ಅಂತರವನ್ನು ಪರಿಶೀಲಿಸಲು ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿತ್ವ ಪರೀಕ್ಷೆಗಳು ಸಹಾಯ ಮಾಡುತ್ತವೆ. ಇದೀಗ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳು ಆನ್‌ಲೈನ್‌ನಲ್ಲಿ ಹೆಚ್ಚು ಫೇಮಸ್ ಆಗಿವೆ. ಇಂದು ನಾವು ನಿಮಗೆ ತೋರಿಸುತ್ತಿರುವ ಈ ಫೋಟೋ ಎರಡು ಚಿತ್ರಗಳನ್ನು ಹೊಂದಿವೆ. ಈ ಎರಡರಲ್ಲಿ ನಿಮಗೆ ಮೊದಲು ಯಾವ ಭಾಗ ಅಥವಾ ಫೋಟೋ ಕಾಣಿಸುತ್ತೆ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಬಹುದಾಗಿದೆ. ಈ ಚಿತ್ರದಲ್ಲಿ ಜಲಪಾತ ಮತ್ತು ಕರಡಿ (ಪಾಂಡಾ) ಕಾಣಿಸುತ್ತದೆ. ನಿಮಗೆ ಮೊದಲು ಯಾವ ಚಿತ್ರ ಕಾಣಿಸಿದೆ? ಹಾಗಾದ್ರೆ ನಿಮ್ಮ ಮನಸ್ಸಿನ ಸ್ಥಿತಿ ಏನು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ವಿದೇಶದಲ್ಲಿ 58 ಸಾವಿರ ರೂಪಾಯಿ ದಂಡ ಪಾವತಿಸಿ ಕ್ಷಮೆ ಕೇಳಿದ ಫ್ಲೈಯಿಂಗ್ ಪಾಸ್‌ಪೋರ್ಟ್ ದಂಪತಿ
1.ನಿಮಗೆ ಮೊದಲು ಪಾಂಡಾ/ಕರಡಿ ಕಾಣಿಸಿದೆಯಾ?
ಈ ಚಿತ್ರದಲ್ಲಿ ನಿಮಗೆ ಮೊದಲು ಪಾಂಡಾ/ಕರಡಿ ಕಾಣಿಸಿದ್ರೆ ನೀವು ಹೊರಗೆ ತುಂಬಾ ಮೃದು ಸ್ವಭಾವದವರಂತೆ ಕಾಣಿಸುತ್ತೀರಿ. ನಿಮ್ಮ ಸುತ್ತಲೂ ಒಂದು ರೇಖೆಯನ್ನು ಎಳೆದುಕೊಂಡಿರುವ ನೀವುಗಳು, ಯಾರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲ್ಲ. ನೀವು ತುಂಬಾ ಯೋಚನೆ ಮಾಡುವ ಗುಣವುಳ್ಳವರಾಗಿದ್ದು, ಯೋಚಿಸಿಯೇ ದಣಿವು ಮಾಡಿಕೊಳ್ಳುವ ಸ್ವಭಾವ ನಿಮ್ಮದಾಗಿರುತ್ತದೆ. ಈ ಹಿಂದೆ ಹಲವರಿಗೆ ನೋಯಿಸಿರುವ ಕಾರಣ ನಿಮ್ಮನ್ನು ಜನ ಹೆಚ್ಚು ನಂಬಲ್ಲ ಹಾಗೂ ನೀವೂ ಸಹ ಯಾರನ್ನೂ ನಂಬಲ್ಲ.
2.ಜಲಪಾತ ಕಾಣಿಸಿದೆಯಾ?
ಒಂದು ವೇಳೆ ನಿಮಗೆ ಜಲಪಾತ ಕಾಣಿಸಿದ್ರೆ, ನೀವೂ ಸಹನಾಭೂತಿ ವ್ಯಕ್ತಿಯ ಎಂದರ್ಥ. ನೀವು ಒಳ್ಳೆಯ ಕೇಳುಗರಾಗಿದ್ದು, ಗೆಳೆಯರ ಬಳಗ ದೊಡ್ಡದಾಗಿರುತ್ತದೆ. ನೀವು ಭಾವನಾತ್ಮಕ ಜೀವಿಯಾಗಿದ್ದರಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತೀರಿ. ನಿಮ್ಮಿಂದ ದೂರವಾದವರೂ ಸಹ ನಿಮ್ಮ ಸ್ನೇಹವನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ.
ತಾಜ್‌ಮಹಲ್ ಮುಂದೆ ರೀಲ್ಸ್ ಮಾಡಿ, ಭಾರತಕ್ಕೆ ಬರಬೇಡಿ ಅಂತ ಹೇಳಿದ್ಯಾಕೆ ವಿದೇಶಿ ಮಹಿಳೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.