ಕಚೇರಿಯಲ್ಲಿ ಕೆಲಸಕ್ಕೆ ಕುಳಿತ್ರೆ ಸಾಕು ಕಣ್ಣು ಭಾರವಾಗುತ್ತೆ. ಕಷ್ಟಪಟ್ಟು ರೆಪ್ಪೆ ತೆಗೆದ್ರೂ ನಿದ್ರೆ ಹೋಗೋದಿಲ್ಲ. ಊಟವಾದ್ಮೇಲಂತೂ ಏನ್ ಕೆಲ್ಸ ಮಾಡ್ತೇನೆ ಗೊತ್ತೆ ಆಗಲ್ಲ ಅನ್ನೋರು ನೀವಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.
ಬೆಳಿಗ್ಗೆ ದಡಬಡಾಯಿಸಿ ಎದ್ದಿರ್ತೇವೆ. ಸ್ನಾನ ಮಾಡಿ, ಟಿಫನ್ ಮುಗಿಸಿ ಆಫೀಸ್ ಗೆ ಹೋದ್ರೆ ನಿದ್ರೆ ಎಳೆಯುತ್ತಿರುತ್ತೆ. ಬೆಳ್ಳಂಬೆಳಿಗ್ಗೆ ಇದೇನಪ್ಪ ನಿದ್ರೆ ಅಂತಾ ಅನೇಕರು ಗೊಣಕ್ತಿರುತ್ತಾರೆ. ಶೇಕಡಾ 5ರದಲ್ಲಿ ಇಬ್ಬರಿಗೆ ಕಚೇರಿಗೆ ಹೋಗ್ತಿದ್ದಂತೆ ನಿದ್ರೆ ಸಮಸ್ಯೆ ಕಾಡುತ್ತೆ ಅಂತಾ ಸಂಶೋಧನೆಯೊಂದು ಹೇಳಿದೆ. ಬಿಸಿಲು ಹೆಚ್ಚಾಗ್ತಿದ್ದಂತೆ ನಿದ್ರೆ ಜೋರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೊಟ್ಟೆ ಖಾಲಿಯಿರುವಾಗ ಕೆಲವರಿಗೆ ನಿದ್ರೆ ಎಳೆದ್ರೆ ಮತ್ತೆ ಕೆಲವರಿಗೆ ಹೊಟ್ಟೆ ತುಂಬುತ್ತಿದ್ದಂತೆ ನಿದ್ರೆ ಬರುತ್ತದೆ. ಆ ಸಮಯದಲ್ಲಿ ಬರುವ ನಿದ್ರೆ ಕಂಟ್ರೋಲ್ ಮಾಡೋದು ಕಷ್ಟ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡ್ತಿದ್ದರೆ ಕೈ ಓಡ್ತಿರುತ್ತದೆ ನಿಜ ಆದ್ರೆ ಏನ್ ಮಾಡಿದೆವೆ ಗೊತ್ತಿರೋದಿಲ್ಲ. ನಮ್ಮ ಅರಿವಿಗೆ ಬಾರದೆ ಕಣ್ಣು ಮುಚ್ಚಿರುತ್ತದೆ. ಕೆಲಸ ಮಾಡುವ ಟೈಂನಲ್ಲಿ ನಿದ್ರೆ ಮಾಡ್ತಾರೆ ಅಂತಾ ಬಾಸ್ ಬೈಗುಳ ಮಾಮೂಲಾಗುತ್ತೆ. ಒಂದೋ ಎರಡೋ ದಿನವಾದ್ರೆ ಓಕೆ. ಕೆಲವರಿಗೆ ಪ್ರತಿ ದಿನ ಈ ನಿದ್ರೆ ಸಮಸ್ಯೆ ಕಾಡೋದಿದೆ. ಇನ್ನು ಕೆಲವರಿಗೆ ಬೇಸಿಗೆ ಬಂದ್ರೆ ಸಂಕಷ್ಟ ಶುರು. ಬೇಸಿಗೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿ ಕೆಲಸಕ್ಕೆ ಮರಳಿದ್ರೆ ತೂಕಡಿಗೆ ಸಾಮಾನ್ಯ. ನಿರಂತರವಾಗಿ ಕುಳಿತುಕೊಂಡು ಕೆಲಸ ಮಾಡುವುದ್ರಿಂದ ದೇಹ ಜಡವಾಗುತ್ತದೆ. ಇದ್ರಿಂದ ನಿದ್ರೆ ಬಂದಂತಾಗುತ್ತದೆ. ಇನ್ನೊಂದು ಕಾರಣ ರಾತ್ರಿ ಸರಿಯಾಗಿ ನಿದ್ರೆ ಮಾಡದಿರುವುದು. ಆಗಾಗ ಎಚ್ಚರಗೊಳ್ತಿರುವುದು ಹಾಗೆ ಮಲಗುವ, ಏಳುವ ಸಮಯದಲ್ಲಿ ಆಗಾಗ ಬದಲಾವಣೆ, ಆಹಾರ ಕ್ರಮ, ಜೀವನ ಶೈಲಿ ಇವೆಲ್ಲವೂ ಕಚೇರಿಯಲ್ಲಿ ನಿದ್ರೆ ಬರಲು ಕಾರಣವಾಗುತ್ತದೆ. ಈ ನಿದ್ರೆ ಹೋಗಲಾಡಿಸ್ಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಕಡಿಮೆ ಆಹಾರ (Food) ಸೇವಿಸಿ : ಮಧ್ಯಾಹ್ನದ ಊಟ ಹೆಚ್ಚಾದ್ರೆ ನಿದ್ರೆ ಎಳೆಯುತ್ತದೆ ಎನ್ನುವವರು ಮಧ್ಯಾಹ್ನದ ಊಟದಲ್ಲಿ ಬದಲಾವಣೆ ಮಾಡಿ. ಮಧ್ಯಾಹ್ನ ಲಘು ಆಹಾರ ಸೇವಿಸಿ. ಇದು ನಿದ್ರೆ (sleep) ಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಊಟದ ನಂತ್ರ ಸಿಹಿ ತಿನ್ನುವ ಅಭ್ಯಾಸ ಕೆಲವರಿಗಿರುತ್ತದೆ. ಸಿಹಿ (Sweet) ತಿಂಡಿಗಳನ್ನು ತಿನ್ನುವುದರಿಂದ ನಿದ್ರೆ ಬರುತ್ತದೆ. ಹಾಗಾಗಿ ಮಧ್ಯಾಹ್ನದ ಊಟದ ನಂತ್ರ ಸಿಹಿ ಸೇವನೆ ಮಾಡ್ಬೇಡಿ.
ಅಲ್ಲೇ ವಾಕ್ ಮಾಡಿ : ಒಂದೇ ಕಡೆ ನಿರಂತರವಾಗಿ ಕುಳಿತು ಕೆಲಸ ಮಾಡುವುದರಿಂದ ದೇಹ ಜಡವಾಗುತ್ತದೆ. ದಣಿದ ಭಾವನೆ, ಇದರಿಂದಾಗಿ ನಿದ್ರೆ ಪ್ರಾರಂಭವಾಗುತ್ತದೆ. ಆದ್ದರಿಂದ ಕೆಲಸದ ಮಧ್ಯೆ ಸ್ವಲ್ಪ ವಾಕ್ ಮಾಡಿ. ವಾಕ್ ಗೆ ನೀವು ಪಾರ್ಕ್ ಗೆ ಹೋಗ್ಬೇಕಾಗಿಲ್ಲ. ಕಚೇರಿಯಲ್ಲಿಯೇ ಅತ್ತಿಂದಿತ್ತ ಓಡಾಡಿ. ಕೆನಡಾದ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ವ್ಯಕ್ತಿ ಪ್ರತಿ ಗಂಟೆಗೊಮ್ಮೆ 15 ನಿಮಿಷಗಳ ಕಾಲ ನಿಲ್ಲಬೇಕಂತೆ. ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ, ನೀವು ಅಲ್ಲೇ ನಡೆದಾಡಿ.
