
ನವದೆಹಲಿ(ಜು.07): ಸಾಮಾಜಿಕ ಜಾಲಾತಾಣಗಳಲ್ಲಿ ಈ ದಿನಗಳಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನೀವು ಅವರನ್ನು ಸಾಹಸಮಯ ಅವತಾರದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ತುಂಬಾ ಹಳೆಯದು ಆದರೆ ಎರಡು ತಿಂಗಳ ಹಿಂದಷ್ಟೇ ಇನ್ಸ್ಟಾಗ್ರಾಂಗೆ ಲಾಗಿನ್ ಆಗಿರುವ ಸ್ಮೃತಿ ಇರಾನಿ ಇದನ್ನು ತಮ್ಮ ಅಕೌಂಟ್'ನಲ್ಲಿ ಸೇರ್ ಮಾಡಿಕೊಂಡಿದ್ದಾರೆ. ಇನ್ನು ಇರಾನಿ ಇನ್ಸ್ಟಾಗ್ರಾಂಗೆ ಸೇರಿ ಕೆಲವೇ ದಿನಗಳಾಗಿದ್ದರೂ ಅವರು ಇಲ್ಲಿ ಬಹಳಷ್ಟು ಆ್ಯಕ್ಟಿವ್ ಆಗುರುತ್ತಾರೆ ಎಂಬುವುದು ಗಮನಾರ್ಹ
ಈ ಸಾಹಸಮಯ ವಿಡಿಯೋ ಹಿಮಾಚಲ ಪ್ರದೇಶದ ಕಾಂಗಡಾ ಘಾಟಿಯಲ್ಲಿರುವ ಬೀರ್ ಬಿಲ್ಲಿಂಗ್'ನದಾಗಿದೆ. ಇನ್ನು ಸಚಿವೆ ವಿಡಿಯೋ ಶೇರ್ ಮಾಡುತ್ತಿದ್ದಂತೆಯೇ ಇದು ವೈರಲ್ ಆಗತೊಡಗಿದೆ. ಅಲ್ಲದೇ ಪ್ರತಿಕ್ರಿಯೆಯೂ ಉತ್ತಮವಾಗಿದೆ. ಇವರಿಗೆ ಒಟ್ಟು 43 ಸಾವಿರ ಪಾಲೋವರ್ಸ್ ಇದ್ದು, ಒಟ್ಟು 49 ಮಂದಿಯನ್ನು ಇವರು ಫಾಲೋ ಮಾಡುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.