ಮುದ್ದಾಡೋಕೆ ಮಾತ್ರವಲ್ಲ, ಸಾಕೋ ನಾಯಿಯಿಂದಲೂ ಬರುತ್ತೆ ಇನ್‌ಕಂ

Published : Jul 12, 2025, 06:00 PM IST
pomeranian

ಸಾರಾಂಶ

ಶ್ವಾನಗಳನ್ನು ಪ್ರೀತಿಯಿಂದ ಸಾಕುವುದರ ಜೊತೆಗೆ ಅದರಿಂದ ಆದಾಯವನ್ನೂ ಗಳಿಸಬಹುದು. ಜಾತಿ ತಳಿ ಶ್ವಾನಗಳ ಸಾಕಣೆಯಿಂದ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಗಳಿಸಬಹುದು. ಮರಿಗಳನ್ನು ಮಾರಾಟ ಮಾಡುವ ಮೂಲಕ ಲಾಭ ಗಳಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಆಟವಾಡುವುದಕ್ಕೆ ಒತ್ತಡಗಳ ನಿವಾರಣೆಗೆ ಮನೆಯ ರಕ್ಷಣೆ ಸೌಂದರ್ಯಕ್ಕೆ ತುಂಟಾಟ ನೋಡಲೆಂದು ಹವ್ಯಾಸಕ್ಕಾಗಿ ಪ್ರತಿಷ್ಠೆಗಾಗಿ ಹೀಗೆ ಬಂದಿಲ್ಲೊಂದು ಕಾರಣವನ್ನು ಇಟ್ಟುಕೊಂಡು ಶ್ವಾನ(Dog)ಗಳನ್ನು ಸಾಕುವ ದೊಡ್ಡ ಬಳಗವೇ ಇದೆ. ಹಿಂದೆ ಪೇಟೆಗಳಲ್ಲಿ ಶ್ರೀಮಂತರ ಮನೆಗೆ ಮೀಸಲಾಗಿದ್ದ ಮುಧೋಳ, ಪೊಮೇರಿಯನ್(Pomeranian), ಪಗ್‌Pug, ರಾಟ್ ವೀಲರ್raat vilar dog, ಪುಲಿ(Puli)dog,ಡಾಬರ್‌ಮನ್‌(Dobermann),ಬಾಕ್ಸರ್‌ (Boxer), ಬುಡ್‌ಲಾಗ್‌,ಲಾಬ್ರಡಾರ್‌(Labrador) ಜರ್ಮನ್ ಶೆಫರ್ಡ್, ರಿಟ್ರೈವರ್(Retriever,) ಮುಂತಾದ ತಳಿಯ ಶ್ವಾನಗಳು ಎಂದು ಹಳ್ಳಿಗಳನ್ನ ತಲುಪಿವೆ. ಹಿಂದೆ ಜಾತಿ ತಳಿಯ ಶ್ವಾನಗಳನ್ನ ಸಾಕುವವರು ಶ್ರೀಮಂತರು ಎಂಬ ಭಾವನೆ ಇತ್ತು. ಆದರೆ ಇಗಿನ ದಿನದಲ್ಲಿ  ಶ್ವಾನ(Dog) ಸಾಕಣೆ ಹೆಚ್ಚಿನವರ ಒಂದು ಹವ್ಯಾಸವಾಗಿದೆ. ಇಗಿನವರಂತು ಶ್ವಾನಗಳನ್ನ ತಮ್ಮ ಸ್ವಂತ ಮಕ್ಕಳಂತೆ ಅವುಗಳಿಗೆ ಊಟ ಮಾಡಿಸುವುದೇನು, ಮಕ್ಕಳಂತೆ ತಮ್ಮ ಬಳಿಯೇ ಮಲಗಿಸಿಕೊಳ್ಳುವುದೇನು? ಇವೇಲ್ಲಾ ಸಾಮಾನ್ಯವಾಗಿಬಿಟ್ಟಿದೆ. ಮೊದಲೆಲ್ಲಾ ಶ್ವಾನಗಳನ್ನ ನಮ್ಮ ಹಿರಿಯರು ಮನೆಯೋಳಗೂ ಬಿಟ್ಟುಕೊಳ್ಳುತ್ತಿರಲಿಲ್ಲ. ಆದರೆ ಇಗ ಕಾಲ ಬದಲಾಗಿದೆ. ಶ್ವಾನಗಳನ್ನ ಪ್ರೀತಿಯಿಣದ ಸಾಕುವುದರ ಜೊತೆಗೆ ಅದರಿಂದ ಆದಾಯವನ್ನೂ ಗಳಿಸಬಹುದು.

