
ಮದ್ಯಪಾನ ಪುರುಷರಿಗಷ್ಟೇ ಸೀಮಿತವಾದ ಚಟ ಎಂಬ ವಾದ ಈಗಿಲ್ಲ. ಏಕೆಂದರೆ ಮದ್ಯ ಸೇವನೆಯಲ್ಲಿ ಇಂದು ಮಹಿಳೆಯರೂ ಹಿಂದೆ ಬಿದ್ದಿಲ್ಲ. ಅದರಲ್ಲೂ ಆರ್ಥಿಕ ಸ್ಥಿತಿವಂತ ಕುಟುಂಬದ ಮಹಿಳೆಯರು ಮತ್ತು ಪುರುಷರು ಕುಡಿತವನ್ನು ತಮ್ಮ ಶ್ರೀಮಂತಿಕೆ ಸಂಕೇತ ಎಂದೇ ಭಾವಿಸಿದ್ದಾರೆ.
ಆದರೆ, ಪುರುಷರ ಮದ್ಯ ಸೇವನೆಯಿಂದಾಗಿ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಕುಡುಕ ಗಂಡನಿಂದ ಪತ್ನಿ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾಳೆ ಎಂಬುದು ಸಾಮಾನ್ಯ. ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ, ಸಮೀಕ್ಷೆಯೊಂದು ಅಚ್ಚರಿ ಮಾಹಿತಿ ಹೊರಗೆಡವಿದೆ. ಏನೆಂದರೆ, ಮದುವೆಯಾದ ಮಹಿಳೆಯರು ಪುರುಷರಿಗಿಂತ ಹೆಚ್ಚು ಮದ್ಯ ಸೇವನೆ ಮಾಡುತ್ತಾರಂತೆ!.
ಹೌದು, ಅಮೆರಿಕದ ಸಿನ್ಸಿನಾಟಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರು ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ತಿಳಿದುಬಂದಿದೆ. ಮದುವೆಯಾದವರು, ವಿಧವೆಯರು ಹಾಗೂ ಕನ್ಯೆಯರನ್ನು ಸಮೀಕ್ಷೆ ಒಳಪಡಿಸಿದಾಗ ಅವರಲ್ಲಿ ಮದುವೆಯಾದ ಮಹಿಳೆಯರು ಹೆಚ್ಚು ಮದ್ಯಸೇವಿಸುತ್ತಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಈ ಸಮೀಕ್ಷೆ ವಿದೇಶದ ಮಹಿಳೆಯರನ್ನು ಒಳಗೊಂಡಂತೆ ನಡೆದಿರುವಂಥದ್ದು, ಹಾಗಾಗಿ ಇದು ವಿದೇಶಕ್ಕೆ ಸೀಮಿತ ಎಂದು ಹೇಳಬಹುದು. ಬಹುಶಃ ಭಾರತದಲ್ಲಿ ಇದೇ ರೀತಿಯ ಸಮೀಕ್ಷೆ ನಡೆದಿದ್ದರೆ ಅದಕ್ಕೆ ತದ್ವಿರುದ್ಧವಾದ ಸಮೀಕ್ಷೆ ಹೊರಬೀಳುತ್ತಿತ್ತೇನೋ.
(ಕನ್ನಡಪ್ರಭ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.