
ಎರಡು ವರ್ಷದ ಕಂದಮ್ಮ, ತನ್ನ ವಯಸ್ಸಿಗೂ ಮೀರಿದ ಮಾನವೀಯತೆ ಕೆಲಸ ಮಾಡಿ ಸೂಪರ್ ಹೀರೋ ಆಗಿದ್ದಾನೆ. ಅಪಾಯದಲ್ಲಿ ಸಿಲುಕಿದ್ದ ತನ್ನ ಸಹೋದರನನ್ನು ರಕ್ಷಿಸಿ ಸೂಪರ್ ಹೀರೋ ಆಗಿದ್ದಾನೆ.
ಈ ಮಕ್ಕಳಿಬ್ಬರು ಅವಳಿ ಮಕ್ಕಳಾಗಿದ್ದು, ಮನೆಯ ಬೆಡ್ ರೂಮ್'ನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ವಾರ್ಡ್ ರೋಬ್ ಅವಳಿ ಮಕ್ಕಳ ಮೇಲೆ ಬಿದ್ದಿದೆ. ಆ ವೇಳೆ ಓರ್ವ ಕಂದಮ್ಮ ವಾರ್ಡ್ ರೋಬ್ ಕೆಳಗೆ ಸಿಲುಕಿಕೊಂಡು ಒದ್ದಾಡುತ್ತಿರುತ್ತಾನೆ. ಸಹೋದರ ಒದ್ದಾಡುತ್ತಿರುವುದನ್ನು ನೋಡಿದ ಕಂದಮ್ಮ, ಆತನನ್ನು ರಕ್ಷಿಸಲು ಹರಸಾಹಸ ಪಡುತ್ತಾನೆ. ಕೊನೆಗೆ ವಾರ್ಡ್ ರೋಬ್'ನ್ನು ಮೇಲೆತ್ತಿ ರಕ್ಷಿಸುತ್ತಾನೆ.
ಎರಡು ವರ್ಷದ ಪುಟ್ಟ ಕಂದಮ್ಮನ ಈ ಸಾಹಸ ಕಾರ್ಯ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.