ಸುಮಾರು ಮೂರು ಸಾವಿರದಿಂದ ಒಂದು ಲಕ್ಷದವರೆಗಿನ ಶ್ವಾನಗಳನ್ನ ನಮ್ಮ ಹಳ್ಳಿಗಳಲ್ಲಿ ಕಾಣಸಿಗುತ್ತದೆ. ಹಾಗೆಂದು ಜಾತಿ ಶ್ವಾನಗಳನ್ನು ಸಾಕೋದು ಅಷ್ಟು ಸುಲಭವಲ್ಲ ಮರಿಯಿಂದ ಮುದಿಯಾಗುವವರೆಗೆ ಕಾಲಕಾಲಕ್ಕೆ ಲಸಿಕೆ ಪ್ರತ್ಯೇಕ ಆಹಾರ ಸಮಯಕ್ಕೆ ಸರಿಯಾಗಿ ಸ್ನಾನ, ವಾಕಿಂಗ್ ಶೀತ ಕೆಮ್ಮು ಬಾರದಂತೆ ನೋಡಿಕೊಳ್ಳುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವುದು ಅತ್ಯಗತ್ಯ. ಒಂಚೂರು ತಪ್ಪಿದರೂ ಎಡವಟ್ಟಾಗುವ ಸಾಧ್ಯತೆಗಳಿರುತ್ತವೆ. ಇನ್ನು ಕಡಿಮೆ ಎಂದರೆ ಒಂದು ಶ್ವಾನಕ್ಕೆ ತಿಂಗಳಿಗೆ ಆಹಾರ ಮಾತ್ರೆ ಎಲ್ಲ ಲೆಕ್ಕ ಹಾಕಿದ್ರೆ ಒಂದು ಸಾವಿರ ರೂಪಾಯಿ ಖರ್ಚಿದೆ ಹಾಗಾದ್ರೆ ಇಷ್ಟೆಲ್ಲಾ ಖರ್ಚು ಮಾಡಿ ಸಾಕುವುದರಿಂದ ಏನು ಪ್ರಯೋಜನ ಎಂದು ಹೆಚ್ಚಿನವರು ಯೋಚಿಸುತ್ತಿರಬಹುದು. ಹೆಚ್ಚಿನವರು ಇಲ್ಲಿ ಲಾಭ ನಷ್ಟದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ ಶ್ವಾನ(Dog)ಗಳ ಪ್ರೀತಿ ಮತ್ತು ಅವುಗಳ ನಿಷ್ಠೆಯ ಇದ್ದರೂ ಅವೆಲ್ಲ ಲೆಕ್ಕಕ್ಕೆ ಬರುವುದಿಲ್ಲ ಹಾಗಾದರೆ ಲಾಭದಾಯಕವಾಗಿ ಸಾಧ್ಯ ಇದೆಯಾ ಹವ್ಯಾಸವಾಗಿ ಸಾಕುವ ಶ್ವಾನಗಳಿಂದಲೂ ಆದಾಯ ಗಳಿಸಬಹುದೆಂಬುದು ನಿಮಗೆ ಗೊತ್ತಾ ? ಹೌದು ಇಗ ಹೆಚ್ಚಿನವರು ಶ್ವಾನಗಳಿಂದ ತಿಂಗಳಿಗೆ ಲಕ್ಷಗಟ್ಟಲೇ ಆದಾಯವನ್ನ ಗಳಿಸುತ್ತಿರುವವರೂ ಇದ್ದಾರೆ. 

ಉದಾಹರಣೆ ಈಗ ಒಂದು ಗಂಡು ಒಂದು ಹೆಣ್ಣು ಪೊಮೇರಿಯನ್(Pomeranian) ತಳಿಯ ನಾಯಿಗಳನ್ನು ತಂದು ಸಾಕಿದರೆ ಅವು ಆರು ತಿಂಗಳಿಗೊಮ್ಮೆ ಮೂರರಿಂದ ನಾಲ್ಕು ಮರಿಗಳಿಗೆ ಜನ್ಮವನ್ನು ನೀಡುತ್ತವೆ. ಮರಿಗಳಿಗೆ ಮೂರು ತಿಂಗಳು ತುಂಬುತ್ತಿದ್ದಂತೆ ಅವುಗಳನ್ನು ಮಾರಬಹುದು .ಅಂದ್ರೆ ತಾಯಿಯಿಂದ ಬೇರ್ಪಟ್ಟು ಅವು ಬದುಕುತ್ತವೆ. ಒಂದು ವರ್ಷಕ್ಕೆ ಏಳರಿಂದ ಎಂಟು ಮರಿಗಳನ್ನ ನೀವು ಮಾರಬಹುದು. ಆದರೆ ಅವುಗಳನ್ನ ಪಾಲನೇ ಪೋಷಣೆ ಮಾಡುವುದು ಸಹ ಅಷ್ಟೇ ಮುಖ್ಯ. ಅವುಗಳಿಗೆ ಊಟ ಉಪಚಾರ ಸಹ ಸರಿಯಾದ ರೀತಿಯಲ್ಲಿ ಮಾಡಬೇಕಾಗುತ್ತದೆ.  ಇದು ಬಂಡವಾಳ ಹಾಕಿದ್ದಕಿಂತ ಹೆಚ್ಚಾಗಿ ಆದಾಯ ಬರುವಂತಹ ಬಿಸಿನೆಸ್‌. ಹೀಗೆ ಮರಿಗಳಿಗೆ ಮೂರು ತಿಂಗಳು ತುಂಬುತ್ತಿದ್ದಂತೆ ಅವುಗಳ ಫೋಟೋಗಳನ್ನು ವಾಟ್ಸಾಪ್ ಫೇಸ್ ಬುಕ್ ಈ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವದರಿಂದ ಬೇಕಾದವರು ತೆಗೆದುಕೊಳ್ಳುತ್ತಾರೆ. ಇಲ್ಲವೇ ನಿಮ್ಮ ಸುತ್ತ ಮುತ್ತಲಿನ ಜನರಿಗೆ ತಿಳಿಸಿದರೆ ಯಾರಾದರೂ ತೆಗೆದುಕೊಳ್ಳುತ್ತಾರೆ. ಇಗ ನಾಯಿಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ, ಶ್ವಾನದ(Dog) ಮರಿಗಳಿಗೆ ಸಾಕಷ್ಟು ಬೇಡಿಕೆ ಇದ್ದು ಮರಿ ಸಾಕಣೆ ಯನ್ನೇ ಒಂದು ಉದ್ಯೋಗವನ್ನಾಗಿಸಬಹುದು. ಹಾಗೇ ಮಾಡಿದವರೂ ಸಾಕಷ್ಟು ಮಂದಿ ಇದ್ದಾರೆ. ಶ್ವಾನಗಳಿಗೆ ಖರ್ಚು ಮಾಡುವವರ ಸಂಖ್ಯೆ ಹೆಚ್ಚಿರುವ ಈ ದಿನಗಳಲ್ಲಿ ಅವುಗಳಿಂದ ಲಾಭಗಳಿಸುವ ನಿಟ್ಟಿನಲ್ಲಿ ಯೋಚಿಸಲು ಇದು ಸಕಾಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಗಳ ಸುರಕ್ಷತೆಗಾಗಿ ಅಮ್ಮನೇ ಅಪ್ಪನಾದ: ಗಂಡನ ಸಾವಿನ ನಂತರ ಗಂಡಿನಂತೆ ವೇಷ ಧರಿಸಿ ಬದುಕಿದ ತಾಯಿ
ಅಯ್ಯೋ ಚಪಾತಿ ಉಳಿತು ಅಂತ ಎಸಿಬೇಡಿ.. ಅದ್ರಿಂದಲೂ ಇಷ್ಟೆಲ್ಲಾ ಪ್ರಯೋಜನಗಳಿವೆ