ಹಾಸಿಗೆಗೆ ಹೋಗ್ತಿದ್ದಂತೆ ಮೈ ತುರಿಸುತ್ತಾ? ಟೆನ್ಷನ್ ಬೇಡ ಮನೆ ಮದ್ದಿದೆ
ದೇಹವನ್ನು ಸ್ಟ್ರೆಚ್ ಮಾಡಿ : ದೇಹದ ಆಲಸ್ಯವನ್ನು ಹೋಗಲಾಡಿಸಲು ಕುರ್ಚಿಯ ಮೇಲೆ ಕುಳಿತಿರುವಾಗ್ಲೇ ಡೆಸ್ಕ್ ಸ್ಟ್ರೆಚಿಂಗ್ ಸಹ ಮಾಡಬಹುದು. ದೇಹವನ್ನು ಸ್ಟ್ರೆಚಿಂಗ್ ಮಾಡುವುದರಿಂದ ಸ್ನಾಯುಗಳು ಸಡಿಲವಾಗುತ್ತವೆ. ದೇಹದಲ್ಲಿ ರಕ್ತದ ಹರಿವು ಉಂಟಾಗುತ್ತದೆ ಮತ್ತು ದೇಹವು ಶಕ್ತಿ ಪಡೆಯುತ್ತದೆ. ಇದ್ರಿಂದ ಆಹಾರ ಜೀರ್ಣವಾಗುತ್ತದೆ ಮತ್ತು ಆಯಾಸವಾಗುವುದಿಲ್ಲ.
ಚಹಾ-ಕಾಫಿ ಸೇವನೆ : ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ, ಮಿತವಾಗಿ ಮಾಡಿದರೆ ಹಲವಾರು ಪ್ರಯೋಜನಗಳಿವೆ. ಕಚೇರಿಯಲ್ಲಿ ಕೆಲಸದ ನಡುವೆ ನಿದ್ದೆ ಬಂದಾಗ ಟೀ ಅಥವಾ ಕಾಫಿ ಕುಡಿಯಿರಿ. ಎರಡೂ ನಿದ್ರೆಯನ್ನು ಓಡಿಸಲು ನೆರವಾಗುತ್ತದೆ.
ಸೂರ್ಯನ ಬೆಳಕಿಗೆ ಮೈ ಒಡ್ಡಿ : ಕಚೇರಿಯಲ್ಲಿ ಕೆಲಸದ ಮಧ್ಯೆ ನಿದ್ರೆ ಬರ್ತಿದೆ ಎಂದಾದ್ರೆ ಸ್ವಲ್ಪ ಸಮಯ ಕಚೇರಿಯಿಂದ ಹೊರಗೆ ಹೋಗಿ. ತೆರೆದ ಜಾಗದಲ್ಲಿ ಸೂರ್ಯನ ಬೆಳಕು,ಕಿರಣ ಬೀಳುವಲ್ಲಿ ನಿಂತುಕೊಳ್ಳಿ. ಶುದ್ಧ ಗಾಳಿ ಮತ್ತು ಸೂರ್ಯನ ಬೆಳಕು ನಿಮ್ಮ ನಿದ್ರೆಯನ್ನು ಓಡಿಸುತ್ತದೆ.
ಎಚ್ಚರ..! ಸೆಕ್ಸ್ ಲೈಫ್ ಹಾಳೋ ಮಾಡುತ್ತೆ ಟೋಕೋಫೋಬಿಯಾ
ಹಾಡು ಕೇಳಿ : ಕಚೇರಿಯಲ್ಲಿ ನಿದ್ದೆ ಬರುತ್ತಿದ್ದರೆ ಹಾಡುಗಳನ್ನು ಕೇಳಬಹುದು. ಹೆಡ್‌ಫೋನ್‌ಗಳ ಮೂಲಕ ಸಂಗೀತವನ್ನು ಆಲಿಸಿ. ಸಂಗೀತವು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ.