ಸರಿಯಾಗಿ ನಿದ್ದೆ ಬರುತ್ತಿಲ್ಲವೇ..? ಹಾಗಾದರೆ ಈ ತಪ್ಪುಗಳನ್ನ ಖಂಡಿತಾ ಮಾಡಬೇಡಿ

By internet deskFirst Published Oct 7, 2016, 9:14 AM IST
Highlights

ಅದೆಷ್ಟೋ ಮಂದಿಗೆ ನಿದ್ದೆಯದ್ದೇ ಸಮಸ್ಯೆ. ಎಷ್ಟು ಹೊತ್ತಾದರೂ ರೆಪ್ಪೆಗಳನ್ನ ಒಂದುಗೂಡಿಸಲು ಸಾಧ್ಯವಾಗುವುದಿಲ್ಲ. ಆದರೆ, ಈ ನಿದ್ರಾಹೀನತೆಗೆ ನಾವು ಮಲಗುವ ಮುನ್ನ ಮಾಡುವ ತಪ್ಪುಗಳೂ ಕಾರಣವಾಗಿರುತ್ತವೆ ಎಂಬುದನ್ನ ಮರೆಯುವಂತಿಲ್ಲ. ಹಾಗಾದರೆ, ಹಾಗಾದರೆ, ನಿದ್ರಾಹೀನತೆಗೆ ಕಾರಣವಾಗುವ ನಾವು ಮಾಡುವ ತಪ್ಪುಗಳು ಯಾವುವು..? ಡೀಟೇಲ್ಸ್ ಇಲ್ಲಿದೆ.

1. ಟೆಲಿವಿಜನ್ ನೋಡಬೇಡಿ: ಮಲಗುವ ಮುನ್ನ ಟಿವಿ,ವಿಡಿಯೋ ಗೇಮ್ಸ್, ಮೊಬೈಲ್`ಗಳಿಂದ ದೂರವಿರಿ. ಇವು ನಿಮ್ಮ ಮೆದುಳನ್ನ ಸ್ಟಿಮ್ಯೂಲೇಟ್ ಮಾಡುವುದರಿಂದ ದೇಹ ವಿಶ್ರಾಂತಿಗೆ ಹೋಗುವುದಿಲ್ಲ. ಅದರ ಬದಲು ಪುಸ್ತಕ ಓದಿದರೆ ಒಳ್ಳೆಯದು.

Latest Videos

2. ಆಹಾರ ಮಿತವಾಗಿರಲಿ: ರಾತ್ರಿ ಊಟ ಮಿತವಾಗಿದ್ದರೆ ಉತ್ತಮ. ಹೆಚ್ಚಾಗಿ ತಿನ್ನುವುದರಿಂದ ಸಮಸ್ಯೆಯಾಗುತ್ತೆ. ಕಡಿಮೆ ತಿನ್ನಿ. ಕೊನೇ ಪಕ್ಷ ಊಟ ಮಾಡಿದ ಒಂದು ಗಂಟೆ ಬಳಿಕ ಹಾಸಿಗೆಗೆ ಹೋದರೆ ಉತ್ತಮ.

3. ನಿದ್ದೆ ಕಡಿತ ಬೇಡ: ಕೆಲಸದ ಒತ್ತಡದಿಂದ ವಾರದ ಬಹುತೇಕ ದಿನಗಳಲ್ಲಿ ನಿದ್ದೆ ಸರಿಯಾಗಿ ಮಾಡುವುದಿಲ್ಲ. ಿದರಿಂದ ಭೀಕರ ಸಮಸ್ಯೆಯಾಗುವ ಸಾಧ್ಯತೆ ಇರುತ್ತೆ. ದೀರ್ಘ ಕಾಲ ಿದೇ ರೀತಿಯಾದರೆ ಆತಂಕ, ತಲೆನೋವು, ಕಿರಿಕಿರಿಯಂತಹ ಸಮಸ್ಯೆಗಳು ಕಾಡುತ್ತವೆ.

4. ನಿದ್ದೆ ಬರಲಿಲ್ಲವೆಂದು ಮಾತ್ರೆ, ಸಿರಪ್ ಮೊರೆಹೋಗುವುದು ಸರಿಯಲ್ಲ. ನಿದ್ರಾಹೀನತೆ ಅತಿಯಾದರೆ ವೈದ್ಯರನ್ನ ಸಂಪರ್ಕಿಸುವುದು ಸೂಕ್ತ.

5. ಹಗಲಲ್ಲಿ ಕೋಳಿ ನಿದ್ದೆ ಬೇಡ: ರಾತ್ರಿ ವೇಳೆ ನಿದ್ದೆ ಬಾರದ ಹಿನ್ನೆಲೆಯಲ್ಲಿ ಹಲವರು ಹಗಲಿನಲ್ಲಿ ನಿದ್ದೆಗೆ ಜಾರುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಅದರಲ್ಲೂ ಮಧ್ಯಾಹ್ನ ನಿದ್ದೇ ಬೇಡ.

 

click me!