
- ನಮ್ಮ ದೇಹ ಪ್ರಕೃತಿಗೆ, ಆಯಾ ಋತುಮಾನಕ್ಕೆ ಸರಿಹೊಂದುವ ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಸೇವಿಸುವುದು.
- ನಮ್ಮ ಆಹಾರದಲ್ಲಿ ವ್ಯತ್ಯಾಸ ಆದಂತೆಲ್ಲ ನಮ್ಮ ದೇಹದ ಕ್ರಿಯೆಗಳಲ್ಲಿಯೂ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಅದೇ ರೀತಿ ನಮ್ಮ ಮನಸ್ಸಿನ ಮೇಲೂ ನಮ್ಮ ಆಹಾರ ಪ್ರಭಾವ ಬೀರುತ್ತದೆ ಎಂಬುದು ತಿಳಿದಿರಲಿ.
- ನಮ್ಮ ಮನಸ್ಸಿಗೆ ನಾವು ಕೊಡುವ ಆಹಾರ ಎಂದರೆ ಮನೋರಂಜನೆ, ಓದು, ಚಿಂತನೆಗಳು. ಈ ಎಲ್ಲವೂ ಮನದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ, ಮನಸ್ಸು ದೇಹವನ್ನು ಪ್ರಭಾವಿಸುತ್ತದೆ.
- ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ನಿಯಮಿತವಾದ ವ್ಯಾಯಾಮ, ಯೋಗಾಭ್ಯಾಸಗಳೂ ಬೇಕು. ಜೀವನ ಶೈಲಿಯಲ್ಲೇ ಎಲ್ಲಾ ಇದೆ.
ಉತ್ತಮ ಜೀವನ ಶೈಲಿಯಿಂದ ಗುಣಪಡಿಸಬಹುದಾದ ಆರೋಗ್ಯ ಸಮಸ್ಯೆಗಳು ಯಾವುದು? ಎಲ್ಲವನ್ನೂ ಸರಿಪಡಿಸಬಹುದೇ?
ವರ್ಷಾನುಗಟ್ಟಲೆ ನಾವು ಬದುಕಿದ ಹಾದಿ ಆರೋಗ್ಯ ಹದಗೆಟ್ಟಿರುತ್ತದೆ. ಮತ್ತೆ ಉತ್ತಮ ಬದುಕಿನ ಶೈಲಿಯನ್ನು ಅಳವಡಿಸಿ, ಈಗಾಗಲೇ ಕಳೆದುಕೊಂಡಿರುವುದನ್ನು
ನಮ್ಮದಾಗಿಸಿಕೊಳ್ಳುವಾಗ ಒಂದಷ್ಟು ತಾಳ್ಮೆ ನಮಗಿರಲೇಬೇಕು. ಅಜೀರ್ಣದಿಂದ ಮಧುಮೇಹದ ತನಕ, ಮೈಕೈನೋವಿನಿಂದ ಡಿಸ್ಕ್ ಪ್ರೊಲ್ಯಾಪ್ಸ್ ತನಕ, ಮೈಗ್ರೇನಿನಿಂದ ಅಧಿಕ ರಕ್ತದೊತ್ತಡದ ತನಕ.... ಹೀಗೆ ಸಣ್ಣದೆನಿಸುವ ಸಮಸ್ಯೆಯಿಂದ, ದೊಡ್ಡದಾಗಿ ಕಾಡುವ ಸಮಸ್ಯೆಯವರೆಗೆ ಎಲ್ಲದಕ್ಕೂ ಪರಿಹಾರವಿದೆ. ಆ ಸರಿದಾರಿಯಲ್ಲಿ ನಾವು ನಡೆಯಬೇಕಿದೆ ಉತ್ತಮ ಆರೋಗ್ಯದೆಡೆಗೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.